Rocking Star Yash: ಮಗಳಿಗೆ ರಾಕಿಂಗ್ ಸ್ಟಾರ್ ಕನ್ನಡ ಪಾಠ, ಮುದ್ದು ಮುದ್ದಾಗಿ ‘ಅ ಆ ಇ ಈ’ ನುಡಿದ ಐರಾ!

Ayra Yash Cute Video: ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಷ್ಟೇ ಅವರ ಮಗಳು ಐರಾ ಯಶ್ ಕೂಡ ತುಂಬಾನೇ ಫೇಮಸ್. ಸೋಶಿಯಲ್ ಮೀಡಿಯಾಗಳಲ್ಲಂತೂ ಆಕೆಯದ್ದೇ ಹವಾ. ಪುಟ್ಟ ಸಹೋದರ ಯಥರ್ವನೊಂದಿಗೆ ಆಡುತ್ತಾ, ಕಾಡುತ್ತಾ ಇರುತ್ತಾಳೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಕಿಂಗ್ ಸ್ಟಾರ್ ಯಶ್ (Rocking Star Yash) ಸದಾ ಬ್ಯುಸಿಯಾಗೇ ಇರ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಕೆಜಿಎಫ್-2 (KGF-2) ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ರಾಕಿಂಗ್ ಸ್ಟಾರ್, ಬಾಕ್ಸಾಫೀಸ್’ನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಲ್ಲಿದ್ದಾರೆ. ಇಷ್ಟೆಲ್ಲಾ ಬ್ಯುಸಿ  ಇರುವ ರಾಕಿ ಭಾಯ್, ತಮ್ಮ ಫ್ಯಾಮಿಲಿಗೆ ಮಾತ್ರ ಟೈಮ್ ಕೊಟ್ಟೇ ಕೊಡ್ತಾರೆ. ಎಲ್ಲೇ ಹೋಗಲಿ, ಏನೇ ಮಾಡುತ್ತಿರಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ (Radhika Pandith) ಹಾಗೂ ಮುದ್ದು ಮಕ್ಕಳಾದ ಐರಾ (Ayra) ಹಾಗೂ ಯಥರ್ವ (Yatharv) ಜೊತೆಗೆ ತಂದೆ, ತಾಯಿ ಬಗ್ಗೆ ಕೇರ್ ತಗೋತಾನೇ ಇರ್ತಾರೆ. ಇದೀಗ ತಮ್ಮ ಮುದ್ದಿನ ಮಗಳ ಜೊತೆ ಯಶ್ ಟೈಮ್ ಸ್ಪೆಂಡ್ ಮಾಡಿದ್ದು,ಅಪ್ಪ-ಮಗಳ ಮುದ್ದು ಮುದ್ದಾದ ವಿಡಿಯೋ ವೈರಲ್ ಆಗಿದೆ.

  ‘ಅ ಆ ಇ ಈ’ ಕಲಿಸಿದ ರಾಕಿ ಭಾಯ್

  ಈ ವೀಕೆಂಡ್’ನಲ್ಲಿ ಮಗಳು ಐರಾ ಜೊತೆ ಯಶ್ ಸಮಯ ಕಳೆದಿದ್ದಾರೆ. ವೀಕೆಂಡ್ ಸ್ಪೆಷಲ್ ಎನ್ನುವಂತೆ ಮಗಳಿಗೆ ಕನ್ನಡ ಪಾಠ ಮಾಡಿದ್ದಾರೆ. ಖುದ್ದು ಯಶ್ ಪತ್ನಿ ರಾಧಿಕಾ ಪಂಡಿತ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 20 ಸೆಕೆಂಡ್’ಗಳ ಈ ವಿಡಿಯೋದಲ್ಲಿ ಯಶ್ ತಮ್ಮ ಪುತ್ರಿಗೆ ಅ ಆ ಇ ಈ ಹೇಳಿಕೊಟ್ಟಿದ್ದಾರೆ. ಅ ಇಂದ ಅಂ ಅಃ ವರೆಗೆ ಪಾಠ ಹೇಳಿಕೊಟ್ಟಿದ್ದಾರೆ. ಅದನ್ನು ಪುನರಾವರ್ತಿಸಿದ ಮುದ್ದು ಮಗಳಿಗೆ ಶಹಬ್ಬಾಸ್ ಎಂದಿದ್ದಾರೆ.

  ಮುದ್ದು ಮುದ್ದಾಗಿ ಪಾಠ ಒಪ್ಪಿಸಿದ ಐರಾ

  ಇದನ್ನೂ ಓದಿ: ವಿಲನ್ ಪಾತ್ರದಲ್ಲಿ ನಟಿಸಿಯೂ ‘ಪವರ್’ ತೋರಿಸಬೇಕು ಎಂದಿದ್ದ ಅಪ್ಪು, ಯಾವುದು ಆ ಸಿನಿಮಾ

  20 ಸೆಕೆಂಡ್’ಗಳ ಈ ವಿಡಿಯೋದಲ್ಲಿ 3 ವರ್ಷದ ಐರಾ ಮುದ್ದು ಮುದ್ದಾಗಿ ಮಾತನಾಡಿದ್ದಾಳೆ. ತಂದೆ ಹೇಳಿಕೊಟ್ಟ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಚಾಚೂ ತಪ್ಪದೇ ಹೇಳಿದ್ದಾಳೆ. ‘ಅಂ’ ನಿಂದ ‘ಅಃ’ ವರೆಗೆ ಪಾಠ ಒಪ್ಪಿಸಿದ್ದಾಳೆ. ತಂದೆ ಯಶ್ ಕಕಾಕಿಕೀ ಸ್ಟಾರ್ಟ್ ಮಾಡುತ್ತಿದ್ದಂತೆ ಅಮ್ಮನನ್ನು ಕರೆಯುತ್ತಾಳೆ.

  20 ಸೆಕೆಂಡುಗಳ ಈ ವಿಡಿಯೋದಲ್ಲಿ ಈ ಎಲ್ಲಾ ದೃಶ್ಯಗಳಿವೆ, ರಾಧಿಕಾ ಪಂಡಿತ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ‘ವೀಕೆಂಡ್ ಸ್ಪೆಷಲ್ ಕ್ಲಾಸ್’ ಅಂತ ರಾಧಿಕಾ ಟ್ಯಾಗ್ ಲೈನ್ ಕೊಟ್ಟಿದ್ದಾರೆ. ಕೆಲವೇ ಗಂಟೆಗಳಲ್ಲಿ 3.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಲಕ್ಷಾಂತರ ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪ-ಮಗಳ ಕನ್ನಡ ಪಾಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  ಸೋಶಿಯಲ್ ಮೀಡಿಯಾಗಳಲ್ಲಿ ಐರಾ ಹವಾ

  ನಾನ್ ಬರೋವರಗೂ ಮಾತ್ರ ಬೇರೆಯವ್ರ ಹವಾ, ನಾನ್ ಬಂದ್ಮೇಲೆ ನಂದೇ ಹವಾ ಅಂತ ರಾಕಿಂಗ್ ಸ್ಟಾರ್ ಸಿನಿಮಾದಲ್ಲಿ ಅಬ್ಬರಿಸಿದ್ದರು. ಆದ್ರೆ ಮನೆಯಲ್ಲಿ ಮಗಳು ಐರಾಳದ್ದೇ ಹವಾ ಅನ್ನೋದನ್ನು ಖುದ್ದು ಅವಳೇ ಒಪ್ಪಿಕೊಂಡಿದ್ದಾರೆ. ನಾನು ಯಾರಿಗೂ ಹೆದರೋದಿಲ್ಲ. ಆದರೆ ಈ ರಾಕಿ ಬಾಯ್ ಹೆದರೋದು ಏನಿದ್ದರೂ ಒಬ್ಬರಿಗೇ, ಅದು ನನ್ನ ಮಗಳಿಗೆ ಅಂತ ಹಿಂದೊಮ್ಮೆ ಯಶ್ ಅವರೇ ಹೇಳಿಕೊಂಡಿದ್ದರು.

  ಇದನ್ನೂ ಓದಿ:ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್

  ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಷ್ಟೇ ಅವರ ಮಗಳು ಐರಾ ಯಶ್ ಕೂಡ ತುಂಬಾನೇ ಫೇಮಸ್. ಸೋಶಿಯಲ್ ಮೀಡಿಯಾಗಳಲ್ಲಂತೂ ಆಕೆಯದ್ದೇ ಹವಾ. ಪುಟ್ಟ ಸಹೋದರ ಯಥರ್ವನೊಂದಿಗೆ ಆಡುತ್ತಾ, ಕಾಡುತ್ತಾ ಇರುತ್ತಾಳೆ. ಒಮ್ಮೊಮ್ಮೆ ಆತನಿಗೆ ಮುದ್ದು ಮಾಡುತ್ತಾ, ಪುಟ್ಟ ತಮ್ಮನ ಬಗ್ಗೆ ಕೇರ್ ಮಾಡುತ್ತಾ ಮನೆಯವರ ಪ್ರೀತಿ ಗಳಿಸಿದ್ದಾಳೆ. ಸೋಶಿಯಲ್ ಮೀಡಿಯಾಗಳಲ್ಲೂ ಐರಾಗೆ ಸಖತ್ ಫ್ಯಾನ್ಸ್ ಇದ್ದು, ಆಕೆಯ ವಿಡಿಯೋ, ಫೋಟೋಗಳು ಸದಾ ಶೇರ್ ಆಗುತ್ತಲೇ ಇರುತ್ತವೆ.

  ವರದಿ- ಅಣ್ಣಪ್ಪ ಆಚಾರ್
  Published by:Sandhya M
  First published: