• Home
  • »
  • News
  • »
  • entertainment
  • »
  • Kantara-Sapthami Gowda: ಕಾಂತಾರ ಬೆಡಗಿಗೆ ರಾಕಿಂಗ್ ಸ್ಟಾರ್ ವಿಶ್! ನ್ಯೂಸ್18 ಕನ್ನಡ ಡಿಜಿಟಲ್​ ಜೊತೆ ಲೀಲಾ ಮಾತುಗಳು

Kantara-Sapthami Gowda: ಕಾಂತಾರ ಬೆಡಗಿಗೆ ರಾಕಿಂಗ್ ಸ್ಟಾರ್ ವಿಶ್! ನ್ಯೂಸ್18 ಕನ್ನಡ ಡಿಜಿಟಲ್​ ಜೊತೆ ಲೀಲಾ ಮಾತುಗಳು

ಕಾಂತಾರ ಲೀಲಾಗೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್

ಕಾಂತಾರ ಲೀಲಾಗೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್

ಕೆಜಿಎಫ್ ಚಿತ್ರದ ರಾಕಿಂಗ್ ಸ್ಟಾರ್ ಯಶ್ ಕೂಡ ಸಪ್ತಮಿಗೆ ಶುಭ ಕೋರಿದ್ದಾರೆ. ನಿಮ್ಮ ಸಿನಿಮಾದ ಗೆಲುವು ಖುಷಿ ತಂದಿದೆ. ನಮ್ಮ ಕನ್ನಡದ ಹುಡುಗಿ ಬೆಳೆಯುತ್ತಿದ್ದಾಳೆ ಅನ್ನೋದೇ ಸಂತೋಷದ ಸಂಗತಿ ಎಂದು ಶುಭ ಹಾರೈಸಿದ್ದಾರೆ ರಾಕಿಂಗ್ ಸ್ಟಾರ್.

  • News18 Kannada
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಸಿನಿಮಾ (Super Hit Kantara) ಸೂಪರ್ ಹಿಟ್ ಆಗಿದೆ. ಇದೇ ಖುಷಿಯಲ್ಲಿ ಇಡೀ ಸಿನಿಮಾ ತಂಡ ಇದೆ. ಚಿತ್ರದ ನಾಯಕಿ ಲೀಲಾ ಪಾತ್ರಧಾರಿ ಸಪ್ತಮಿ (Sapthami Gowda) ಗೌಡ ಕೂಡ ಫುಲ್ ಖುಷ್ ಆಗಿದ್ದಾರೆ. ತಮ್ಮ ಕೆಲಸವನ್ನ ನೋಡಿ ಸ್ಟಾರ್​​ಗಳೆಲ್ಲ ಶುಭ ಕೋರಿದ್ದಕ್ಕೆ ಡಬಲ್ ಟ್ರಿಪಲ್ ಸಂತೋಷದಲ್ಲಿಯೇ ಇದ್ದಾರೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮೆಚ್ಚುಗೆಯ ಮಾತುಗಳು ಸಪ್ತಮಿ ಕಿವಿಯಲ್ಲಿ ಗುನುಗುತ್ತಿವೆ. ತಮಿಳು ನಟ ಸೂರ್ಯ ವಿಶ್ ಮಾಡಿರೋದಕ್ಕೂ ಸಪ್ತಮಿ ಫುಲ್ ಥ್ರಿಲ್ ಆಗಿದ್ದಾರೆ. ಸುಮಲತಾ ಅಂಬರೀಶ್ "GOOD JOB" ಅಂತ ಹೇಳಿರೋದು ಇನ್ನೂ ಮನಸ್ಸಿನಲ್ಲಿ ಹಾಗೆ ಇದೆ. ಇಷ್ಟೆಲ್ಲ ಖುಷಿ ಇಷ್ಟೆಲ್ಲ ಸಂತೋಷದ ಮಧ್ಯ ನ್ಯೂಸ್-18 ಕನ್ನಡ ಡಿಜಿಟಲ್​ಗೂ ಸಪ್ತಮಿ ಗೌಡ ಮನದ ಮಾತುಗಳನ್ನ ಹಂಚಿಕೊಂಡಿದ್ದಾರೆ.


ಕಾಂತಾರ ಲೀಲಾಗೆ ಶುಭ ಕೋರಿದ ರಾಕಿಂಗ್ ಸ್ಟಾರ್ ಯಶ್


ಕಾಂತಾರ ಸಿನಿಮಾದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅದ್ಭುತ ಅಭಿನಯದ ಬಗ್ಗೆ ಕೊಂಡಾಡುತ್ತಿದ್ದಾರೆ. ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಕೆಲಸದ ಬಗ್ಗೆನು ಒಳ್ಳೆ ಮಾತುಗಳೇ ಕೇಳಿ ಬರುತ್ತಿದೆ.


ಇದರ ಮಧ್ಯೆ ಸಪ್ತಮಿ ಗೌಡ ನಿನ್ನೆ ಪುನೀತ್ ಪರ್ವ ಕಾರ್ಯಕ್ರಮಕ್ಕೂ ಬಂದಿದ್ದರು. ಅಲ್ಲಿಯೇ ಸ್ಟಾರ್​​ಗಳ ಮಧ್ಯ ಕುಳಿತ ಕಾಂತಾರ ಚಿತ್ರದ ಲೀಲಾ ಪಾತ್ರಧಾರಿ ಸಪ್ತಮಿಗೆ ಅನೇಕರು ಶುಭ ಕೋರಿದರು.




ಕೆಜಿಎಫ್ ಚಿತ್ರದ ರಾಕಿಂಗ್ ಸ್ಟಾರ್ ಯಶ್ ಕೂಡ ಸಪ್ತಮಿಗೆ ಶುಭ ಕೋರಿದರು. ನಿಮ್ಮ ಸಿನಿಮಾದ ಗೆಲುವು ಖುಷಿ ತಂದಿದೆ. ನಮ್ಮ ಕನ್ನಡದ ಹುಡುಗಿ ಬೆಳೆಯುತ್ತಿದ್ದಾಳೆ ಅನ್ನೋದೇ ಸಂತೋಷದ ಸಂಗತಿ ಅಂತಲೇ ಯಶ್, ಸಪ್ತಮಿಗೆ ಹೇಳಿದರು.


ರಾಧಿಕಾ ಪಂಡಿತ್ ಕೂಡ ಸಪ್ತಮಿಗೆ ಒಳ್ಳೆ ಕೆಲಸ ಮಾಡಿದ್ದೀರಿ ಗುಡ್ ಲಕ್ ಅಂತಲೇ ತಿಳಿಸಿದರು.


Rocking Star Yash Wish Kantara Film Actress Sapthami Gowda
ಕಾಂತಾರ ಬೆಡಗಿಗೆ ಶುಭ ಹಾರೈಸಿದ ತಮಿಳು ನಟ ಸೂರ್ಯ


ಕಾಂತಾರ ಬೆಡಗಿಗೆ ಶುಭ ಹಾರೈಸಿದ ತಮಿಳು ನಟ ಸೂರ್ಯ


ಕಾಂತಾರ ಸಿನಿಮಾ ಕೇವಲ ಕನ್ನಡದಲ್ಲಿ ಬಂದಿದ್ದರೇ, ಇಲ್ಲಿಗೆ ಮಾತ್ರ ಉಳಿದು ಬಿಡುತ್ತಿತ್ತು. ಆದರೆ ಹೊಂಬಾಳೆ ಪ್ರೋಡಕ್ಷನ್ ಹೌಸ್, ಈ ಚಿತ್ರವನ್ನ ಬೇರೆ ಭಾಷೆಗೂ ಡಬ್​ ಮಾಡಿ ರಿಲೀಸ್ ಮಾಡಿತು. ಇದರಿಂದ ಕನ್ನಡದ ಕಾಂತಾರ ಚಿತ್ರದ ಖ್ಯಾತಿ ಎಲ್ಲೆಡೆ ಹೋಯಿತು. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದ ಕಾಂತಾರವನ್ನ ನಟ ಸೂರ್ಯ ನೋಡಿದ್ದಾರೆ.


ಇದನ್ನೂ ಓದಿ: Kantara| Veerendra Heggade: ಕಾಂತಾರ ವೀಕ್ಷಿಸಿದ ಧರ್ಮಾಧಿಕಾರಿಗಳು; ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ


ಅದಕ್ಕೇನೆ ಸಪ್ತಮಿ ಗೌಡರನ್ನ ಕಂಡ ಕೂಡಲೇ, ನಟ ಸೂರ್ಯ ವಿಶ್ ಮಾಡಿದ್ದಾರೆ. "ನಾನು ನಿಮ್ಮ ಸಿನಿಮಾ ನೋಡಿದ್ದೇನೆ ಕಾಂಗ್ರಾಟ್ಸ್" ಅಂತಲೇ ಸಪ್ತಮಿ ಗೌಡಗೆ ನಟ ಸೂರ್ಯ ತಿಳಿಸಿದ್ದಾರೆ.


ಗುಡ್ ಜಾಬ್ ಎಂದ ಸುಮಲತಾ ಅಂಬರೀಶ್


ಕಾಂತಾರ ಸಿನಿಮಾ ಕ್ರಾಂತಿಯನ್ನೇ ಮಾಡಿದೆ. ಇದರಿಂದ ಮೊದಲ ಚಿತ್ರದಲ್ಲಿಯೇ ಎಲ್ಲ ಸೆಲೆಬ್ರಿಟಿಗೂ ಪರಿಚಯವಾದ ನಟಿ ಸಪ್ತಮಿ ಗೌಡರನ್ನ ಎಲ್ಲರೂ ಕೊಂಡಾಡಿದ್ದಾರೆ. ನಟಿ ಸುಮಲತಾ ಅಂಬರೀಶ್ ಕೂಡ ಕಾಂತಾರ ಚಿತ್ರದ ನಟಿಯನ್ನ ಶುಭ ಕೋರಿದ್ದಾರೆ. ಗುಡ್ ಜಾಬ್ ಅಂತಲೂ ಹೇಳಿ ಪ್ರೊತ್ಸಾಹಿಸಿದ್ದಾರೆ.


ಸಪ್ತಮಿ ಹುಡುಕಿಕೊಂಡು ಬರ್ತಿವೆ ಆಫರ್ಸ್


ಕಾಂತಾರ ಸಿನಿಮಾದ ಕ್ರೇಜ್ ಇನ್ನೂ ಇದೆ. ಹೆಚ್ಚು ಕಡಿಮೆ ಒಂದು ತಿಂಗಳೇ ಆಗ್ತಾ ಬಂತು. ಸಿನಿಮಾ ಕ್ರೇಜ್ ನಿಲ್ತಾನೇ ಇಲ್ಲ. ಇಂತಹ ಸಮಯದಲ್ಲಿಯೇ ಸಪ್ತಮಿ ಗೌಡರನ್ನ ಹುಡುಕಿಕೊಂಡು ಸಿನಿಮಾಗಳ ಆಫರ್ ಬರ್ತಾ ಇವೆ. ಆದರೆ ಇನ್ನೂ ಯಾವುದೇ ಸಿನಿಮಾವನ್ನು ಸಪ್ತಮಿ ಒಪ್ಪಿಕೊಂಡಿಲ್ಲ ಅಷ್ಟೆ.


Rocking Star Yash Wish Kantara Film Actress Sapthami Gowda
ಸಪ್ತಮಿ ಹುಡುಕಿಕೊಂಡು ಬರ್ತಿವೆ ಆಫರ್ಸ್


ಕಾಂತಾರ ಸಿನಿಮಾ ಮೊನ್ನೆಯಷ್ಟೆ ಮಲೆಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ಹಾಗೇನೆ ಕಾಂತಾರದ ಕೆಲಸ ಇನ್ನೂ ಬಾಕಿ ಇದೆ. ಹಾಗಾಗಿಯೇ ಮುಂದಿನ ಒಂದೂವರೆ ತಿಂಗಳು ಯಾವುದೇ ಬೇರೆ ಕೆಲಸ ಮಾಡೋಕೆ ಸಾಧ್ಯ ಆಗೋದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನೂ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ಸಪ್ತಮಿ ಗೌಡ ಹೇಳುತ್ತಾರೆ.


ಕ್ಲಾಸಿಕ್ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆ


ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡರಿಗೆ ಒಳ್ಳೆ ಕಥೆ ಮಾಡುವ ಆಸೆ ಇದೆ. ಅತ್ಯುತ್ತಮ ಪಾತ್ರವನ್ನು ಮಾಡ್ಬೇಕು ಅನ್ನೋ ಮಹದಾಸೆನೂ ಇದೆ. ಇದರ ಮಧ್ಯ ಮುಂದಿನ ದಿನಗಳಲ್ಲಿ ಕ್ಲಾಸಿಕ್ ಲವ್ ಸ್ಟೋರಿ ಇರೋ ಸಿನಿಮಾದಲ್ಲಿ ವರ್ಕ್ ಮಾಡಬೇಕು ಅನ್ನೋ ಆಸೆನೂ ಇದೆ ಅಂತಲೇ ಸಪ್ತಮಿ ಗೌಡ ಹೇಳಿದ್ದಾರೆ.


ಇದನ್ನೂ ಓದಿ: Kantara in Indonesia: ಇಂಡೋನೇಷ್ಯಾದಲ್ಲಿ ಇಂದು ಕಾಂತಾರ ರಿಲೀಸ್! ವಿಯಟ್ನಾಂನಲ್ಲೂ ರಿಷಬ್ ಸಿನಿಮಾ ಮೋಡಿ


ಕಾಂತಾರ ಮೂಲಕ ಕನ್ನಡದಲ್ಲಿ ಹೊಸ ಭರವಸೆ ಮೂಡಿಸಿರೋ ಯುವ ನಟಿ ಸಪ್ತಮಿ ಗೌಡ, ಸದ್ಯಕ್ಕೆ ಕಾಂತಾರ ಸಿನಿಮಾದ ಪ್ರಮೋಷನ್​ನಲ್ಲಿಯೇ ಬ್ಯುಸಿ ಇದ್ದಾರೆ. ಇತರ ಸಿನಿಮಾಗಳ ಕಥೆಯನ್ನೂ ಕೇಳುತ್ತಿದ್ದಾರೆ.


ಕಾಂತಾರ ಕಥೆ ತಲೆಯಲ್ಲಿಟ್ಟುಕೊಂಡು ಬೇರೆ ಕಥೆ ಕೇಳ್ತಿಲ್ಲ


ಸಪ್ತಮಿ ಗೌಡ ಮೊದಲ ಸಿನಿಮಾದ ಸಕ್ಸಸ್ ಗುಂಗಿನಲ್ಲಿ ಇಲ್ಲ ಬಿಡಿ. ಪ್ರ್ಯಾಕ್ಟಿಕಲ್ ಆಗಿಯೇ ಇದ್ದಾರೆ. ಕಾಂತಾರ ಸಿನಿಮಾ ಬೇರೆ. ಇದನ್ನ ತಲೆಯಲ್ಲಿಟ್ಟುಕೊಂಡು ಬೇರೆ ಕಥೆ ಕೇಳಿದ್ರೆ ತಪ್ಪಾಗುತ್ತದೆ.


ಆಯಾ ಕಥೆಗೆ ಅದರದ್ದೇ ಶಕ್ತಿ ಇರುತ್ತದೆ. ಅದನ್ನ ಕೇಳಿಯೇ ಮುಂದಿನ ಸಿನಿಮಾ ಒಪ್ಪಿಕೊಳ್ಳುವೇ ಅನ್ನೋ ಅರ್ಥದಲ್ಲಿಯೇ ಮಾತನಾಡೋ ಸಪ್ತಮಿ, ಕ್ಲಾಸಿಕ್ ಲವ್ ಸ್ಟೋರಿಯೊಂದು ತಮ್ಮನ್ನ ಹುಡುಕಿಕೊಂಡು ಬರಬಹುದು ಎಂಬ ನಿರೀಕ್ಷೆಯಲ್ಲೂ ಇದ್ದಾರೆ.

First published: