Yash: ಅಪ್ಪನಿಗೆ ನೀನು ಬ್ಯಾಡ್​ ಬಾಯ್​ ಎಂದ ಯಥರ್ವ್, ಫುಲ್ ವೈರಲ್ ಆಗ್ತಿದೆ ಯಶ್​ ಮಗನ ಹೊಸ ವಿಡಿಯೋ

Radhika Pandit: ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಮೂಲಕ ಹವಾ ಕ್ರಿಯೇಟ್ ಮಾಡಿದ್ದರೆ, ಇನ್ನೊಂದೆಡೆ ಅವರ ಮುದ್ದು ಪುಟಾಣಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ

ಮಕ್ಕಳೊಂದಿಗೆ ಯಶ್-ರಾಧಿಕಾ ದಂಪತಿ

ಮಕ್ಕಳೊಂದಿಗೆ ಯಶ್-ರಾಧಿಕಾ ದಂಪತಿ

  • Share this:
ರಾಧಿಕಾ ಪಂಡಿತ್ (Radhika Pandit) ಹಾಗು ರಾಕಿಂಗ್ ಸ್ಟಾರ್  ಯಶ್ (Rocking Star Yash) ಆಗಾಗ ಮುದ್ದಾದ ಮಕ್ಕಳ ಫೋಟೋಗಳನ್ನು (Kids Photo)  ಶೇರ್ ಮಾಡುತ್ತಿರುತ್ತಾರೆ. ಆ ಮುದ್ದು ಮಕ್ಕಳ ನಗು ಅಭಿಮಾನಿಗಳಿಗೆ ಒಂದು ರೀತಿಯ ರಿಲ್ಯಾಕ್ಸ್ ಭಾವನೆ ನೀಡುತ್ತದೆ. ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದು ಮಗ ಯಥರ್ವ್ ಯಶ್ (Yatharv Yash) ಹೊಸ ವಿಡಿಯೋವೊಂದು ವೈರಲ್ ಆಗಿದ್ದು, ಅಪ್ಪ – ಮಗನ ಸಂಭಾಷಣೆ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಆದರೆ ಮಗ ಯಶ್ ಮೇಲೆ ಆರೋಪ ಮಾಡಿದ್ದು, ಫ್ಯಾನ್ಸ್ ತರ ತರಹದ ಕಾಮೆಂಟ್ ಮಾಡುತ್ತಿದ್ದಾರೆ.

ಅಪ್ಪ ಬ್ಯಾಡ್​ ಬಾಯ್ ಎಂದ ಯಥರ್ವ್

ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಯಥರ್ವ್ ಸಪ್ಪೆ ಮುಖ ಮಾಡಿಕೊಂಡು ಅಮ್ಮನ ಬಳಿ ಕುಳಿತಿರುತ್ತಾನೆ. ಆಗ ಯಶ್ ಮಗನಿಗೆ ಅಪ್ಪ ಗುಡ್ ಬಾಯ್ ಅಲ್ವ ಎಂದು ಕೇಳುತ್ತಾರೆ, ಆದರೆ ಮಗ ಇಲ್ಲ ಅಪ್ಪ ಬ್ಯಾಡ್ ಬಾಯ್, ಅಮ್ಮ ಗುಡ್ ಗರ್ಲ್ಸ್ ಎನ್ನುತ್ತಾನೆ. ಪದೇ ಪದೇ ಯಶ್ ಅದೇ ಪ್ರಶ್ನೆ ಕೇಳುತ್ತಾರೆ, ಅದಕ್ಕೆ ಯಥರ್ವ್ ಕೂಡ ಅಪ್ಪ ಬ್ಯಾಡ್ ಬಾಯ್ ಎಂದು ಹೇಳುತ್ತಾನೆ. ಯಶ್ ಅದೆಷ್ಟೇ ಪ್ರಯತ್ನ ಪಟ್ಟರೂ ಸಹ ಮಗನ ಬಾಯಲ್ಲಿ ಗುಡ್ ಬಾಯ್ ಎಂದು ಹೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.
ಇನ್ನು ಕೊನೆಗೆ ಯಶ್ ಹೋಗಲೇ ಬಂದ್ಬಿಟ್ಟ, ಇವನೊಬ್ಬ ಬಾಕಿ ಇದ್ದ ಎಂದು ಪ್ರೀತಿಯಿಂದ ಅವಾಜ್ ಹಾಕಿ ನಕ್ಕಿದ್ದಾರೆ. ಈ ಮುದ್ದಾದ ವಿಡಿಯೋಗೆ ರಾಧಿಕಾ ತೀರ್ಪು ಹೊರ ಬಿದ್ದಿದೆ ಎಂದು ಕ್ಯಾಪ್ಷನ್ ಕೊಟ್ಟಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಕೆಜಿಎಫ್ 2 ಸಕ್ಸಸ್ ನಂತರ ನಟ ಯಶ್ ಮಕ್ಕಳು ಹಾಗೂ ಹೆಂಡತಿ ಜೊತೆ ಬ್ಯುಸಿ ಇದ್ದು, ಫುಲ್ ಜಾಲಿ ಮೂಡ್ನಲ್ಲಿದ್ದಾರೆ. ಅಲ್ಲದೇ, ಸ್ಯಾಂಡಲ್ವುಡ್ ಸಿಂಡ್ರೆಲಾ ಎಂದು ಪ್ರಸಿದ್ದಿ ಪಡೆದಿರುವ ರಾಧಿಕಾ ಪಂಡಿತ್ ಮದುವೆಯ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಕ್ಕಳಾದ ನಂತರ ಅವರ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ.

sandalwood actress radhika pandit posted 500th pic on instagram

ಇದನ್ನೂ ಓದಿ: ಲಲಿತ್ ಮೋದಿ - ಸುಶ್ಮಿತಾ ಸೇನ್ ಸಂಬಂಧದ ಬಗ್ಗೆ ಹೀಗಂದ್ರಾ ರಾಕಿ ಸಾವಂತ್? ಹೊಸ ಬಾಂಬ್ ಸಿಡಿಸಿದ ಕಾಂಟ್ರವರ್ಸಿ ಕ್ವೀನ್!

ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ಪುಟಾಣಿಗಳು

ಸಿನಿಮಾಗಳನ್ನು ಮಾಡದಿದ್ದರೂ ಸಹ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದು, ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಕಳೆದ ವಾರವಷ್ಟೇ ತಮ್ಮ 500ನೇ ವಿಶೇಷ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದರು. ರಾಧಿಕಾ ಪಂಡಿತ್ ಹಂಚಿಕೊಂಡಿರುವ ಈ ಸ್ಪೆಷಲ್ ಪೋಸ್ಟ್ಗೆ ಕೆಲವೇ ಗಂಟೆಗಳಲ್ಲಿ 3ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿತ್ತು, 3 ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿದ್ದರು.ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನಮಿತಾ ಫುಲ್ ಮಿಂಚಿಂಗ್, ಅಂದದ ಬೊಂಬೆಗೆ ಚೆಂದದ ಸಿಂಗಾರ ಅಂದ್ರು ಫ್ಯಾನ್ಸ್

ಒಂದೆಡೆ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಮೂಲಕ ಹವಾ ಕ್ರಿಯೇಟ್ ಮಾಡಿದ್ದರೆ, ಇನ್ನೊಂದೆಡೆ ಅವರ ಮುದ್ದು ಪುಟಾಣಿಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಹವಾ ಸೃಷ್ಟಿ ಮಾಡಿದ್ದಾರೆ ಎಂದರೆ ತಪ್ಪಲ್ಲ. ಹೌದು, ಐರಾ ಹಾಗೂ ಯಥರ್ವನಿಗೆ ಈಗಾಗಲೇ ಫ್ಯಾನ್ಗಳಿದ್ದು, ಅವರ ಹೆಸರಿನ ಫ್ಯಾನ್ ಪೇಜ್ಗಳು ಸಹ ಸಾಮಾಜಿಕ ಜಾಲಾತಾಣದಲ್ಲಿದೆ. ಅವರದ್ದೇ ಆದ ಅಭಿಮಾನಿ ಬಳಗವನ್ನು ಈ ಪುಟಾಣಿಗಳು ಹೊಂದಿವೆ.
Published by:Sandhya M
First published: