ರಾಕ್​ಲೈನ್ ಮೊಮ್ಮಗಳ ಧ್ವನಿಯಲ್ಲಿ ಕೃಷ್ಣಾರಾಧನೆ; ವಿಡಿಯೋ ವೈರಲ್​​

ಶರಯೂ-ರಾಕ್​​​ಲೈನ್ ವೆಂಕಟೇಶ್

ಶರಯೂ-ರಾಕ್​​​ಲೈನ್ ವೆಂಕಟೇಶ್

ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾಳೆ. ಅನುಪಮಾ ರಚಿಸಿ ಸಂಗೀತ ಸಂಯೋಜಿಸಿದ್ದ ಮೂಲ ಹಾಡಿಗೆ ಈಗ ಶರಯೂ ಧ್ವನಿ ನೀಡಿರುವುದು ಮಾತ್ರವಲ್ಲದೆ, ದೃಶ್ಯರೂಪಕದಲ್ಲೂ ಭಾಗಿಯಾಗಿದ್ದಾಳೆ.

  • Share this:

ರಾಕ್​​​ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಪಕರಾಗಿ, ನಟನಾಗಿ ಭಾರತದಾದ್ಯಂತ ಹೆಸರು ಮಾಡಿದ್ದಾರೆ. ಅವರ ಪುತ್ರ ಯತೀಶ್ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಈಗ ಯತೀಶ್ ಅವರ ಪುತ್ರಿ ಶರಯೂ ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ.


ʻಕೃಷ್ಣ ಜನಾರ್ದನʼ ಹಾಡಿನ ರಿಮಿಕ್ಸ್ ಹಾಡಿಗೆ ಶರಯೂ ಧ್ವನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯಿಸುವ ಕೃಷ್ಣ ಜನಾರ್ದನ ಹಾಡು ಸುಶ್ರಾವ್ಯವಾಗಿ ಮೂಡಿಬಂದಿದೆ.


ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾಳೆ. ಅನುಪಮಾ ರಚಿಸಿ ಸಂಗೀತ ಸಂಯೋಜಿಸಿದ್ದ ಮೂಲ ಹಾಡಿಗೆ ಈಗ ಶರಯೂ ಧ್ವನಿ ನೀಡಿರುವುದು ಮಾತ್ರವಲ್ಲದೆ, ದೃಶ್ಯರೂಪಕದಲ್ಲೂ ಭಾಗಿಯಾಗಿದ್ದಾಳೆ. ಶ್ರೀ ಕೃಷ್ಣನನ್ನು ಪೂಜಿಸುವ ಹಾಡಿನೊಂದಿಗೆ ಶರಯೂ ಭಾವಾಭಿವ್ಯಕ್ತಿ ಕೂಡಾ ಇಲ್ಲಿ ಅನಾವರಣಗೊಂಡಿದೆ.ಸ್ಯಾಮ್ ಪ್ರೋಗ್ರಾಮಿಂಗ್​​ನೊಂದಿಗೆ ಸಂಭ್ರಮ್ ಸ್ಟುಡಿಯೋದಲ್ಲಿ ಈ ಹಾಡಿಗೆ ರೀರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ಮಾಡಲಾಗಿದೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ, ಸಿಂಧೂರಿ ಯತೀಶ್ ಕ್ರಿಯೆಟಿವ್​ ಹೆಡ್ ಹಾಗೂ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಶರಯೂ ವೈ ಯ್ಯೂಟೂಬ್ ಚಾನೆಲ್​​ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

Published by:Harshith AS
First published: