• Home
  • »
  • News
  • »
  • entertainment
  • »
  • Yash: ಕಾಂತಾರ ನಮ್ಮ ಸಿನಿಮಾ, ಮತ್ತೆ 'ಸಹಿಪ್ರಾ ಶಾಲೆ' ಸಿನಿಮಾ ರಿಲೀಸ್​ ಆದ್ರೆ ಸೂಪರ್​ ಹಿಟ್​ ಆಗುತ್ತೆ

Yash: ಕಾಂತಾರ ನಮ್ಮ ಸಿನಿಮಾ, ಮತ್ತೆ 'ಸಹಿಪ್ರಾ ಶಾಲೆ' ಸಿನಿಮಾ ರಿಲೀಸ್​ ಆದ್ರೆ ಸೂಪರ್​ ಹಿಟ್​ ಆಗುತ್ತೆ

ಯಶ್​ , ರಿಷಬ್ ಶೆಟ್ಟಿ

ಯಶ್​ , ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅದ್ಭುತವಾದ ವ್ಯಕ್ತಿ. ರಿಷಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ತುಂಬಾ ಚೆನ್ನಾಗಿದೆ. ಈಗ ಈ ಸಿನಿಮಾವನ್ನು ರಿಲೀಸ್ ಮಾಡಿದ್ರೆ ಸೂಪರ್ ಹಿಟ್ ಆಗುತ್ತೆ.

  • News18 Kannada
  • Last Updated :
  • Karnataka, India
  • Share this:

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ (Pan India Star)​ ಆಗಿರುವ ರಾಕಿಂಗ್​ ಸ್ಟಾರ್​ ಯಶ್ (Rocking Star Yash)​, ಅನೇಕ ಸಂದರ್ಶನಗಳಲ್ಲಿ ಕನ್ನಡ ಸಿನಿಮಾಗಳ ( Kannada Cinema Industry ಬಗ್ಗೆ ಮಾತಾಡಿದ್ದಾರೆ. ಸಂದರ್ಶಕರು ಕಾಂತಾರ ನಿಮ್ಮ ಸಿನಿಮಾ ಅಲ್ಲ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್, ಕಾಂತಾರ ನಮ್ಮ ಸಿನಿಮಾ ಎಂದು ಹೇಳಿದ್ದಾರೆ. ರಿಷಬ್​ ಶೆಟ್ಟಿ (Rishab Shetty) ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾವನ್ನು ಈಗ ರಿಲೀಸ್​ ಮಾಡಿದ್ರು ಸೂಪರ್​ ಹಿಟ್​ ಆಗುತ್ತೆ ಎಂದು ನಟ ಯಶ್​ ಹೇಳಿದ್ದಾರೆ.


ಕನ್ನಡ ಸಿನಿಮಾ ಇಂಡಸ್ಟ್ರಿ  ಬಗ್ಗೆ ಯಶ್​ ಮಾತು


ಕೆಜಿಎಫ್​ ಹಾಗೂ ಕಾಂತಾರ  ಕನ್ನಡ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು, ಇಡೀ ವಿಶ್ವವೇ ಕನ್ನಡ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದೆ. ನಟ ಯಶ್​ ಹಾಗೂ ನಟ ರಿಷಬ್​ ಶೆಟ್ಟಿ ಹೊರ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಹಾಗೂ ಸಂದರ್ಶನಗಳನ್ನು ಭಾಗಿಯಾಗಿದ್ದಾರೆ. ಇದೇ ವೇಳೆ ನಟ ಯಶ್​ ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದ್ದಾರೆ.


Rishab Shetty Says rocking Star Yash Wishes him on Kantara Movie Release Day
ರಿಷಬ್​, ಯಶ್​


ಕನ್ನಡ ಸಿನಿಮಾಗಳಿಗಾಗಿ ಕೆಲಸ ಮಾಡಬೇಕಿದೆ


ಕನ್ನಡ ಸಿನಿಮಾ ರಂಗದಿಂದ ನಾವು ಬಂದಿದ್ದೇವೆ. ಕೆಜಿಎಫ್ ಚಿತ್ರರಂಗವನ್ನು ಬದಲಾಯಿಸಿಲ್ಲ. ನಾವು ಸಿನಿಮಾಗಾಗಿ ಕೆಲಸ ಮಾಡಬೇಕು, ನಮ್ಮ ಚಿತ್ರಗಳು ಎಲ್ಲೆಡೆ ಸದ್ದು ಮಾಡ್ಬೇಕು. ರೆಕಾರ್ಡ್ ಮುರಿಯಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.


ಸಹಿಪ್ರಾ ಶಾಲೆ ಇಂದು ರಿಲೀಸ್​ ಮಾಡಿದ್ರು ಹಿಟ್​ ಆಗುತ್ತೆ


ರಿಷಬ್ ಶೆಟ್ಟಿ ಅದ್ಭುತವಾದ ವ್ಯಕ್ತಿ. ರಿಷಬ್ ಶೆಟ್ಟಿ ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ತುಂಬಾ ಚೆನ್ನಾಗಿದೆ. ಈಗ ಈ ಸಿನಿಮಾವನ್ನು ರಿಲೀಸ್ ಮಾಡಿದ್ರೆ ಸೂಪರ್ ಹಿಟ್ ಆಗುತ್ತೆ. ನಮ್ಮ ಚಿತ್ರರಂಗದ ಗರುಡ ಗಮನ ವೃಷಭ ವಾಹನ, ಲೂಸಿಯಾ ತುಂಬಾ ಒಳ್ಳೆಯ ಸಿನಿಮಾಗಳು. ಇದೇ ಹಾದಿಯಲ್ಲಿ ನಮ್ಮ ಜನರು ಚಿತ್ರರಂಗವನ್ನು ಬೆಳೆಸಲು ಕೆಲಸ ಮಾಡಿದ್ದಾರೆ. ನಮ್ಮ ಹುಡುಗರು ಹೋರಾಡುತ್ತಾರೆ, ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ ಎಂದು ಯಶ್ ಹೇಳಿದ್ದಾರೆ.


ನಟ-ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಆಗ್ಬೇಕು


ನಮ್ಮನ್ನು ಕರ್ನಾಟಕದ ಜನರು ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ಟೀಂನಲ್ಲಿದ್ದ 7 ಜನರು ಕರ್ನಾಟಕದವರಾಗಿದ್ದರು. ಅಂತೆಯೇ ನನ್ನ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರು, ನಿರ್ದೇಶಕರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಆಗಬೇಕು ಎಂದು ಬಯಸುತ್ತೇನೆ ಎಂದು ಯಶ್​ ಹೇಳಿದ್ದಾರೆ.


ಬಾಹುಬಲಿ ಸಿನಿಮಾದಿಂದ ಕನಸು ಕಾಣುವಂತಾಯ್ತು


ಕನ್ನಡ ಚಿತ್ರರಂಗ ಬೆಳೆಸುವ ನಿಟ್ಟಿನಲ್ಲಿ ನಮ್ಮವರು ಕೆಲಸ ಮಾಡಿದ್ದಾರೆ. ಕೆಜಿಎಫ್ ಮಾಡಿರೋದು ಸ್ಪೂರ್ತಿಗಾಗಿ ಹಾಗಾಗಿ ಕೆಜಿಎಫ್‌ನಿಂದ ಎಲ್ಲ ಬದಲಾಯ್ತು ಎಂದು ಹೇಳೋದಿಲ್ಲ. ಬಾಹುಬಲಿ ಸಿನಿಮಾದ ಯಶಸ್ಸು ನಮಗೆ ಕನಸು ಕಾಣುವಂತೆ ಮಾಡಿತು. ರಾಜಮೌಳಿ ಅವರಿಗೂ ನಾವು ಕ್ರೆಡಿಟ್ ಕೊಡಬೇಕು ಎಂದು ಯಶ್ ಹೇಳಿದ್ದಾರೆ.


ಇದನ್ನೂ ಓದಿ: Rocking Star Yash: ಬಾಲಿವುಡ್​ v/s ಸೌತ್ ಸಿನಿಮಾ ಇಂಡಸ್ಟ್ರಿ ಫೈಟ್​! ರಾಕಿ ಭಾಯ್​ ಹೇಳಿದ್ದೇನು?


ಬಾಲಿವುಡ್​ನನ್ನು ಗೌರವಿಸಬೇಕು


ಇದೇ ವೇಳೆ ಕನ್ನಡಿಗರು ಬೇರೆ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತಾಡಬಾರದು ಎಂದು ಯಶ್​ ಹೇಳಿದ್ದಾರೆ. ಬಾಲಿವುಡ್ ಬಗ್ಗೆ ಗೌರವ ಇರಲಿ. ಉತ್ತರ ಮತ್ತು ದಕ್ಷಿಣ ಅನ್ನುವುದನ್ನು ಮರೆತುಬಿಡಿ. ಎಲ್ಲರನ್ನು ಗೌರವಿಸಿ  ಎಂದು ಯಶ್ ಕನ್ನಡಿಗರಿಗೆ ಮೆಸೇಜ್ ನೀಡಿದ್ದಾರೆ. ಯಾರನ್ನೂ ಮೂಲೆಗುಂಪು ಮಾಡುವುದು ಒಳ್ಳೆಯದಲ್ಲ, ಯಾರೋ ಒಬ್ಬರು ಬಾಲಿವುಡ್‌ನಲ್ಲಿ ಏನೂ ಅಲ್ಲ ಎಂದು ಅಪಹಾಸ್ಯ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಯಶ್ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: