ನಮ್ಮ ತಾಯಿಯನ್ನು ಉಳಿಸಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯ: ಕಾವೇರಿ ಕೂಗಿಗೆ ಮಿಡಿದ ರಾಕಿ ಭಾಯ್
ಕಾವೇರಿ ಕೇವಲ ನದಿಯಷ್ಟೇ ಅಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಅವಳು ನಮ್ಮ ತಾಯಿ ಎಂದು ರಾಕಿ ಭಾಯ್ ಯಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕಾವೇರಿ ಕೂಗು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎಲ್ಲರಿಗೂ ಕರೆ ನೀಡಿದ್ದಾರೆ.

yash
- News18
- Last Updated: August 26, 2019, 10:39 PM IST
ಕಾವೇರಿ ನದಿಯ ಉಳಿವಿಗಾಗಿ ಜಗ್ಗಿ ಸದ್ಗುರು ವಾಸುದೇವ್ ಆರಂಭಿಸಿದ 'ಕಾವೇರಿ ಕೂಗು' ಅಭಿಯಾನಕ್ಕೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕಾವೇರಿ ನದಿ ತೀರದುದ್ದಕ್ಕೂ ಮರಗಳನ್ನು ಬೆಳೆಸುವ ಈ ಉತ್ತಮ ಕಾರ್ಯಕ್ಕೆ ಸ್ಯಾಂಡಲ್ ವುಡ್ ತಾರೆಯರು, ಕ್ರಿಕೆಟಿಗರು ಬೆಂಬಲ ಸೂಚಿಸಿದ್ದಾರೆ. 'ಕಾವೇರಿ ಕೂಗು' ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಕೈ ಜೋಡಿಸಿದ್ದಾರೆ.
'ಕಾವೇರಿ ಕೇವಲ ನದಿಯಷ್ಟೇ ಅಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಅವಳು ನಮ್ಮ ತಾಯಿ' ಎಂದು ರಾಕಿ ಭಾಯ್ ಯಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ 'ಕಾವೇರಿ ಕೂಗು' ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಎಲ್ಲರಿಗೂ ಕರೆ ನೀಡಿದ್ದಾರೆ.
ಕಾವೇರಿ ಕನ್ನಡ ನಾಡಿನ ಜೀವನದಿ, ಶತಮಾನಗಳಿಂದ ಕೋಟ್ಯಾನುಕೋಟಿ ಜನರನ್ನು ಸಾಕಿ ಸಲಹಿದ ಜೀವನದಿ ನಮ್ಮ ತಾಯಿ. ನಾವು ಜೀವನದಲ್ಲಿ ಹೆಣ್ಣಿಗೆ ತುಂಬಾ ಗೌರವ ಕೊಡುತ್ತೇವೆ. ವಿಶೇಷವಾಗಿ ಕನ್ನಡಿಗರು ಹೆಣ್ಣಿಗೆ ಗೌರವ ಕೊಡುವುದರಲ್ಲಿ ಮುಂದೆ ಇರೋರು.
ನಮ್ಮ ಮನೆಯಲ್ಲಿ ನಮ್ಮ ಅಕ್ಕ-ತಂಗಿ, ತಾಯಿಗೆ ಯಾರಿಗೆ ಒಂದು ಸಣ್ಣ ನೋವಾದರೂ ನಾವು ಸಹಿಸಲ್ಲ, ನಾವೇ ಜವಾಬ್ದಾರಿ ತೆಗೆದುಕೊಂಡು ಪರಿಹರಿಸ್ತೀವಿ. ಅಂತದ್ದರಲ್ಲಿ ಇಡೀ ನಾಡಿಗೆ, ಕೋಟ್ಯಾನುಕೋಟಿ ಜೀವಗಳಿಗೆ ಜೀವನದಿ ಆಗಿರುವ ಕಾವೇರಿ ಇಂದು ಕಷ್ಟದಲ್ಲಿದ್ದಾಳೆ. ಕಾವೇರಿ ತಾಯಿ ಬತ್ತಿ ಹೋಗುವ ಹಂತ ತಲುಪುತ್ತಿದ್ದಾಳೆ.
ಇಂಟರ್ನೆಟ್ ಸೆನ್ಸೇಷನ್ ರಾನು ಚೊಚ್ಚಲ ಹಾಡಿಗೆ ಪಡೆದ ಸಂಭಾವನೆಯೆಷ್ಟು ಗೊತ್ತೆ?
ಕರ್ನಾಟಕ ಮಾತ್ರವಲ್ಲ, ಇಡೀ ಭಾರತದ ಅನೇಕ ಜನರಿಗೆ ಜೀವ ಕೊಟ್ಟಿರುವ ತಾಯಿ ಬತ್ತಿ ಹೋಗುತ್ತಿದ್ದಾಳೆ. ಕಾವೇರಿಯನ್ನು ಉಳಿಸಿಕೊಂಡು, ನಮ್ಮ ತಾಯಿಯನ್ನು ಜೀವಂತವಾಗಿಡಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ.
ಇಂದು ಇಶಾ ಫೌಂಡೇಶನ್ ಜೀವನದಿಯನ್ನು ಉಳಿಸುವ ಒಂದು ಉತ್ತಮ, ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಿಮಗೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಆಸೆ ಇದೆ ಅಂತ ಗೊತ್ತು. ಅದಕ್ಕೆ ನೀವು ಮಾಡಬೇಕಿರೋದು ಇಷ್ಟೆ, ಒಂದು ಗಿಡಕ್ಕೆ 42 ರೂ. ಆಗುತ್ತೆ. ಆ ಗಿಡವನ್ನು ಕೊಡಿಸುವ ಶಕ್ತಿಯನ್ನು ನನಗೆ ನಿಮಗೆ ಎಲ್ಲರಿಗೂ ಆ ಭಗವಂತ ಕೊಟ್ಟಿದಾನೆ ಅನ್ಕೊಂಡಿದಿನಿ. 80009 80009 ಗೆ ಕರೆ ಮಾಡಿ ನಿಮ್ಮ ಬೆಂಬಲ ಸೂಚಿಸಿ, ನಿಮ್ಮ ಕೊಡುಗೆ ನೀಡಿ ಎಂದು ಯಶ್ ಮನವಿ ಮಾಡಿದ್ದಾರೆ.

Loading...
View this post on Instagram
Cauvery is beyond a name, more than just a river for us... it's our Mother!!