ಸಲಾಂ ರಾಕಿ ಭಾಯ್ (Salaam Rocky Bhai).. ಇದು ಕೇವಲ ಒಂದಿಬ್ಬರು ಹೇಳುತ್ತಿರುವ ಮಾತಲ್ಲ. ಇಡೀ ವಿಶ್ವವೇ ರಾಕಿ ಭಾಯ್ ಆರ್ಭಟ ಕಂಡು ಈ ಮಾತು ಹೇಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹೆಸರು ಫೇಮಸ್ ಆಗಿದೆ. ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ, ನ್ಯಾಷನಲ್ ಸ್ಟಾರ್ (National Star) ಆಗಿದ್ದಾರೆ. ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಯಾರೂ ಉಹಿಸಿರ ಯಶಸ್ಸನ್ನು ಗಳಿಸುತ್ತಿದೆ ಕೆಜಿಎಫ್ 2. ಯಾವಾಗಪ್ಪ ಕೆಜಿಎಫ್ 3 (KGF 3) ಬರುತ್ತೆ, ನೀರಿಗೆ ಬಿದ್ದ ರಾಕಿ ಭಾಯ್ ಮತ್ತೆ ಎದ್ದು ಬರ್ತಾರಾ ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಸಲಾಂ ರಾಕಿ ಭಾಯ್ ಎಂದ ಯಶ್ ಮಗಳು ಐರಾ!
ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾ ಡೈಲಾಗ್, ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಬಾಯಲ್ಲೂ ಈ ಸಿನಿಮಾದ ಡೈಲಾಗ್ ಹಾಗೂ ಹಾಡುಗಳನ್ನು ಗುನುಗುತ್ತಿದ್ದಾರೆ. ಅದರಲ್ಲೂ ಮಕ್ಕಳಿಗಂತೂ ರಾಕಿ ಭಾಯ್ ಕಂಡರೆ ಸಖತ್ ಇಷ್ಟ. ಮೊನ್ನೆಯಷ್ಟೇ ಪುಟಾಣಿ ಬಾಲಕನೊಬ್ಬ ರಾಕಿ ಭಾಯ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಮಗಳು ಐರಾ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಐರಾ ಸಲಾಂ ರಾಕಿ ಭಾಯ್ ಹಾಡನ್ನು ಮುದ್ದಾಗಿ ಹಾಡಿದ್ದಾರೆ.
ಐರಾ ವಿಡಿಯೋ ಸಿಕ್ಕಾಪಟ್ಟೆ ವೈರಲ್!
ಐರಾ ಅವರ ವಿಡಿಯೋವನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಯಶ್, 'ಪ್ರತಿದಿನ ಇದು ಇರಲೇಬೇಕು..ಎದ್ದ ಕೂಡಲೇ ರಾಕಿ ಬಗ್ಗೆ ಫನ್ ಮಾಡಲೇಬೇಕು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಎಲ್ಲರೂ ಈ ಮುದ್ದಾದ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮುಂದುವರೆದ 'ನರಾಚಿ ಅಧಿಪತಿ'ಯ ಓಟ! ಸಾವಿರ ಕೋಟಿ ಕ್ಲಬ್ ಸೇರಿದ ಕನ್ನಡದ ಕೆಜಿಎಫ್ 2
ಗೋವಾದಲ್ಲಿ ಕೆಜಿಎಫ್ 2 ನೋಡಿದ ರಾಧಿಕಾ & ಫ್ಯಾಮಿಲಿ!
ಹೌದು, ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸದ್ಯ ಗೋವಾದಲ್ಲಿ ಬಿಡು ಬಿಟ್ಟಿದೆ. ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಕೂಡ ಗೋವಾದಲ್ಲಿ. ಹೀಗೆ ಎಲ್ಲರೂ ಒಟ್ಟಾಗಿ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್ ಅಪ್ಡೇಟ್ ನೀಡಿದ್ದಾರೆ. ಕಸಿನ್ಸ್ ಹಾಗೂ ಅಮ್ಮನ ಜೊತೆ ಕೆಜಿಎಫ್ 2 ಸಿನಿಮಾ ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: KGF 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್ ಟೀಂ, ರಾಕಿ ಭಾಯ್ ಅಬ್ಬರ ಕಂಡು ದಂಗಾದ ಹಾರ್ದಿಕ್ ಪಾಂಡ್ಯ!
ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ!
ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬಂದಿದ್ದ ಕೆಜಿಎಫ್ ಚಾಪ್ಟರ್ ಒನ್ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್ ಚಾಪ್ಟರ್2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್ 2 ರಿಲೀಸ್ ಆದ ನಂತರ ಇಡೀ ವಿಶ್ವದಲ್ಲೇ ರೂಲ್ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ