ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ಕೆಜಿಎಫ್ 2 (KGF 2) ಸಕ್ಸಸ್ ನಲ್ಲಿದ್ದಾರೆ. ಇದರ ಖುಷಿಯಲ್ಲಿ ಅವರು ಸಧ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೆಜಿಎಫ್-2ನ ಭರ್ಜರಿ ಸಕ್ಸಸ್ ನಲ್ಲಿರುವ ಯಶ್ ಇದೀಗ ಮನೆಯಲ್ಲಿ ಮಕ್ಕಳ ಜೊತೆಯಲ್ಲಿ ಅರಾಮವಾಗಿ ಕಾಲಕಳೆಯುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Yash) ಸದ್ಯ ಕೆಜಿಎಫ್ 2 (KGF 2) ಸಕ್ಸಸ್ ನಲ್ಲಿದ್ದಾರೆ. ಇದರ ಖುಷಿಯಲ್ಲಿ ಅವರು ಸಧ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೆಜಿಎಫ್-2ನ ಭರ್ಜರಿ ಸಕ್ಸಸ್ ನಲ್ಲಿರುವ ಯಶ್ ಇದೀಗ ಮನೆಯಲ್ಲಿ ಮಕ್ಕಳ ಜೊತೆಯಲ್ಲಿ ಅರಾಮವಾಗಿ ಕಾಲಕಳೆಯುತ್ತಿದ್ದಾರೆ. ಎಷ್ಟೇ ಬ್ಯೂಸಿಯಾಗಿದ್ದರೂ ಎಂದಿಗೂ ಕುಟುಂಬಕ್ಕೆ ಕೆಲ ಸಮಯವನನ್ನು ಮೀಸಲಿಡುವ ರಾಕಿ ಬಾಯ್ ಇಂದು ಸಹ ಕುಟುಂಬದವರೊಂದಿಗೆ ಕಾಲಕಳೆದಿದ್ದಾರೆ. ಅಲ್ಲದೇ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಸಂತಸದಿಂದ ಎಂಜಾಯ್ ಮಾಡಿದ್ದಾರೆ. ಈ ವೇಳೆಯ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ (Instagram) ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಇದಲ್ಲದೇ ಯಶ್ ಮಗಳು ಐರಾ ಕೆಲ ದಿನಗಳ ಹೀಮದೆ ರಾಕ್ ರಾಕ್ ರಾಕಿ ಎಂಬ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮೂಡ್ ನಲ್ಲಿ ರಾಕಿ ಬಾಯ್ ಇದ್ದಾರೆ.
ಮಕ್ಕಳೊಂದಿಗೆ ಟೈಗರ್ ಆಟವಾಡಿದ ಯಶ್:
ಇನ್ನು ನಟ ಯಶ್ ಹಂಚಿಕೊಂಡ ವಿಡಿಯೋ ಸಖತ್ ಮಜವಾಗಿದೆ. ಯಶ್ ತಮ್ಮ ಮನೆಯ ರೂಂ ನಲ್ಲಿ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಆಟವಾಡುತ್ತಿದ್ದಾಗ, ಮಗ ಯಥರ್ವ ತಾನು ದೊಡ್ಡ ತೋಳ, ಡೈನೋಸರ್ ಎಂದು ಘರ್ಜಿಸುತ್ತಾನೆ. ಇದಕ್ಕೆ ಹೆದರುವಂತೆ ನಟಿಸುವ ಯಶ್. ನಂತರ ಪಪ್ಪಾ ದೊಡ್ಡ ಟೈಗರ್ ಎಂದು ಘರ್ಜಿಸಿದಂತೆ ಮಾಡಿದಕ್ಕೆ ಅಪ್ಪನ ಅಭಿನಯ ಕಂಡು ಮಗ ಯಥರ್ವ ಓಡಿ ಹೋಗಿದ್ದಾನೆ. ಮಗ ಓಡಿದನ್ನು ನೋಡಿ ಯಶ್ ಮತ್ತು ಮಗಳು ಐರಾ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಅಲ್ಲದೇ ‘A 'Wild' start to our Wednesday‘ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದ್ದು, ಮಕ್ಕಳ ಕ್ಯೂಟ್ ಆಗಿರುವ ವಿಡಿಯೋಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಕೆಲ ದಿನಗಳ ಹಿಂದೆಯಷ್ಟೇ ಯಶ್ ಮಗಳ ಐರಾ ಅವಳ ಕ್ಯೂಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು, ಅದರಲ್ಲಿ ಐರಾ ಅಪ್ಪನಿಗೆ (ಯಶ್) ರಾಕ್ ರಾಕ್ ರಾಕಿ, ಕಮಾನ್ ರಾಕಿ ಬಾಯ್ ಎಂದು ಕ್ಯೂಟ್ ಆಗಿ ಹೇಳಿರುವ ವಿಡಿಯೋವನ್ನು ಯಶ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಇದು ಸಹ ಸಖತ್ ವೈರಲ್ಆ ಆಗಿತ್ತು. ಇದಾದ ಬಳಿಕ ಇಂದು ಮಕ್ಕಳೊಂದಿಗಿನ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಬ್ಯೂಸಿ ಸಮಯದಲ್ಲಿಯೂ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವುದಕ್ಕೆ ಅಭಿಮಾನಿಗಳು ಯಶ್ ಪರ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಕೆಜಿಎಫ್ 2 ಸಿನಿಮಾ ನೋಡಿದ ಬೇರೆ ಭಾಷೆಯ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ರಾಕಿ ಭಾಯ್ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಕೆಜಿಎಫ್ 2' ಮತ್ತು ಯಶ್ ಬಗ್ಗೆ ಸಂದರ್ಶನವೊಂದರಲ್ಲಿ ಕೆಜಿಎಫ್ 2 ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ. ಸಿನಿಮಾ ನೋಡಿದ ರಣವೀರ್ ಸಿಂಗ್ 'ಕೆಜಿಎಫ್ 2' ಮತ್ತು ಯಶ್ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ರೀತಿಯ ಚಿತ್ರಗಳು ನನಗೆ ತುಂಬಾ ಇಷ್ಟ ಆಗುತ್ತವೆ ಎಂದು ಹೇಳಿದ್ದಾರೆ.
ಇನ್ನು ಕಲೆಕ್ಷನ್ ವಿಚಾರದಲ್ಲಿ ಕೆಜಿಎಫ್ 2 ಚಿತ್ರವು ಬಿಡುಗಡೆಯಾಗೊ 27 ದಿನದಲ್ಲಿ ಬರೋಬ್ಬರಿ 1200 ಕೋಟಿ ಕಲೇಕ್ಷನ್ ಮಾಡಿದೆ ಎಮಧು ತಿಳದಿಉಬಂದಿದ್ದು, ತೆಲುಗಿನ ಆರ್ಆರ್ಆರ್ ದಾಖಲೆಯನ್ನು ಮುರಿದುಹಾಕಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ