SIIMA Awards: ಸೈಮಾದಲ್ಲಿ ಕೆಜಿಎಫ್​ ಸಿನಿಮಾಗೆ 4 ಪ್ರಶಸ್ತಿ, ರಾಕಿಂಗ್ ಸ್ಟಾರ್​ ಯಶ್​ ಅತ್ಯುತ್ತಮ ನಟ; ಇಲ್ಲಿದೆ ಪೂರ್ತಿ ವಿವರ...

SIIMA Awards 2019: ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ತೆರೆಕಂಡಿದ್ದ ಕೆಜಿಎಫ್​ ಸಿನಿಮಾ ಬಾಕ್ಸಾಫೀಸ್​ ಲೂಟಿ ಮಾಡಿತ್ತು. ಇದೀಗ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ 4 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಅತ್ಯುತ್ತಮ ನಟ, ನಿರ್ದೇಶಕ, ಪೋಷಕ ನಟಿ, ಸಂಕಲನ ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ.

Sushma Chakre | news18
Updated:August 16, 2019, 2:41 PM IST
SIIMA Awards: ಸೈಮಾದಲ್ಲಿ ಕೆಜಿಎಫ್​ ಸಿನಿಮಾಗೆ 4 ಪ್ರಶಸ್ತಿ, ರಾಕಿಂಗ್ ಸ್ಟಾರ್​ ಯಶ್​ ಅತ್ಯುತ್ತಮ ನಟ; ಇಲ್ಲಿದೆ ಪೂರ್ತಿ ವಿವರ...
ರಾಕಿಂಗ್ ಸ್ಟಾರ್ ಯಶ್
 • News18
 • Last Updated: August 16, 2019, 2:41 PM IST
 • Share this:
 ಕತಾರ್​ನಲ್ಲಿ ನಡೆಯುತ್ತಿರುವ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೊರಬಿದ್ದಿದೆ. ಸ್ಯಾಂಡಲ್​ವುಡ್​ನ ಅತ್ಯುತ್ತಮ ನಾಯಕನಾಗಿ 'ಕೆಜಿಎಫ್' ಸಿನಿಮಾದ​ ಅಭಿನಯಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹೊರಹೊಮ್ಮುವ ಮೂಲಕ ಮತ್ತೊಮ್ಮೆ ಕಪ್ಪು ಸುಂದರಿಯನ್ನು ಎತ್ತಿಹಿಡಿದಿದ್ದಾರೆ. ತೆಲುಗು ಚಿತ್ರರಂಗದಲ್ಲಿ 'ರಂಗಸ್ಥಳಂ' ಸಿನಿಮಾದ ನಟನೆಗಾಗಿ ರಾಮ್ ಚರಣ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ.

ಕಳೆದ ವಾರ ಪ್ರಕಟವಾಗಿದ್ದ ನ್ಯಾಷನಲ್​ ಅವಾರ್ಡ್​ನಲ್ಲೂ 'ಕೆಜಿಎಫ್'​ ಸಿನಿಮಾ 2 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ತೆರೆಕಂಡಿದ್ದ 'ಕೆಜಿಎಫ್'​ ಸಿನಿಮಾ ಬಾಕ್ಸಾಫೀಸ್​ ಲೂಟಿ ಮಾಡಿತ್ತು. ಇದೀಗ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ 4 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಅತ್ಯುತ್ತಮ ನಟ, ನಿರ್ದೇಶಕ, ಪೋಷಕ ನಟಿ, ಸಂಕಲನ ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ.

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ; ಶ್ರುತಿ ಹರಿಹರನ್ ನಟನೆಯ ನಾತಿಚರಾಮಿಗೆ ಸಿಕ್ಕ ಪ್ರಶಸ್ತಿಗಳು ವಾಪಾಸ್?

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸದ್ದು ಮಾಡಿದ್ದ ವಿಜಯ್ ದೇವಕೊಂಡ ಅವರಿಗೆ 'ಗೀತಗೋವಿಂದಂ' ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ (ವಿಮರ್ಶಾತ್ಮಕ) ಪ್ರಶಸ್ತಿ ದಕ್ಕಿದೆ. 'ಮಹಾನಟಿ' ಸಿನಿಮಾದ ಅದ್ಭುತ ನಟನೆಗಾಗಿ ಕೀರ್ತಿ ಸುರೇಶ್ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. 'ರಂಗಸ್ಥಳಂ' ಸಿನಿಮಾ ಟಾಲಿವುಡ್​ ವಿಭಾಗದಲ್ಲಿ 7 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕನ್ನಡದ ಬೇರೆ ಯಾವ ವಿಭಾಗಗಳಲ್ಲಿ ಯಾರಿಗೆ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ...

SIIMA Award yash
ಸೈಮಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಯಶ್


 • ಅತ್ಯುತ್ತಮ ನಟ- ಯಶ್​ (ಕೆಜಿಎಫ್​ ಭಾಗ 1)
 • ಅತ್ಯುತ್ತಮ ನಿರ್ದೇಶಕ- ಪ್ರಶಾಂತ್ ನೀಲ್ (ಕೆಜಿಎಫ್​ ಭಾಗ 1)

 • ಅತ್ಯುತ್ತಮ ಹಾಸ್ಯನಟ- ಪ್ರಕಾಶ್ ತುಮಿನಾಡ್​ (ಸ.ಹಿ.ಪ್ರಾ. ಶಾಲೆ ಕಾಸರಗೋಡು)

 • ಅತ್ಯುತ್ತಮ ವಿಲನ್: ಧನಂಜಯ (ಟಗರು)

 • ಅತ್ಯುತ್ತಮ ಪೋಷಕ ನಟಿ- ಅರ್ಚನಾ ಜೋಯಿಸ್ (ಕೆಜಿಎಫ್​ ಭಾಗ 1)

 • ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಮಹೇಶ್ ಕುಮಾರ್ (ಅಯೋಗ್ಯ)

 • ಅತ್ಯುತ್ತಮ ಚೊಚ್ಚಲ ನಟಿ - ಅನುಪಮಾ ಗೌಡ (ಆ ಕರಾಳ ರಾತ್ರಿ)

 • ಅತ್ಯುತ್ತಮ ಸಂಕಲನಕಾರ- ಭುವನ್ ಗೌಡ (ಕೆಜಿಎಫ್​ ಭಾಗ 1)

 • ಅತ್ಯುತ್ತಮ ಸಾಹಿತ್ಯ; ಚೇತನ್ ಕುಮಾರ್ (ಅಯೋಗ್ಯ- ಏನಮ್ಮಿ ಏನಮ್ಮಿ)

 • ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನನ್ಯ ಭಟ್ (ಟಗರು- ಹೋಲ್ಡ್​ ಆನ್​ ಹೋಲ್ಡ್​ ಆನ್​)


ಕೆ.ಜಿ.ಎಫ್ ಕಲೆಕ್ಷನ್ ದಾಖಲೆ ಮುರಿದು ಮುನ್ನುಗ್ಗಲಿದೆ ಕುರುಕ್ಷೇತ್ರ?

ನಿನ್ನೆ ರಾತ್ರಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಯಾಂಡಲ್​ವುಡ್​ ತಾರೆಗಳಾದ ಯಶ್​, ಶರ್ಮಿಳಾ ಮಾಂಡ್ರೆ, ಸಾಯಿಕುಮಾರ್, ಅನುಪಮಾ ಗೌಡ, ರಚಿತಾ ರಾಮ್, ಸಿಮ್ರಾನ್, ಮಾನ್ವಿತಾ ಹರೀಶ್, ಸಾನ್ವಿ ಶ್ರೀವಾತ್ಸವ್, ಡ್ಯಾನಿಶ್​ ಸೇಠ್, ತೇಜಸ್ವಿನಿ ಪ್ರಕಾಶ್, ಅದ್ವಿತಿ ಶೆಟ್ಟಿ, ನಿಧಿ ಸುಬ್ಬಯ್ಯ, ಆಶಿಕಾ ರಂಗನಾಥ್​ ಮುಂತಾದ ಸ್ಟಾರ್​ಗಳು ಭಾಗವಹಿಸಿದ್ದರು.

ಕಾಲಿವುಡ್ ನಟರಾದ ವಿಜಯ್ ದೇವರಕೊಂಡ, ರಾಧಿಕಾ ಶರತ್ ಕುಮಾರ್, ಶ್ರೀಯಾ ಶರಣ್, ಚಿರಂಜೀವಿ, ಅಲ್ಲು ಅರವಿಂದ್, ರಾಮಚರಣ್, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ನಿಧಿ ಅಗರ್​ವಾಲ್ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇಂದು ರಾತ್ರಿ ಕೂಡ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಬೇರೆ ಭಾಷೆಯ ಚಿತ್ರರಂಗದ ಪ್ರಶಸ್ತಿಗಳನ್ನು ಘೋಷಿಸಲಾಗುವುದು.
First published: August 16, 2019, 1:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading