ಕೆಜಿಎಫ್ 2 ಬಳಿಕ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಯಾವ ಸಿನಿಮಾ ಮಾಡ್ತಾರೆ ಎಂಬುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಅವರ ಯಾವುದೇ ಚಿತ್ರ ಅನೌನ್ಸ್ ಆಗಿಲ್ಲ. ಅಭಿಮಾನಿಗಳಂತೂ (Fans) ಯಾವಾಗ ರಾಕಿಭಾಯ್ (Rocky Bhai) ಹೊಸ ಸಿನಿಮಾದ ಬಗ್ಗೆ ಮಾಹಿತಿ ಕೊಡ್ತಾರೆ ಎಂದು ಕಾಯುತ್ತಿದ್ದಾರೆ. ಕೊನೆಗೂ ಗುಡ್ ನ್ಯೂಸ್ ಕೊಡಲು ಯಶ್ ರೆಡಿಯಾಗಿದ್ದಾರೆ. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಸಿಹಿ ಸುದ್ದಿಯೊಂದನ್ನು ಕೊಡ್ತಾರಂತೆ.
ಜನವರಿ 8ಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್
ಮತ್ತೆ ತೆರೆ ಮೇಲೆ ಯಶ್ ಅಬ್ಬರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೊಸ ವರ್ಷ ಬಂದಾಯ್ತು, ಕೆಜಿಎಫ್ 2 ರಿಲೀಸ್ ಆಗಿ ಹಲವು ತಿಂಗಳುಗಳೇ ಕಳೆದು ಹೋಗಿದೆ. ಆದ್ರೆ ಯಶ್ ಮಾತ್ರ ತಮ್ಮ ಮುಂದಿನ ಸಿನಿಮಾದ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೀಗ ಯಶ್ ಬರ್ತ್ ಡೇ ಕೂಡ ಬಂದಿದೆ.
ಬರ್ತ್ಡೇ ದಿನ ಬಿಗ್ ಅನೌನ್ಸ್ಮೆಂಟ್!
ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬವಾಗಿದ್ದು, ಬರ್ತ್ ಡೇ ದಿನವೇ ಯಶ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಬಾರಿ ಅಭಿಮಾನಿಗಳಿಗೆ ನಿರಾಸೆಯಾಗಲ್ಲ
ರಾಕಿಭಾಯ್ ಸಿನಿಮಾಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಈ ಬಾರಿ ನಿರಾಸೆಯಾಗೋದಿಲ್ವಂತೆ. ಶೀಘ್ರದಲ್ಲಿ ಯಶ್ ಬಿಗ್ ಅನೌನ್ಸ್ಮೆಂಟ್ ಮಾಡಲಿದ್ದಾರೆ. ಈ ಸಂತಸದ ನಡುವೆ ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂಬ ಸುದ್ದಿ ಕೂಡ ಹರಡಿದೆ.
Kishore: ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ!? ದೈವದ ಬಗ್ಗೆ ನಟ ಕಿಶೋರ್ ಮಾತು
ಬಾಲಿವುಡ್ ಅಂಗಳದಲ್ಲೂ ಭಾರೀ ಚರ್ಚೆ
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಸಿನಿಮಾಗಾಗಿ ಇಡೀ ಇಂಡಿಯಾದಲ್ಲಿರುವ ಸಿನಿ ಅಭಿಮಾನಿಗಳು ಕಾಯ್ತಿದೆ. ಯಶ್, ಯಾವ ನಿರ್ದೇಶಕ, ನಿರ್ಮಾಪಕರ ಜೊತೆ ಅನ್ನೋದು ಸಿನಿಮಾ ಮಾಡ್ತಾರೆ ಎನ್ನುವ ಚರ್ಚೆ ಗಾಂಧಿನಗರದಿಂದ ಹಿಡಿದು ಬಾಲಿವುಡ್ ಅಂಗಳದವರೆಗೂ ತಲುಪಿದೆ. ಆದ್ರೆ ಈವರೆಗೂ ಅಧಿಕೃತವಾಗಿ ಯಾವುದೇ ಸುದ್ದಿ ಹೊರಬಿದ್ದಿಲ್ಲ.
ಕನ್ನಡ ಸಿನಿಮಾಗಳ ಬಗ್ಗೆ ಯಶ್ ಮಾತು
ಬಾಲಿವುಡ್, ಟಾಲಿವುಡ್ ಗಳ ಮಾಧ್ಯಮಗಳಲ್ಲೂ ಯಶ್ ರಾರಾಜಿಸುತ್ತಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಮಾತಾಡಿದ್ದಾರೆ. ಸಂದರ್ಶಕರು ಕಾಂತಾರ ನಿಮ್ಮ ಸಿನಿಮಾ ಅಲ್ಲ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್, ಕಾಂತಾರ ನಮ್ಮ ಸಿನಿಮಾ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ಈಗ ರಿಲೀಸ್ ಮಾಡಿದ್ರು ಸೂಪರ್ ಹಿಟ್ ಆಗುತ್ತೆ ಎಂದು ನಟ ಯಶ್ ಹೇಳಿದ್ದಾರೆ.
ಸಹಿಪ್ರಾ ಶಾಲೆ ಇಂದು ರಿಲೀಸ್ ಮಾಡಿದ್ರು ಹಿಟ್ ಆಗುತ್ತೆ
ರಿಷಬ್ ಶೆಟ್ಟಿ ಅದ್ಭುತವಾದ ವ್ಯಕ್ತಿ, ಅವರು ನಿರ್ದೇಶಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ತುಂಬಾ ಚೆನ್ನಾಗಿದೆ. ಈಗ ಈ ಸಿನಿಮಾವನ್ನು ರಿಲೀಸ್ ಮಾಡಿದ್ರೂ ಸೂಪರ್ ಹಿಟ್ ಆಗುತ್ತೆ. ನಮ್ಮ ಚಿತ್ರರಂಗದ ಗರುಡ ಗಮನ ವೃಷಭ ವಾಹನ, ಲೂಸಿಯಾ ತುಂಬಾ ಒಳ್ಳೆಯ ಸಿನಿಮಾಗಳು. ಇದೇ ಹಾದಿಯಲ್ಲಿ ನಮ್ಮ ಜನರು ಚಿತ್ರರಂಗವನ್ನು ಬೆಳೆಸಲು ಕೆಲಸ ಮಾಡಿದ್ದಾರೆ. ನಮ್ಮ ಹುಡುಗರು ಹೋರಾಡುತ್ತಾರೆ, ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ ಎಂದು ಯಶ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ