ಕೆಜಿಎಫ್ 2 (KGF 2).. ಸದ್ಯಕ್ಕೆ ಇಡೀ ವಿಶ್ವವೇ ಚರ್ಚೆ ಮಾಡುತ್ತಿರುವ ಸಿನಿಮಾ. ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಕೆಜಿಎಫ್ (KGF-1) ಭಾಗ 1 ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಜೊತೆಗೆ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದರು. ರಾಕಿ ಬಾಯ್ ಯಶ್ (Yash) ಕೂಡ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್(Pan India Star) ಆಗಿದ್ದಾರೆ. ಸಿನಿಮಾ ರಂಗದಲ್ಲಿ ಬಾರಿ ಸದ್ದು ಮಾಡಿ ಇತಿಹಾಸ ಸೃಷ್ಟಿಸಿದ ಕೆಜಿಎಫ್ ಮುಂದುವರಿದ ಭಾಗವಾಗಿ ಕೆಜಿಎಫ್-2 (KGF -2) ಇನ್ನೇನು ಅಬ್ಬರಿಸಲು ಸಿದ್ಧವಾಗಿ ನಿಂತಿದೆ. ಈಗಾಗಲೇ ಚಿತ್ರದ ಟ್ರೈಲರ್(Trailer) ಲಾಂಚ್ ಆಗಿದ್ದು, ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸಿನಿರಸಿಕರಿಂದ 'ಕೆಜಿಎಫ್: ಚಾಪ್ಟರ್ 2'(KGF Chapter 2) ಟ್ರೈಲರ್ಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಸಿನಿಮಾ ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ. ಇಡೀ ಭಾರತವಷ್ಟೇ ಅಲ್ಲದೇ ವಿಶ್ವವೇ ರಾಕಿ ಭಾಯ್ ಅಬ್ಬರ ನೋಡಲು ಕಾಯುತ್ತಿದ್ದಾರೆ.
12 ಗಂಟೆಯಲ್ಲಿ 5000 ಸಾವಿರ ಟಿಕೆಟ್
ಹೌದು, ಕೆಜಿಎಫ್ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್ಆರ್ಆರ್’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಇದೀಗ ನಮ್ಮ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಸರದಿ. ಕೆಜಿಎಫ್ 2 ನೋಡಲು ಇಡೀ ವಿಶ್ವದ ಜನರು ಕಾಯುತ್ತಿದ್ದಾರೆ. ಹೌದು, ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ 5000 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಇದನ್ನು ನೋಡಿದರೆ ತಿಳಿಯುತ್ತೆ ರಾಕಿಭಾಯ್ನ ಹವಾ ಎಷ್ಟಿದೆ ಅಂತ.
ಇದು ರಾಕಿ ಭಾಯ್ ಹವಾ ಎಂದ ಅಭಿಮಾನಿಗಳು!
ಕೆಜಿಎಫ್ 2 ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ದೆಹಲಿ ಸೇರಿ ಹಲವೆಡೆ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್ ಸೇರಿ ಹಲವು ಕಲಾವಿದರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ಗೆ 10 ದಿನವಷ್ಟೇ ಬಾಕಿ ಇದೆ. ಭಾರತದಲ್ಲಿ ಇನ್ನೂ ಆನ್ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್ ಆಗಿಲ್ಲ. ಆದರೆ, ಹೊರ ದೇಶಗಳಲ್ಲಿ ಕೆಜಿಎಫ್ 2 ಸಿನಿಮಾದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಕೇವಲ 12 ಗಂಟೆಗಳಲ್ಲಿ 5000 ಟಿಕೆಟ್ ಸೇಲ್ ಆಗಿರುವುದು ದೊಡ್ಡ ಮಟ್ಟದಲ್ಲಿ ಸಿಗ್ನಲ್ ಕೊಟ್ಟಿರುವಂತಿದೆ. ಇದನ್ನೂ ಕಂಡ ಯಶ್ ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: KGF- 2 ಹಿಟ್ ಆಗದಿದ್ದರೆ ಏನಾಗಬಹುದು? ಪ್ರಶಾಂತ್ ನೀಲ್ಗೆ ಈ ಚಿತ್ರ ಹೇಗೆ ನಿರ್ಣಾಯಕವಾಗಿದೆ..?
ಕೆಜಿಎಫ್ 2 ಗೆ ಸಂಭಾವನೆ ಪಡೆದಿಲ್ಲ ರಾಕಿಂಗ್ ಸ್ಟಾರ್!
ಯಶ್ ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ. ಸಿನಿಮಾ ಶೂಂಟಿಂಗ್ ಮುಗಿದು, ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಆದರು ಇನ್ನೂ ಸಂಭಾವನೆ ಪಡೆದಿಲ್ಲ ಎಂದರೆ ಅಚ್ಚರಿ ಆಗ ಬಹುದು. ಆದರೆ ಯಸ್ ಬೇರೆಯದ್ದೇ ಪ್ಲ್ಯಾನ್ನಲ್ಲಿ ಇದ್ದಾರೆ. ಪೇಮೆಂಟ್ ಪಡೆದುಕೊಂಡಿಲ್ಲ ಅಂದರೆ, ಈ ಸಿನಿಮಾವನ್ನು ಫ್ರೀಯಾಗಿ ರಾಕಿ ಭಾಯ್ ಸಿನಿಮಾ ಮಾಡಿಕೊಟ್ಟಿಲ್ಲ. ಹಾಗಿದ್ದರೆ, ಹೇಗೆ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಕೇಳಬೇಡಿ. ಹೌದು ಈ ಸಿನಿಮಾದಲ್ಲಿ ರಾಕಿ ಭಾಯ್ ಶೇರ್ ಪಡೆಯಲಿದ್ದಾರೆ.
ಇದನ್ನೂ ಓದಿ: ಬಹು ನಿರೀಕ್ಷಿತ 'Vikrant Rona' ರಿಲೀಸ್ ಯಾವಾಗ ಗೊತ್ತಾ? 3Dಯಲ್ಲಿ ಹೇಗಿರಲಿದೆ ಕಿಚ್ಚನ ಆರ್ಭಟ?
ಶೇರ್ ಪಡೆದುಕೊಳ್ಳಲಿದ್ದಾರೆ ರಾಕಿಂಗ್ ಸ್ಟಾರ್ ಯಶ್!
ನಟ ಯಶ್ ಚಿತ್ರಕ್ಕೂ ಮೊದಲೇ ಇಷ್ಟು ಅಂತ ಸಂಭಾವನೆ ಪಡೆಯುವುದಿಲ್ಲ. ಬದಲಿಗೆ ಅವರು ಚಿತ್ರದಲ್ಲಿ ಶೇರ್ ಪಡೆದುಕೊಳ್ಳುತ್ತಾರೆ. ಚಿತ್ರದಲ್ಲಿ ಎಷ್ಟೇ ಲಾಭ ಬಂದರು ಇಂತಿಷ್ಟು ಪರ್ಸೆಂಟ್ ಶೇರ್ ಎಂದು ಪಡೆದುಕೊಳ್ಳಲಿದ್ದಾರೆ. ಲಾಭ ಹೆಚ್ಚಾದರೆ ಬರುವ ಮೊತ್ತ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಹಿಟ್ ಅಗಲಿಲ್ಲವಾದರೆ ಬರುವ ಮೊತ್ತ ಕಡಿಮೆ ಆಗುತ್ತದೆ. ಯಶ್ ಮಾತ್ರ ಅಲ್ಲ ಸುದೀಪ್ ಸೇರಿದಂತೆ, ಹಲವರು ಹೀಗೆ ಸಂಭಾವನೆ ಬದಲಿಗೆ ಶೇರ್ ಪಡೆದುಕೊಳ್ಳುತ್ತಾರೆ. ನಾಯಕ ನಟರು ಶೇರ್ ಪಡೆದುಕೊಳ್ಳುವ ಅಭ್ಯಾಸ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ