HOME » NEWS » Entertainment » ROCKING STAR YASH SHIVA RAJKUMAR AND MANY OTHERS MET KARNATAKA CM BS YEDIYURAPPA RMD

ಕೊರೋನಾದಿಂದ ಚಿತ್ರರಂಗಕ್ಕೆ ಸಂಕಷ್ಟ; ಶಿವರಾಜ್​ಕುಮಾರ್, ಯಶ್​ ಸೇರಿ ಅನೇಕ ಗಣ್ಯರಿಂದ ಸಿಎಂ ಯಡಿಯೂರಪ್ಪ ಭೇಟಿ

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಥಿಯೇಟರ್​ನಲ್ಲಿ ಕೆಲಸ ಮಾಡುವವರು, ಶೂಟಿಂಗ್​ಗೆ ಸಹಾಯ ಮಾಡುವವರು ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ. ಅವರಿಗೆ ಸಹಾಯ ನೀಡಲು ಭೇಟಿ ವೇಳೆ ಕೋರಲಾಗಿದೆ. 

news18-kannada
Updated:September 9, 2020, 1:24 PM IST
ಕೊರೋನಾದಿಂದ ಚಿತ್ರರಂಗಕ್ಕೆ ಸಂಕಷ್ಟ; ಶಿವರಾಜ್​ಕುಮಾರ್, ಯಶ್​ ಸೇರಿ ಅನೇಕ ಗಣ್ಯರಿಂದ ಸಿಎಂ ಯಡಿಯೂರಪ್ಪ ಭೇಟಿ
ಸಿಎಂ ಭೇಟಿ ಮಾಡಿದ ಸಿನಿಮಾ ತಂಡ
  • Share this:
ಕೊರೋನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ದೇಶದಲ್ಲಿ ಭಾರೀ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಣ ಮಾಡಲು ಸುದೀರ್ಘ ಲಾಕ್​ಡೌನ್​ ಘೋಷಣೆ ಮಾಡಿದ ಹೊರತಾಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಕೊರೋನಾದಿಂದ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿರುವ ಕ್ಷೇತ್ರಗಳಲ್ಲಿ ಸಿನಿಮಾ ಕ್ಷೇತ್ರ ಕೂಡ ಒಂದು. ಮಾರ್ಚ್​ ತಿಂಗಳಿಂದ ಇಲ್ಲಿಯವರೆಗೆ ಸಿನಿಮಾ ಥಿಯೇಟರ್​ ಓಪನ್​ ಮಾಡಲು ಅವಕಾಶ ನೀಡಿಲ್ಲ. ಇನ್ನು, ಚಿತ್ರೀಕರಣಕ್ಕೆ ಇತ್ತೀಚೆಗಷ್ಟೇ ಅವಕಾಶ ನೀಡಲಾಗಿತ್ತು. ಹೀಗಾಗಿ, ಈ ವಿಚಾರವಾಗಿ ಮಾತನಾಡಲು ಸಿನಿಮಾ ರಂಗದ ಗಣ್ಯರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಟ ಶಿವರಾಜ್ ಕುಮಾರ್ ನೇತೃತ್ವದ ತಂಡ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿದೆ. ಲಾಕ್​ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಿನಿ ಕ್ಷೇತ್ರದ ಕಾರ್ಮಿಕರಿಗೆ ನೆರವು ನೀಡುವಂತೆ ಗಣ್ಯರು ಮನವಿ ಮಾಡಿದ್ದಾರೆ.

ನಟ ಯಶ್, ಹಿರಿಯ ನಟಿ ತಾರಾ, ನಿರ್ಮಾಪಕ ಕೆಪಿ ಶ್ರೀಕಾಂತ್, ನಟ ದುನಿಯಾ ವಿಜಯ್, ಸಾಧು ಕೋಕಿಲ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಕೆ. ಮಂಜು, ಎ ಗಣೇಶ್ ಸೇರಿ ಅನೇಕರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುತೇಕರು ಕೆಲಸ ಕಳೆದುಕೊಂಡಿದ್ದಾರೆ. ಥಿಯೇಟರ್​ನಲ್ಲಿ ಕೆಲಸ ಮಾಡುವವರು, ಶೂಟಿಂಗ್​ಗೆ ಸಹಾಯ ಮಾಡುವವರು ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ. ಅವರಿಗೆ ಸಹಾಯ ನೀಡಲು ಭೇಟಿ ವೇಳೆ ಕೋರಲಾಗಿದೆ.
Published by: Rajesh Duggumane
First published: September 9, 2020, 1:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories