ಕನ್ನಡ ಚಿತ್ರರಂಗವೇ (Kannada Film Industry) ಹೆಮ್ಮೆ ಪಡುವಂತೆ ಮಾಡಿದ ಚಿತ್ರ ಎಂದರೆ ಕೆಜಿಎಫ್ ಚಾಪ್ಟರ್ 2, (KGF Chapter 2) ಇಡೀ ವಿಶ್ವವೇ ಕನ್ನಡ ಸಿನೆಮಾದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ಈ ಚಿತ್ರ ಹಲವಾರು ದಾಖಲೆಗಳನ್ನು ಧೂಳಿ ಪಟ ಮಾಡಿದೆ. ಭಾರತೀಯ ಚಿತ್ರರಂಗದ (Indian Film Industry) ಎಲ್ಲಾ ದಾಖಲೆಗಳನ್ನೂ (Records) ಕೆಜಿಎಫ್ ಚಾಪ್ಟರ್ 2 ಉಡೀಸ್ ಮಾಡುತ್ತಿದೆ. ಬಾಕ್ಸ್ ಆಫೀಸ್ (Box Office) ಅನ್ನೇ ಶೇಕ್ ಮಾಡಿರುವ ಕೆಜಿಎಫ್ ಚಾಪ್ಟರ್ 2, 1000 ಕೋಟಿ ಕ್ಲಬ್ (1000 Crore Club) ತಲುಪುವ ನಿರೀಕ್ಷೆ ಇದೆ. ಎರಡನೇ ವೀಕೆಂಡ್ನಲ್ಲಿ 'ಕೆಜಿಎಫ್ 2' ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಕೆಜಿಎಫ್ 3 (KGF Chapter 3) ಬರುತ್ತೆ ಅನ್ನುವ ಸುಳಿವನ್ನು ಕೆಜಿಎಫ್ 2 ಸಿನಿಮಾದಲ್ಲಿ ತೋರಿಸಲಾಗಿದೆ. ಕೆಜಿಎಫ್ ಚಾಪ್ಟರ್ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಹೇಳಿಕೊಂಡಿಲ್ಲ.
ಕೆಜಿಎಫ್ 2 ಸುಳಿವು ಕೊಟ್ಟ ರಾಕಿ ಭಾಯ್!
ಸಿನಿಪ್ರಿಯರ ಮನಸ್ಸಿನಲ್ಲಿ 'ಕೆಜಿಎಫ್ ಚಾಪ್ಟರ್ 3' ನೂ ಬರುತ್ತಾ? ಅನ್ನುವ ಪ್ರಶ್ನೆ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಎದ್ದಿದೆ. ಚಿತ್ರತಂಡ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಯಶ್ ಸಿನಿಮಾ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದಾರೆ. 'ಕೆಜಿಎಫ್ 2' ಕ್ಲೈಮ್ಯಾಕ್ಸ್ ಮುಗಿದ ಬಳಿಕ ಕೂಡಲೇ 'ಕೆಜಿಎಫ್ 3' ಬಗ್ಗೆ ಚಿತ್ರತಂಡ ಸುಳಿವು ನೀಡಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದರೂ, ಚಿತ್ರತಂಡ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸ್ವತ: ಯಶ್ 'ಕೆಜಿಎಫ್ 3' ಬಗ್ಗೆ ಹಿಂಟ್ ಕೊಟ್ಟಿದ್ದಾರೆ.
ಇನ್ನೂ ಭರ್ಜರಿ ದೃಶ್ಯಗಳಿರುತ್ತೆ ಎಂದ ಯಶ್!
ಅಂತರಾಷ್ಟ್ರೀಯ ನ್ಯೂಸ್ ಪೋರ್ಟ್ಲ್ಗೆ ಯಶ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್ ಚಾಪ್ಟರ್ 3 ಬರುತ್ತಾ? ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ರಾಕಿ "ಈಗಾಗಲೇ ನಾನು ಹಾಗೂ ಪ್ರಶಾಂತ್ ಇಬ್ಬರೂ ಹಲವು ದೃಶ್ಯಗಳ ಬಗ್ಗೆ ಚರ್ಚಿಸಿದ್ದೇವೆ. 'ಚಾಪ್ಟರ್ 2'ನಲ್ಲಿ ನಾವು ಇನ್ನೂ ಸಾಕಷ್ಟು ವಿಷಯಗಳನ್ನು ಹೇಳುವುದಿತ್ತು. 'ಚಾಪ್ಟರ್ 3' ನಿರ್ಮಿಸಲು ಹಲವು ಸಾಧ್ಯಗಳಿವೆ ಎಂಬುದು ನಮಗೆ ಗೊತ್ತಿದೆ. ಕಿಕ್ ಕೊಡುವಂತಹ ಸಾಕಷ್ಟು ಸೀನ್ಗಳು ಇನ್ನೂ ಇವೆ. ಆದರೆ ಇದು ಕೇವಲ ಒಂದು ಐಡಿಯಾ ಅಷ್ಟೇ" ಎಂದು ಯಶ್ ಹೇಳಿದ್ದಾರೆ.
ಇದನ್ನೂ ಓದಿ: ಹೊಂಬಾಳೆ ಬ್ಯಾನರ್ನ ಮತ್ತೊಂದು ಹೊಸ ಸಿನಿಮಾ ಅನೌನ್ಸ್, ಚಿಕ್ಕಪ್ಪನಿಗೆ ಮಾಡಿದ್ದ ಕಥೆಯಲ್ಲಿ ಯುವ ರಾಜ್ಕುಮಾರ್!
ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು?
ಹೌದು, ಕೆಜಿಎಫ್ 2 ಇಡೀ ವಿಶ್ವದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ಇದರ ಜೊತೆಗೆ ಯಶ್ ಅವರ ಮುಂದಿನ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ರಾಕಿ ಭಾಯ್ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆಯೂ ಈ ಸುದ್ದಿ ಹೆಚ್ಚು ಸೌಂಡ್ ಮಾಡಿತ್ತು. ಬಳಿಕ ಇದು ಫೇಕ್ ನ್ಯೂಸ್ ಅಂತ ಹೇಳಲಾಗಿತ್ತು. ಆದರೆ, ಈಗ ಮತ್ತೆ ಈ ಸುದ್ದಿ ಚಾಲ್ತಿಯಲ್ಲಿದೆ. ಈ ನಿರ್ದೇಶಕನ ಜೊತೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಅಂತ ಸ್ಯಾಂಡಲ್ವುಡ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಪ್ಪು ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ನಮ್ರತಾ ಗೌಡ
ಯಶ್ ಮುಂದಿನ ಸಿನಿಮಾ ನರ್ತನ್ ಆ್ಯಕ್ಷನ್ ಕಟ್?
ಹೌದು, ಮಫ್ತಿ ಸಿನಿಮಾದ ನಿರ್ದೇಶಕ ಹಾಗೂ ಕೆಲ ಸಿನಿಮಾಗಳಿಗೆ ರೈಟರ್ ಆಗಿ ಕೆಲಸ ಮಾಡಿದ್ದ ನರ್ತನ್, ಯಶ್ ಅವರ ಮುಂದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಖಚಿತವಾಗಿದೆ. ಇನ್ನೂ ಯಶ್ಗಾಗಿಯೇ ಆ್ಯಕ್ಷನ್ ಕಮ್ ಲವ್ ಸ್ಟೋರಿವೊಂದನ್ನು ನರ್ತನ್ ರೆಡಿಮಾಡಿಕೊಂಡಿದ್ದಾರಂತೆ. ಯಶ್ ಜೊತೆ ಕೂಡ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಯಶ್ ಅವರಿಗೂ ಈ ಕಥೆ ಇಷ್ಟವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ