KGF Chapter 2: ಕೆಜಿಎಫ್​ ಗತ್ತು ಇಡೀ ವಿಶ್ವಕ್ಕೇ ಗೊತ್ತು! ಗೂಗಲ್ ಮ್ಯಾಪ್​ನಲ್ಲೂ ರಾಕಿ ಭಾಯ್​ ಸಿನಿಮಾದೇ ಹವಾ..

ಕೆಜಿಎಫ್​ ಸೃಷ್ಟಿಮಾಡಿರವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾ ಮಾಡಿದ್ದರು. ಮಾರ್ಚ್ 27ರಂದು ಕೆಜಿಎಫ್ ಚಾಪ್ಟರ್​ 2 ಸಿನಿಮಾ ಟ್ರೈಲರ್​ ರಿಲೀಸ್​ ಆಗಲಿದೆ. ಈಗಿನಿಂದಲೇ ಟ್ರೈಲರ್​ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಗೂಗಲ್​ ಮ್ಯಾಪ್​ನಲ್ಲೂ ಕೆಜಿಎಫ್​ ಹವಾ

ಗೂಗಲ್​ ಮ್ಯಾಪ್​ನಲ್ಲೂ ಕೆಜಿಎಫ್​ ಹವಾ

  • Share this:
ಕೆಜಿಎಫ್ (KGF)​ ಎಂಬ ಒಂದು ಸಿನಿಮಾದಿಂದ ಕನ್ನಡ ಚಿತ್ರರಂಗದ ಹೆಸರೇ ಬದಲಾಯಿತು. ರಾಕಿಂಗ್​ ಸ್ಟಾರ್​ ಯಶ್ (Rocking Star Yash)​ ಅವರ ರೇಂಜ್​ ಬದಲಾಗಿತ್ತು. ಕೆಜಿಎಫ್​ ಬರೆದ ದಾಖಲೆಗಳನ್ನು ಮುರಿಯುವುದಿರಲಿ, ಅದರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಾಗಿಲ್ಲ. ಕೆಜಿಎಫ್​ ಚಾಪ್ಟರ್​ 2(KGF Chapter 2) ಸಿನಿಮಾ ಏಪ್ರಿಲ್​ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಪ್ರಿಲ್​ನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಬೇರೆ ಭಾಷೆಯ ಬಿಗ್​ ಬಜೆಟ್ (Big Budget)​ ಸಿನಿಮಾಗಳಿಗೆ ಅವರ ಅಭಿಮಾನಿಗಳೇ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಕೆಜಿಎಫ್​ 2 ಮುಂದೆ ಸಿನಿಮಾ ರಿಲೀಸ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೇವಲ ರಾಕಿಭಾಯ್  ಹೆಸರಿಗೆ ಎಲ್ಲರ ಮುಖದಲ್ಲೂ ಬೆವರು ಬರುತ್ತೆ ಅಂದರೆ, ನಮ್ಮ ಕನ್ನಡ ನಟ ಯಶ್​ ಅವರ ರೇಂಜ್ ​(Range) ಏನು ಅಂತ ಇಡೀ ವಿಶ್ವಕ್ಕೆ ಗೊತ್ತಿದೆ.

ಗೂಗಲ್​ ಮ್ಯಾಪ್​ನಲ್ಲೂ ಕೆಜಿಎಫ್​ ಹವಾ!

ಹೌದು, ಕೆಜಿಎಫ್​ ಸೃಷ್ಟಿಮಾಡಿರವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾ ಮಾಡಿದ್ದರು. ಮಾರ್ಚ್ 27ರಂದು ಕೆಜಿಎಫ್ ಚಾಪ್ಟರ್​ 2 ಸಿನಿಮಾ ಟ್ರೈಲರ್​ ರಿಲೀಸ್​ ಆಗಲಿದೆ. ಈಗಿನಿಂದಲೇ ಟ್ರೈಲರ್​ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್​ ವಿಚಾರ ಒಂದು ಸಖತ್​ ವೈರಲ್ ಆಗುತ್ತಿದೆ. ಅದನ್ನು ಕಂಡ ಅಭಿಮಾನಿಗಳು ಇದು ಕೆಜಿಎಫ್​ ಸಿನಿಮಾದ ಗತ್ತು ಅಂದರೆ ಅಂತ ಹೇಳುತ್ತಿದ್ದಾರೆ. ಗೂಗಲ್  ಮ್ಯಾಪ್​ನಲ್ಲೂ ಕೆಜಿಎಫ್​ ಅಬ್ಬರಿಸುತ್ತಿದೆ. ಸಿನಿಮಾ ಶೂಟಿಂಗ್ ಮಾಡಿದ ಸ್ಥಳಕ್ಕೆ ಗೂಗಲ್​ ಮ್ಯಾಪ್​ನಲ್ಲಿ ಕೆಜಿಎಫ್​ ಶೂಟಿಂಗ್ ಸ್ಪಾಟ್​ ಅಂತ ಲೋಕೇಷನ್​ ರೀ ನೇಮ್​ ಆಗಿದೆ.

ಎಲ್ಲೆಲ್ಲೂ ರಾರಾಜಿಸುತ್ತಿದೆ ಕೆಜಿಎಫ್!

ಕೆಜಿಎಫ್​ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಒಂದು ಕ್ರೇಜ್​ ಇತ್ತು. ಸಿನಿಮಾ ರಿಲೀಸ್​ ಆದಮೇಲೆ ಒಂದು ಟ್ರೆಂಡ್​ ಆಯ್ತು. ಇದೀಗ ಕೆಜಿಎಫ್​ ಸಿನಿಮಾ ಶೂಟಿಂಗ್​ ಮಾಡಿದ ಸ್ಥಳಗಳು ಗೂಗಲ್​ನಲ್ಲಿ ಕೆಜಿಎಫ್​ ಫಿಲ್ಮ್​ ಸ್ಪಾಟ್​ ಎಂದು ಮರುನಾಮಕರಣಗೊಂಡಿರುವುದು ಕಂಡು ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಇದು ನಮ್ಮ ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್  ಕಮೆಂಟ್​ ಮಾಡುತ್ತಿದ್ದಾರೆ. ಯಾರೂ ಮಾಡಿರದಂತಹ ಹೊಸ ಹೊಸ ದಾಖಲೆಯನ್ನು ಕೆಜಿಎಫ್​ ಸಿನಿಮಾ ಮಾಡಿದೆ ಎಂಬುದಕ್ಕೆ ಇದೂ ಕೂಡ ಸಾಕ್ಷಿ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್​​.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!

ಮಾರ್ಚ್​ 27ಕ್ಕೆ ಕೆಜಿಎಫ್​ 2 ಟ್ರೈಲರ್​ ರಿಲೀಸ್​!

‘ಕೆಜಿಎಫ್‌ 2’ ಮೇಲಿನ ನಿರೀಕ್ಷೆಗಳು ಬೆಟ್ಟದಷ್ಟಿವಿ. ಈಗಾಗಲೇ ಟೀಸರ್‌  ನಿರೀಕ್ಷೆಗಳ ಮಟ್ಟ ಎಷ್ಟಿದೆ ಅನ್ನೋದರ ಝಲಕ್‌ ತೋರಿಸಿದೆ. ಈ ಹೊತ್ತಲ್ಲೇ ಟ್ರೈಲರ್‌ ರಿಲೀಸ್‌ಗೂ ಸಿದ್ಧತೆ ನಡೆದಿದೆ. ಹೌದು, ಮಾರ್ಚ್​ 27ಕ್ಕೆ ಸಂಜೆ 6:40ಕ್ಕೆ ಕೆಜಿಎಫ್​ 2 ಟ್ರೈಲರ್​ ರಿಲೀಸ್​ ಆಗಲಿದೆ. ಈ ವಿಚಾರ ತಿಳಿದ ಫ್ಯಾನ್ಸ್​ ಫುಲ್​ ದಿಲ್​ಖುಷ್​ ಆಗಿದ್ದಾರೆ. ಬಂದ.. ಬಂದ.. ರಣಬೇಟೆಗಾರ ಬಂದ ಅಂತ ಕಮೆಂಟ್​ ಮಾಡುತ್ತಿದ್ದಾರೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಟ್ರೇಲರ್​ ಬಿಡುಗಡೆ ಆದ ಬಳಿಕ ನಿರೀಕ್ಷೆ ದುಪ್ಪಟ್ಟಾಗಲಿದೆ.

ಇದನ್ನೂ ಓದಿ: ಮತ್ತೆ ಒಂದಾಗ್ತಿದ್ದಾರೆ ಪ್ರಭಾಸ್​-ರಾಜಮೌಳಿ! ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದಾರೆ `ಬಾಹುಬಲಿ’ ಜೋಡಿ

ರೇಸ್​ನಿಂದ ಹಿಂದೆ ಸರಿದ ಬೇರೆ ಭಾಷೆ ಸಿನಿಮಾಗಳು!

ರಾಕಿಭಾಯ್​ಗೆ ಸೆಡ್ಡು ಹೊಡೆಯೋಕೆ ಬೇರೆ ಭಾಷೆಯ ಚಿತ್ರಗಳು ಹಸಿದ ತೋಳಗಳಂತೆ ಕಾದು ಕುಳಿತಿದ್ದರು. ಆದರೆ, ಸಿಂಹದಂತಹ ರಾಕಿ ಘರ್ಜನೆಗೆ ಎಲ್ಲರೂ ರೇಸ್​ನಿಂದ ಹಿಂದೆ ಸರಿದಿದ್ದಾರೆ. ಬಾಲಿವುಡ್​ನ ಅಮೀರ್​ ಖಾನ್​ ಅವರ ಲಾಲ್​ ಸಿಂಗ್ ಛಡ್ಡಾ ಅವರ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುವುದಕ್ಕೆ ನಿರ್ಧರಿಸಿತ್ತು. ನಂತರ ರಿಲೀಸ್​ ಡೇಟ್​ ಬದಲಾಯಿಸಿಕೊಂಡಿದೆ. ಇನ್ನೂ ಏಪ್ರಿಲ್ ತಿಂಗಳಿನಲ್ಲೇ ತಮಿಳು ನಟ ವಿಜಯ್​ ನಟನೆಯ ಬೀಸ್ಟ್​ ಸಿನಿಮಾ ತೆರೆಗೆ ಬರಲಿದೆ. ನೆಟ್ಟಿಗರು ಸಿನಿಮಾ ಡೇಟ್ ಚೇಂಜ್​ ಮಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Published by:Vasudeva M
First published: