ಟಿಕ್​ ಟಾಕ್​ನಲ್ಲೂ ದಾಖಲೆ ಬರೆದ ಕೆ.ಜಿ.ಎಫ್​​ ಸಿನಿಮಾ!

KGF: ಪ್ರಶಾಂತ್​ ನೀಲ್​ ನಿರ್ದೇಶನ ಕೆ.ಜಿ.ಎಫ್​​ ಸಿನಿಮಾ ದಕ್ಷಿಣ ಸಿನಿಮಾರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಬೇರೆ ಭಾಷಿಗರಿಗೆ ಕೂಡ ಕನ್ನಡದ ಕೆ.ಜಿ.ಎಫ್ ಚಿತ್ರ​​ ಎಂತದ್ದು ಎಂಬುದು ತೋರಿಸಿಕೊಟ್ಟಿತ್ತು. ಅದಲ್ಲದೆ ಚಿತ್ರಗಳಿಕೆಯಲ್ಲೂ ದಾಖಲೆ ಬರೆದಿತ್ತು. ಇತ್ತ ಯ್ಯೂಟೂಬ್​, ಟ್ವಿಟ್ಟರ್​ ಹೀಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಕೆ.ಜಿ.ಎಫ್​ ಸಿನಿಮಾ ಒಂದಲ್ಲಾ ಒಂದು ದಾಖಲೆಯನ್ನು ನಿರ್ಮಿಸುತ್ತಾ ಬಂದಿದೆ.

news18-kannada
Updated:May 16, 2020, 1:00 PM IST
ಟಿಕ್​ ಟಾಕ್​ನಲ್ಲೂ ದಾಖಲೆ ಬರೆದ ಕೆ.ಜಿ.ಎಫ್​​ ಸಿನಿಮಾ!
ಕೆ.ಜಿ.ಎಫ್​
  • Share this:
ರಾಕಿಂಗ್​​ಸ್ಟಾರ್​​ ಯಶ್​ ಅಭಿನಯದ ಕೆ.ಜಿ.ಎಫ್​​ ಸಿನಿಮಾ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಮುರಿದಿದೆ. ಇದೀಗ ಟಿಕ್​ ಟಾಕ್​ನಲ್ಲಿ ಮತ್ತೊಂದು ದಾಖಲೆಯನ್ನು ಪುಡಿ ಮಾಡಿದ ಸಾಧನೆ ಮಾಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನ ಕೆ.ಜಿ.ಎಫ್​​ ಸಿನಿಮಾ ದಕ್ಷಿಣ ಸಿನಿಮಾರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಬೇರೆ ಭಾಷಿಗರಿಗೆ ಕೂಡ ಕನ್ನಡದ ಕೆ.ಜಿ.ಎಫ್ ಚಿತ್ರ​​ ಎಂತದ್ದು ಎಂಬುದು ತೋರಿಸಿಕೊಟ್ಟಿತ್ತು. ಅದಲ್ಲದೆ ಚಿತ್ರಗಳಿಕೆಯಲ್ಲೂ ದಾಖಲೆ ಬರೆದಿತ್ತು. ಇತ್ತ ಯ್ಯೂಟೂಬ್​, ಟ್ವಿಟ್ಟರ್​ ಹೀಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಕೆ.ಜಿ.ಎಫ್​ ಸಿನಿಮಾ ಒಂದಲ್ಲಾ ಒಂದು ದಾಖಲೆಯನ್ನು ನಿರ್ಮಿಸುತ್ತಾ ಬಂದಿದೆ.

ಇದೀಗ ವಿಶ್ವದಲ್ಲಿ ಅತಿ ಹೆಚ್ಚು ಜನರು ಬಳಸುತ್ತಿರುವ ಟಿಕ್​ ಟಾಕ್​ ಆ್ಯಪ್​ನಲ್ಲಿ ಕೆ.ಜಿ.ಎಫ್​ ಸಿನಿಮಾದ ಹ್ಯಾಶ್​ಟ್ಯಾಗ್​ ಅನ್ನು ಬರೋಬ್ಬರಿ 3.4 ಬಿಲಿಯನ್​ನಷ್ಟು​​ ನಮೂದಿಸಿದ್ದಾರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮಾತ್ರವಲ್ಲದೆ, ಭಾರತದ ಸಿನಿಮಾಗಳಲ್ಲಿ ಇಷ್ಟೊಂದು ಹ್ಯಾಶ್​ಟ್ಯಾಗ್​ ನಮೂದಿಸಿದ ಸಿನಿಮಾದಲ್ಲಿ ಕೆ.ಜಿ.ಎಫ್ ​ಮಾತ್ರವಾಗಿದೆ.

ಕೆ.ಜಿ.ಎಫ್​


ಕೆ.ಜಿ.ಎಫ್​-2 ಸಿನಿಮಾ ತೆರೆಮೇಲೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಸಿನಿಮಾದ ಕೆಲಸಗಳು ಮುಕ್ಕಾಲು ಭಾಗ ಪೂರ್ಣಗೊಂಡಿದ್ದು, ಕೆಲವೇ ಕೆಲಸಗಳು ಬಾಕಿ ಉಳಿದಿದೆ. ಚಿತ್ರತಂಡ ಅಕ್ಟೋಬರ್​ 23ರಂದು ಬಿಡುಗಡೆ ಮಡುವುದಾಗಿ ಹೇಳಿದೆ. ಆದರೆ ಲಾಕ್​ಡೌನ್​ನಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ​​ ಸಾಧ್ಯತೆ ಹೆಚ್ಚಿದೆ.

ಕೆ.ಜಿ.ಎಫ್-2 ಸಿನಿಮಾದಲ್ಲಿ ಬಾಲಿವುಡ್​ ಖ್ಯಾತ ನಟರಾದ ​​ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೆಯೇ ರವೀನಾ ಟಂಡನ್​ ಕೂಡ ನಟಿಸಿದ್ದಾರೆ. ಹಾಗಾಗಿ ಕೆ.ಜಿ.ಎಫ್​-1ರಂತೆ ಚಾಪ್ಟರ್​-2 ಸಿನಿಮಾದ ಮೇಲೆ ಬಹುನಿರೀಕ್ಷೆ ಇದೆ. ಯಶ್​ ಅಭಿಮಾನಿಗಳಂತು ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದಾರೆ.

ಲಾಕ್​ಡೌನ್​ ನಡುವೆ ಫುಡ್​​ ಡೆಲಿವರಿ ಮಾಡುತ್ತಿದ್ದಾರೆ ಈ ಕ್ರೀಡಾಪಟು!
First published: May 16, 2020, 8:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading