ರಾಕಿಂಗ್ ಸ್ಟಾರ್ ಯಶ್ ಸದಾ (Rocking Star Yash Movie) ಒಂದು ದೊಡ್ಡ ಗುರಿ ಇಟ್ಟುಕೊಂಡೇ ಬಂದಿದ್ದಾರೆ. ಅದನ್ನ ಸಿನಿಮಾದ ಡೈಲಾಗ್ ರೀತಿ ಹೇಳಿ ಸುಮ್ನೆ ಆಗೋದಿಲ್ಲ. ಹೇಳಿದ್ದನ್ನ ಮಾಡ್ತಾನೇ ಬಂದಿದ್ದಾರೆ. ಕನ್ನಡ ಇಂಡಸ್ಟ್ರೀಯನ್ನ ಬೇರೆ (Yash Next Movie) ಲೆವಲ್ಗೆ ತೆಗೆದುಕೊಂಡು ಹೊಗುತ್ತೇವೆ ಅಂತಲೇ ಹೇಳಿದ್ದರು. ಆ ಪ್ರಕಾರ ಅದಕ್ಕಾಗಿ ಶ್ರಮಿಸಿದ್ದು ಇದೆ. ಅದಕ್ಕೆ ದಿ ಬೆಸ್ಟ್ (Upcoming Movie Updates) ಎಕ್ಸಾಂಪಲ್ ಗೊತ್ತೇ ಇದೆ. ಅದುವೇ ಕೆಜಿಎಫ್ ಕನ್ನಡ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ (Yash New Movie Updates) ಸ್ಟಾರ್ ಆದರು. ಕನ್ನಡದ ಹೆಸರನ್ನೂ ಬೇರೆ ಲೆವಲ್ಗೆ ತೆಗೆದುಕೊಂಡು ಹೋದ್ರು. ಆದರೆ ಈಗ ಅವರ ಗುರಿ ಇನ್ನೂ ದೊಡ್ಡಮಟ್ಟದಲ್ಲಿಯೇ ಇದೆ.
ರಾಕಿಂಗ್ ಸ್ಟಾರ್ ಮುಂದಿನ ಆ ದೊಡ್ಡ ಗುರಿ ಯಾವುದು?
ರಾಕಿ ಭಾಯ್ ಯಶ್ ಇಡೀ ನಾಡಿನ ಹೆಮ್ಮೆಯನ್ನ ಹೆಚ್ಚಿಸಿದ್ದಾರೆ. ಇತಿಹಾಸ ಪುಟದಲ್ಲಿ ಇವರ ಹೆಸರು ದಾಖಲಾಗಿದೆ. ಸಿನಿಮಾ ರಂಗದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು? ವಿಜಯ್ ಕಿರಗಂದೂರು ಅವರ ಕೆಜಿಎಫ್ ಚಿತ್ರ ಅಂತಲೇ ಉತ್ತರ ಬರುತ್ತದೆ.
ಯಾರಂದ್ರೆ ಯಾರೂ ನಿರೀಕ್ಷೆ ಮಾಡದೇ ಇರೋ ಮಟ್ಟಕ್ಕೆ ಸಿನಿಮಾ ರೀಚ್ ಆಗಿದೆ. ಕನ್ನಡದ ಇತರ ಚಿತ್ರ ನಿರ್ಮಾಪಕರಿಗೂ ದಾರಿ ದೀಪದಂತೇನೆ ಆಗಿದೆ. ಇದಾದ್ಮೇಲೆ ಅಲ್ವೇ? ಕನ್ನಡ ಕಾಂತಾರ ಕೂಡ ಅದೇ ಹಾದಿಯಲ್ಲಿಯೇ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದು?
ರಾಕಿ ಕನಸು-ಗುರಿ ಎರಡೂ ಈ ಸಲ ಬೃಹತ ರೂಪ ಪಡೆದಿದೆ!
ರಾಕಿ ಭಾಯ್ ಕನಸು-ಗುರಿ ಎರಡೂ ದೊಡ್ಡಮಟ್ಟದಲ್ಲಿಯೇ ಇವೆ. ಇಲ್ಲಿವರೆಗೂ ನ್ಯಾಷನಲ್ ಸ್ಟಾರ್ ಆಗಿದ್ದ ರಾಕಿ ಭಾಯ್ ಬೇರೆ ಲೆವಲ್ಗೆ ಯೋಚನೆ ಮಾಡುತ್ತಿದ್ದಾರೆ. ಇವರ ಕನಸು ಬೇರೇ ಇದೆ. ಇದರ ಲೆವಲ್ ಈಗ ಬೇರೆ ಇದೆ. ಅದು ಇಂತಿದೆ.
ರಾಕಿ ಭಾಯ್ ಯಶ್ ಈಗ ಕನ್ನಡ ಸಿನಿಮಾ, ನ್ಯಾಷನಲ್ ಸಿನಿಮಾ ಅಂತ ಯೋಚನೆ ಮಾಡ್ತಿಲ್ಲ. ಅವರ ಲೆಕ್ಕಾಚಾರ ವರ್ಲ್ಡ್ ಸಿನಿಮಾನೇ ಆಗಿದೆ. ಕಾಂಪಿಟೇಷನ್ ಇರೋದು ನ್ಯಾಷನಲ್ ಚಿತ್ರದ ಜೊತೆಗೆ ಅಲ್ವೇ ಅಲ್ಲ. ಅವರ ಮುಂದಿನ ಕಾಂಪಿಟೇಷನ್ ಇರೋದು ವರ್ಲ್ಡ್ ಚಿತ್ರವೇ ಆಗಿದೆ.
ಬಾಲಿವುಡ್-ಸ್ಯಾಂಡಲ್ವುಡ್ ಅಂತ ಕಿತ್ತಾಡೋದು ಬೇಡ
ನಾವು ಬಾಲಿವುಡ್-ಸ್ಯಾಂಡಲ್ವುಡ್ ಅಂತ ಕಿತ್ತಾಡೋದು ಬಿಡ್ಬೇಕು. ನಮ್ಮ ಕಾಂಪಿಟೇಷನ್ ಇರೋದು ವರ್ಲ್ಡ್ ಸಿನಿಮಾ ಜೊತೆಗೇನೆ ಆಗಿದೆ. ಅದರ ಜೊತೆಗೆ ಟಕ್ಕರ್ ಕೊಡಬೇಕಿದೆ. ಅದನ್ನ ಮಾಡೋಣ, ಬಾಲಿವುಡ್-ಸ್ಯಾಂಡಲ್ವುಡ್ ಅಂತ ಕೂತ್ರೇ ಏನೂ ಆಗೋದಿಲ್ಲ ಅನ್ನೋ ಅರ್ಥದಲ್ಲಿಯೇ ಯಶ್ ಮಾತನಾಡುತ್ತಾರೆ.
ಜನವರಿ-08 ಕ್ಕೆ ರಾಕಿ ಭಾಯ್ ಸಿನಿಮಾ ಅನೌನ್ಸ್?
ರಾಕಿಂಗ್ ಸ್ಟಾರ್ ಯಶ್ ಹೇಳ್ತಿರೋದು ಸತ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ತಯಾರಿ ನಡೆಸಿದಂತೇನೆ ಇದ್ದು, ಜನವರಿ-8 ರಂದು ಯಶ್ ಜನ್ಮ ದಿನಕ್ಕೆ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಅನ್ನೋ ಸುದ್ದಿ ಕೂಡ ಇದೆ.
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? ಈ ಒಂದು ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಯಶ್ ಜನ್ಮ ದಿನಕ್ಕೆ ಈ ಒಂದು ಪ್ರಶ್ನೆಗೆ ಉತ್ತರ ಸಿಗುತ್ತದೆ ಅನ್ನೋ ನಂಬಿಕೆ ಹುಟ್ಟಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಇದೇ ದಿನ ಅನೌನ್ಸ್ ಆಗುತ್ತದೆ ಅನ್ನುವ ನಂಬಿಕೆ ಕೂಡ ಬಲವಾಗಿಯೇ ಇದೆ.
ಇದನ್ನೂ ಓದಿ: Ram Charan: ಈ ಸೌತ್ ನಟ ತಮ್ಮ ಒಂದು ಶರ್ಟ್ಗೆ 1 ಲಕ್ಷಕ್ಕೂ ಹೆಚ್ಚು ಖುರ್ಚು ಮಾಡ್ತಾರೆ! ಶರ್ಟ್ ಹೇಗಿದೆ?
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಕೆವಿಎನ್ ಸಂಸ್ಥೆ ಜೊತೆಗೇನೆ ಇದೆ. ಈಗಾಗಲೇ ಯಶ್ ಈ ಸಂಸ್ಥೆಗೆ ಒಂದು ಸಿನಿಮಾ ಮಾಡೋದಾಗಿಯೂ ಒಪ್ಪಿಕೊಂಡಿದ್ದಾರೆ ಅನ್ನೋ ಮಾಹಿತಿ ಕೂಡ ಇದೆ.
ಈ ಹಿನ್ನೆಲೆಯಲ್ಲಿ ಈ ಚಿತ್ರವೇ ಜನವರಿ-08 ರಂದು ಅನೌನ್ಸ್ ಆಗೋ ಚಾನ್ಸಸ್ ಇದೆ. ಆದರೆ ಈ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬರಬೇಕಿದೆ ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ