ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ (Rocking Star Yash Birthday) ಕ್ಕೆ ದಿನಗಣನೆ ಶುರುವಾಗಿದೆ. ಕೋಟ್ಯಂತರ ಅಭಿಮಾನಿಗಳು (Fans) ರಾಕಿ ಭಾಯ್ (Raki Bhai) ಬರ್ತ್ಡೇಯನ್ನು ದೊಡ್ಡದಾಗಿ ಸಂಭ್ರಮಿಸೋಕೆ ಸಜ್ಜಾಗುತ್ತಿದ್ದಾರೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ಪತ್ರ (Letter) ವೊಂದನ್ನು ಬರೆದಿದ್ದಾರೆ. ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗೋದಿಲ್ಲ. ಯಶ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಕೂಡ ಇಲ್ಲ. ಯಶ್ ಬರ್ತ್ಡೇಗೆ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳು ಮತ್ತಷ್ಟು ದಿನ ಕಾಯಲೇಬೇಕು.
ಅಭಿಮಾನಿಗಳಿಗೆ ಪತ್ರ ಬರೆದ ಯಶ್!
'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ. ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಬಿಸೋಕೆ ಶುರು ಮಾಡಿದ್ದೀರಿ' ಎಂದು ಯಶ್ ಬರೆದುಕೊಂಡಿದ್ದಾರೆ.
View this post on Instagram
ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟಹಬ್ಬದ ನಿಮ್ಮ ಉಡುಗೊರೆ. ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ. ಇನ್ನಷ್ಟು ಸಮಯ ಕೊಡಿ, ವಿಭಿನ್ನವಾಗಿರೋದನ್ನ ನಿಮ್ಮ ಮುಂದೆ ತರಲು ಶ್ರದ್ದೆಯಿಂದ ಕೆಲಸ ಮಾಡುತ್ತೇನೆ ಎಂದು ರಾಕಿ ಭಾಯ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಮತ್ತೆ ರಿಲೀಸ್ ಆಗ್ತಿದೆ ಯಶ್-ರಾಧಿಕಾ ಅಭಿನಯದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ
ರಾಕಿ ಭಾಯ್ ಎಂಟ್ರಿನೇ ಧಮಾಕ!
2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸ್ ಆಫೀಸ್ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು. ಇದಾದ ಬಳಿಕ ‘ಕೆಜಿಎಫ್ ಚಾಪ್ಟರ್ 1’ 2018 ಡಿಸೆಂಬರ್ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಯಶ್ ಮಿಂಚಿದರು. ಇನ್ನೂ ಕೆಜಿಎಫ್ 2 ಸಿನಿಮಾ 1400 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದು ಇತಿಹಾಸ.
ಇದನ್ನೂ ಓದಿ: ಯಶ್ ಮಿಸ್ಟರ್ ಶೋ ಆಫ್ ಎಂದಿದ್ದ ರಶ್ಮಿಕಾಗೀಗ ರಾಕಿ ಭಾಯ್ ಜೊತೆ ನಟಿಸುವ ಆಸೆಯಂತೆ!
ಬಾಲಿವುಡ್ ಮಂದಿಗೂ ರಾಕಿ ಭಾಯ್ ಅಂದ್ರೆ ಅಚ್ಚುಮೆಚ್ಚು!
ಕೇವಲ ರಾಕಿಭಾಯ್ ಹೆಸರು ಕೇಳಿದ್ರೇನೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್ ಅವರ ರೇಂಜ್ ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ. ‘ರಾಜಧಾನಿ’ಯಲ್ಲಿ ‘ರಾಜಾಹುಲಿ’ ಇವರು.. ‘ಕಳ್ಳರ ಸಂತೆ’ಯಲ್ಲಿ ‘ಕಿರಾತಕ’.. ಅಭಿಮಾನಿಗಳ ಪ್ರೀತಿಯಲ್ಲಿ ಅಣ್ತಮ್ಮ ಇವರು..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ