KGF 2 Trailer: `ರಣ ಬೇಟೆಗಾರ’ನ ರೌದ್ರಾವತಾರ.. ಕೆಜಿಎಫ್​ 2 ಟ್ರೈಲರ್​ ರಿಲೀಸ್​, ರಾಕಿ ಭಾಯ್​ ಅಬ್ಬರಕ್ಕೆ ಯೂಟ್ಯೂಬ್​ ಕ್ರ್ಯಾಶ್​!

ಕೆಜಿಎಫ್​ 2 ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಶಾಕ್​ ಆಗಿದ್ದಾರೆ. ಇದು ನಮ್ಮ ಸಿನಿಮಾನಾ? ಅನ್ನೋ ಪ್ರಶ್ನೆ ಕಾಡಿದೆ. ಯಾಕೆಂದರೆ ಕೆಜಿಎಫ್​ 2 ಎಲ್ಲರ ನಿರೀಕ್ಷೆಗೂ ಮೀರಿದೆ. ಅಬ್ಬಬ್ಬಾ.. ಅದನ್ನು ನಾಲ್ಕು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೆಜಿಎಫ್​ 1 ಸಿನಿಮಾ ಮಾಡಿದ್ದ ಕ್ರೇಜ್​ ಕೆಜಿಎಫ್​ 2 ಟ್ರೈಲರ್​ ಡಬಲ್​ ಮಾಡಿದೆ. ಯಾವಾಗಪ್ಪ ಏಪ್ರಿಲ್​ 14 ಬರುತ್ತೆ ಅಂತ ಟ್ರೈಲರ್​ ನೋಡಿದ ಪ್ರತಿಯೊಬ್ಬರು ಕಾಯುತ್ತಿದ್ದಾರೆ.

ಕೆಜಿಎಫ್​ 2 ಟ್ರೈಲರ್​ ರಿಲೀಸ್​

ಕೆಜಿಎಫ್​ 2 ಟ್ರೈಲರ್​ ರಿಲೀಸ್​

  • Share this:
ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಕೆಜಿಎಫ್ 2(KGF 2) ಸಿನಿಮಾ ಏಪ್ರೀಲ್ 14ರಂದು ವರ್ಲ್ಡ್ ವೈಡ್ ರಿಲೀಸ್(World Wide Release) ಆಗುತ್ತಿದೆ. ಇದೀಗ ಕೆಜಿಎಫ್​ 2 ಚಿತ್ರದ ಟ್ರೈಲರ್​ ರಿಲೀಸ್(KGF 2 Trailer Release)​ ಆಗಿದೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರು ಶಾಕ್(Shock)​ ಆಗಿದ್ದಾರೆ. ಇದು ನಮ್ಮ ಸಿನಿಮಾನಾ? ಅನ್ನೋ ಪ್ರಶ್ನೆ ಕಾಡಿದೆ. ಯಾಕೆಂದರೆ ಕೆಜಿಎಫ್​ 2 ಎಲ್ಲರ ನಿರೀಕ್ಷೆಗೂ ಮೀರಿದೆ. ಅಬ್ಬಬ್ಬಾ.. ಅದನ್ನು ನಾಲ್ಕು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೆಜಿಎಫ್​ 1 ಸಿನಿಮಾ ಮಾಡಿದ್ದ ಕ್ರೇಜ್​(Craze) ಕೆಜಿಎಫ್​ 2 ಟ್ರೈಲರ್​ ಡಬಲ್​ ಮಾಡಿದೆ. ಯಾವಾಗಪ್ಪ ಏಪ್ರಿಲ್​ 14 ಬರುತ್ತೆ ಅಂತ ಟ್ರೈಲರ್​ ನೋಡಿದ ಪ್ರತಿಯೊಬ್ಬರು ಕಾಯುತ್ತಿದ್ದಾರೆ. ಕಾರ್ಯಕ್ರಮದಲ್ಲಿ ದಿಗ್ಗಜರು ಭಾಗಿಯಾಗಿದ್ದರು. ಹಿಂದೆಂದೂ ಈ ರೀತಿಯ ಟ್ರೈಲರ್​ ಅನ್ನು ಯಾರು ನೋಡಿರಲಿಲ್ಲ. ಕಣ್ಣಿಗೆ ಇದು ಒಂದು ಹಬ್ಬದ ರೀತಿ ಎಂದು ಅಭಿಮಾನಿಗಳು ಫುಲ್​ ದಿಲ್​ಖುಷ್​ ಆಗಿದ್ದಾರೆ.

ರಾಕಿ ಭಾಯ್​ಗೆ ಸೌತ್​ ಸ್ಟಾರ್ಸ್​ ಸಾಥ್​!

ರಾಕಿ ಭಾಯ್​ ಯಶ್​​ಗೆ ದಕ್ಷಿಣ ಚಿತ್ರರಂಗದ ಸೂಪರ್​ ಸ್ಟಾರ್​ ಕಲಾವಿದರು ಸಾಥ್ ನೀಡಿದ್ದಾರೆ. ಶಿವರಾಜ್​​ಕುಮಾರ್​  ಕೆಜಿಎಫ್​ 2 ಕನ್ನಡ ವರ್ಷನ್ ಟ್ರೈಲರ್​ ರಿಲೀಸ್ ಮಾಡಿದ್ದಾರೆ.​ ರಾಮ್ ಚರಣ್ ತೇಜ ತೆಲುಗು ಟ್ರೈಲರ್​ ಲಾಂಚ್ ಮಾಡಿದ್ದಾರೆ. ತಮಿಳು ನಟ  ಸೂರ್ಯ ತಮಿಳು ಟ್ರೈಲರ್​ ಲಾಂಚ್​ ಆಗಿದೆ. ನಟ ಪೃಥ್ವಿರಾಜ್​ ಮಲಯಾಳಂ ವರ್ಷನ್​ ಟ್ರೈಲರ್​ ಲಾಂಚ್​ ಮಾಡಿದ್ದಾರೆ ಹಿಂದಿಯಲ್ಲಿ ನಟ ಫರಾನ್​ ಅಕ್ತರ್​ ಟ್ರೈಲರ್​ ಲಾಂಚ್​ ಮಾಡಿದ್ದಾರೆ.

ಇದನ್ನೂ ಓದಿ: RCB ಪಂದ್ಯದಲ್ಲಿ ಕೆಜಿಎಫ್​ 2 ಟ್ರೈಲರ್? ಯಾರು ಮಾಡದ ಸಾಹಸಕ್ಕೆ ಕೈ ಹಾಕಿದ್ರಾ ರಾಕಿ ಭಾಯ್​?

ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಮೊದಲ ಬಾರಿಗೆ ಕರಣ್ ಜೋಹರ್ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಲ್ಲದೆ, ನಡೆಸಿಕೊಡುತ್ತಿರುವುದು ಸಹ ಕನ್ನಡ ಅಭಿಮಾನಿಗಳು ಸಹ ಸಖತ್ ಥ್ರಿಲ್ ಆಗುವಂತಾಗಿದೆ.

ಅಧೀರ ಪಾತ್ರ ಕಂಡು ಥ್ರಿಲ್ ಆದ ಫ್ಯಾನ್ಸ್​!

ಇಂದು ಬಿಡುಗಡೆಯಾಗಿರುವ ಟ್ರೈಲರ್ ನಲ್ಲ ಸಂಜಯ್ ದತ್ ದರ್ಶನ ಆಗಿದೆ. ಭಯಾನಕವಾಗಿರುವ ಅಧೀರ ಪಾತ್ರವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸುತ್ತಿದೆ.

ಇದನ್ನೂ ಓದಿ: ಅಪ್ಪು ನಿವಾಸಕ್ಕೆ ಸಂಜಯ್​ ದತ್ ಭೇಟಿ ​.. ಕೆಜಿಎಫ್ 2 ಟ್ರೈಲರ್​ ರಿಲೀಸ್​​ಗಾಗಿ ಬೆಂಗಳೂರಿಗೆ ಬಂದಿರುವ ಅಧೀರ!

ಇದು ನಮ್ಮ ಕರ್ನಾಟಕದ ಹೆಮ್ಮೆ ಎಂದ ಅಶ್ವತ್ಥ್​ ನಾರಾಯಣ!

ಕೆಜಿಎಫ್ 2 ಆದ್ಬುತ ಸಿನಿಮಾ ಅಂತ ಅನ್ನಿಸ್ತಿದೆ. ಟ್ರೈಲರ್ ನೋಡುತ್ತಿದ್ರೆ ಹಾಲಿವುಡ್ ಲೆವೆಲ್​ನಲ್ಲಿದೆ. ಇದು ನಮ್ಮ ಕರ್ನಾಟಕದ ಹೆಮ್ಮೆ ಇಲ್ಲಿಂದ ಶುರುವಾದ ಜರ್ನಿ ಭಾರತದ ಹೆಮ್ಮೆ ಆಗಿರೋದು ಖುಷಿಯಾಗುತ್ತೆ. ಹಾಲಿವುಡ್ ಸಿನಿಮಾಗಳಂತಿರೋ ಟ್ರೈಲರ್ ಇಷ್ಟವಾಗಿದೆ ಅಂತ ಭಾವಿಸಿದ್ದೇನೆ. ನಮ್ಮ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡ್ತಿರೋದು ವಿಶೇಷವಾಗಿದೆ. ನಿರೀಕ್ಷೆಗಳನ್ನ ಮೀರಿ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಲಿದೆ ಈ ಸಿನಿಮಾ ಎಂದು ಅಶ್ವತ್ಥ್​ ನಾರಾಯಣ ಹೇಳಿದರು. ಕೆಜಿಎಫ್ ಒಂದನ್ನ ಜನ ಗೆಲ್ಲಿಸಿದ್ರು. ಈಗ ಕೆಜಿಎಫ್ 2 ಕೂಡ ಗೆಲ್ಲಿಸ್ತಾರೆ . ಪ್ರಶಾಂತ್‌ ನೀಲ್ ಮ್ಯಾಜಿಕ್ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೆಜಿಎಫ್ 2 ಸಿನಿಮಾದಿಂದ ನಾನು ಸಾಕಷ್ಟು ಕಲಿತೆ ಎಂದ ಸಂಜಯ್​!

ನನ್ನ ವೃತ್ತಿಜೀವನದಲ್ಲಿ ಇದೊಂದು ದೊಡ್ಡ ಲೆಸೆನ್. ನಟ ಯಶ್ ತುಂಬಾ ಹಂಬಲ್​ ವ್ಯಕ್ತಿ ಎಂದು ಸಂಜಯ್​ ದತ್​ ಹೇಳಿದರು. ಭುವನ್​ ಕ್ಯಾಮರಾ ವರ್ಕ್​ ನೋಡಿ ಐ ಲವ್​ಯೂ ಎಂದು ಸಂಜಯ್​ ದತ್​ ಹೇಳಿದ್ದಾರೆ. ಯಶ್ ನನ್ನ ಸಹೋದರ, ಯಶ್ ಫೆಂಟಾಸ್ಟಿಕ್ ಕೋ ಸ್ಟಾರ್. ಕೆಜಿಎಫ್ ಮಾಡಲು ಪ್ರೋತ್ಸಾಹಿಸಿದ ನನ್ನ ಪತ್ನಿಗೆ ಸ್ಪೆಷಲ್ ಥ್ಯಾಂಕ್ಸ್ ಎಂದು ಸಂಜಯ್​ ದತ್​ ಹೇಳಿದರು.

ಎಲ್ಲರಿಗೂ ಧನ್ಯವಾದ ಹೇಳಿದ ರಾಕಿಂಗ್ ಸ್ಟಾರ್​!

‘ನಾನು ಯಾವತ್ತೂ ನರ್ವಸ್ ಆಗಲ್ಲ. ಆದರೆ ಇವತ್ತು ಯಾಕೋ ಕೊಂಚ ನರ್ವಸ್ ಆದ ಹಾಗೆ ಅನ್ನಿಸುತ್ತಿದೆ. ಎಂದು ಮಾತು ಆರಂಭಿಸಿದ ಯಶ್ ಮೊದಲು ಪುನೀತ್‌ರನ್ನು ನೆನಪಿಸಿಕೊಂಡಿದ್ದಾರೆ. " ನನಗೆ ಯಾವಾಗಲೂ ಅಪ್ಪು ಅವರ ಬಗ್ಗೆ ಮಾತನಾಡೋದು ಶಿವಣ್ಣ ಅಳೋದನ್ನು ನೋಡೊದಕ್ಕೆ ಆಗೋದಿಲ್ಲ. ಶಿವಣ್ಣ ನನ್ನ ಅಣ್ಣ. ಹೇಳಬೇಕು ಅಂದರೇ ಹೊಂಬಾಲೆ ಫಿಲ್ಮ್ ಏನಿದೆ ಅದು ಅಪ್ಪು ಅವರ 'ನಿನ್ನಿಂದಲೇ' ಸಿನಿಮಾ ಮೂಲಕ ಆರಂಭ ವಾಗಿದ್ದು. ಹೀಗಾಗಿ ಇವತ್ತು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ ಇಡೀ ತಂಡ’ ಎಂದು ಹೇಳಿದ್ದಾರೆ.
Published by:Vasudeva M
First published: