HOME » NEWS » Entertainment » ROCKING STAR YASH STATEMENT ON SANDALWOOD DRUG SCANDAL RMD

Actor Yash: ಡ್ರಗ್ಸ್ ತೆಗೆದುಕೊಂಡು ಹಾಳಾಗೋದು ನಿಮ್ಮ ಹಕ್ಕಲ್ಲ; ಯುವಜನತೆಗೆ ರಾಕಿ ಭಾಯ್ ಯಶ್​ ಸಂದೇಶ

ಯಶ್​ ಸೇರಿ ಅನೇಕ ಗಣ್ಯರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ಚರ್ಚೆ ನಡೆಸಿದ್ದಾರೆ. ನಂತರ ಯಶ್​ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

news18-kannada
Updated:September 9, 2020, 2:20 PM IST
Actor Yash: ಡ್ರಗ್ಸ್ ತೆಗೆದುಕೊಂಡು ಹಾಳಾಗೋದು ನಿಮ್ಮ ಹಕ್ಕಲ್ಲ; ಯುವಜನತೆಗೆ ರಾಕಿ ಭಾಯ್ ಯಶ್​ ಸಂದೇಶ
ಯಶ್
  • Share this:
ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಜಾಲದ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ಯಾಂಡಲ್​ವುಡ್​ ನಟ-ನಟಿಯರಿಗೆ ಡ್ರಗ್​ ನೀಡುತ್ತಿದ್ದ ಸಾಕಷ್ಟು ಜನರನ್ನು ಅರೆಸ್ಟ್​ ಮಾಡಲಾಗುತ್ತಿದೆ. ನಟಿ ರಾಗಿಣಿ ದ್ವಿವೇದಿ ಪೊಲೀಸ್​ ಕಸ್ಟಡಿ ಅವಧಿಯನ್ನು ಐದು ದಿನ ವಿಸ್ತರಣೆ ಮಾಡಿದ್ದಾರೆ. ಸಂಜನಾ ಗಲ್ರಾನಿಯನ್ನು ಮಂಗಳವಾರ ಬಂಧಿಸಲಾಗಿದೆ. ಹೀಗಾಗಿ ಡ್ರಗ್​ ಜಾಲದ ವಿಚಾರದಲ್ಲಿ ಸಿನಿಮಾ ರಂಗದತ್ತ ಮಾತ್ರ ಬೊಟ್ಟು ಮಾಡಿ ತೋರಿಸುತ್ತಿರುವುದಕ್ಕೆ ನಟ-ನಟಿಯರು ಬೇಸರ ಹೊರ ಹಾಕುತ್ತಿದ್ದಾರೆ. ಈಗ ಸ್ಯಾಂಡಲ್​ವುಡ್​ ಸ್ಟಾರ್​ ನಟ ಯಶ್ ಕೂಡ ಈಗ ಅದೇ ಮಾತನ್ನು ಹೇಳಿದ್ದು, ಡ್ರಗ್​ ಸ್ಯಾಂಡಲ್​ವುಡ್​ಗೆ ಮಾತ್ರ ಸೀಮಿತವಾಗಿಲ್ಲ ಎಂದಿದ್ದಾರೆ.

ಮಾರ್ಚ್​ ತಿಂಗಳಿಂದ ಇಲ್ಲಿಯವರೆಗೆ ಸಿನಿಮಾ ಥಿಯೇಟರ್​ ಓಪನ್​ ಮಾಡಲು ಅವಕಾಶ ನೀಡಿಲ್ಲ. ಇನ್ನು, ಚಿತ್ರೀಕರಣಕ್ಕೆ ಇತ್ತೀಚೆಗಷ್ಟೇ ಅವಕಾಶ ನೀಡಲಾಗಿತ್ತು. ಇದರಿಂದ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಈ ವಿಚಾರವಾಗಿ ಮಾತನಾಡಲು ಯಶ್​ ಸೇರಿ ಅನೇಕ ಗಣ್ಯರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ಚರ್ಚೆ ನಡೆಸಿದ್ದಾರೆ. ನಂತರ ಯಶ್​ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

"ಡ್ರಗ್ಸ್ ಅನ್ನೋದು ದೇಶ ಹಾಗೂ ಜಗತ್ತಿಗೆ ಮಾರಕ. ಅದರಲ್ಲಿ ಯಾರು ಯಾರು ಇದ್ದಾರೆ ಅಂದರೆ ಅದರಲ್ಲಿ 10 ವಲಯದವರು ಇರುತ್ತಾರೆ. ಹೀಗಾಗಿ ಡ್ರಗ್​ ವಿಚಾರ ಬಂದಾಗ ಚಿತ್ರರಂಗ ಎಂದು ಹೇಳುವುದು ಸರಿಯಲ್ಲ. ಡ್ರಗ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆ ಕೆಲಸ ಮಾಡ್ತಿವೆ," ಎಂದು ಶ್ಲಾಘಿಸಿದರು.

ಯುವ ಜನತೆಗೆ ಸಂದೇಶ:

"ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಇದು ನಿಮ್ಮ ಅಪ್ಪ ಅಮ್ಮ ಕೊಟ್ಟಿರುವ ಭಿಕ್ಷೆ. ನನಗೂ ಮಕ್ಕಳಾಗಿವೆ. ಮಕ್ಕಳಿಗೆ ಏನು ಸಮಸ್ಯೆ ಆಗುತ್ತೋ ಎಂದು ಅಪ್ಪ ಅಮ್ಮದಿರು ಯೋಚನೆ ಮಾಡುತ್ತಾರೆ. ಡ್ರಗ್ಸ್ ತಗೊಂಡು ಹಾಳಾಗೋದು ನಿಮ್ಮ ಹಕ್ಕಲ್ಲ. ಅಪ್ಪ ಅಮ್ಮನಿಗಾಗಿ ಗೌರವ ತರುವ ಕೆಲಸ ಮಾಡಿ. ಮರ್ಯಾದೆಯಿಂದ ಇಂತಹ ದುಶ್ಚಟಗಳನ್ನು ಬಿಡಿ. ಅಪ್ಪ ಅಮ್ಮನಿಗಾಗಿ ಬದುಕಿ," ಎನ್ನುವ ಸಂದೇಶವನ್ನು ಯಶ್​ ನೀಡಿದ್ದಾರೆ.
Published by: Rajesh Duggumane
First published: September 9, 2020, 2:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories