ನಮ್ಮಿಬ್ಬರ ನಟನೆಯಲ್ಲಿ ರಾಧಿಕಾನೇ ಬೆಸ್ಟ್​ ​​​; ಹೆಂಡತಿ ನಟನೆ ಬಗ್ಗೆ ಯಶ್​ ಬಿಚ್ಚಿಟ್ಟ ಹೊಸ ರಹಸ್ಯ!

Rocking Star Yash: ನಾನು ಹಲವು ಭಾಷೆಗಳಲ್ಲಿ ಚಿರಪರಿಚಿತ ನಟ ಆಗಿರಬಹುದು ಆದರೆ,  ನಟನೆಯ ಲ್ಲಿ ರಾಧಿಕ ನನಗಿಂತಲೂ ಉತ್ತಮ ನಟಿ. ಚಿತ್ರದ ಆಯ್ಕೆಯಲ್ಲಿ ಆಕೆ ಬಹಳ ಜಾಗುರುಕತೆ ವಹಿಸುತ್ತಾರೆ

Seema.R | news18
Updated:July 17, 2019, 4:19 PM IST
ನಮ್ಮಿಬ್ಬರ ನಟನೆಯಲ್ಲಿ ರಾಧಿಕಾನೇ ಬೆಸ್ಟ್​ ​​​; ಹೆಂಡತಿ ನಟನೆ ಬಗ್ಗೆ ಯಶ್​ ಬಿಚ್ಚಿಟ್ಟ ಹೊಸ ರಹಸ್ಯ!
ಯಶ್​-ರಾಧಿಕಾ
  • News18
  • Last Updated: July 17, 2019, 4:19 PM IST
  • Share this:
ಸ್ಯಾಂಡಲ್​ವುಡ್​ನ ಸೂಪರ್​ ಜೋಡಿ ರಾಧಿಕಾ-ಯಶ್​​. ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಮೊದಲ ಬಾರಿ ಸಿನಿಮಾಕ್ಕೆ ಕಾಲಿಟ್ಟ ಇವರು ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಒಂದರ ಹಿಂದೆ ಒಂದು ಹಿಟ್​ ಸಿನಿಮಾಗಳನ್ನು ಕೊಟ್ಟ ಈ ಜೋಡಿಯಲ್ಲಿ ಯಾರು ಉತ್ತಮರು ಎಂಬ ಪ್ರಶ್ನೆಗೆ ಯಶ್​ ಇದೇ ಮೊದಲ ಬಾರಿ ಉತ್ತರಿಸಿದ್ದಾರೆ.

ನಾನು ಹಲವು ಭಾಷೆಗಳಲ್ಲಿ ಚಿರಪರಿಚಿತ ನಟ ಆಗಿರಬಹುದು ಆದರೆ,  ನಟನೆಯ ಲ್ಲಿ ರಾಧಿಕ ನನಗಿಂತಲೂ ಉತ್ತಮ ನಟಿ. ಚಿತ್ರದ ಆಯ್ಕೆಯಲ್ಲಿ ಆಕೆ ಬಹಳ ಜಾಗುರುಕತೆ ವಹಿಸುತ್ತಾರೆ ಎಂದು ಯಶ್​ ಹೆಂಡತಿಯನ್ನು ಹೊಗಳಿದ್ದಾರೆ.

ಯಶ್​-ರಾಧಿಕಾ


ರಾಧಿಕಾ ನಟನೆಯ ಆದಿ ಲಕ್ಷ್ಮೀ ಪುರಾಣ ಚಿತ್ರದ ಪ್ರಚಾರದ ವೇಳೆ ಹೆಂಡತಿ ರಾಧಿಕಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಯಶ್, ಆಕೆ ಒಬ್ಬ ಅದ್ಭುತ ನಟಿ. ​ ಅವರನ್ನು ಆನ್​ಸ್ಕ್ರೀನ್​ನಲ್ಲಿ ತುಂಬಾ ಮಿಸ್​ ಮಾಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ನಟನೆಯಲ್ಲಿ ಯಾಕೆ ತನಗಿಂತ ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಆಕೆಯ ನಟನ ಕೌಶಲ್ಯವನ್ನು ಜನರು ಮೆಚ್ಚಿ, ಹಲವಾರು ಪ್ರಶಸ್ತಿ ಸಿಕ್ಕಿದೆ. ಅಷ್ಟೇ ಅಲ್ಲ "ನನಗಿಂತ ಅವರಿಗೆ ಹೆಚ್ಚು ಫಿಲ್ಮ್​ ಫೇರ್​ ಪ್ರಶಸ್ತಿರಾಧಿಕಾಗೆ  ಸಿಕ್ಕಿದೆ. ಜೊತೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಎಂದಿದ್ದಾರೆ.

ಇದನ್ನು ಓದಿ: ಮಹಿಳೆಯರ ಸೀರೆ ಮೋಹಕ್ಕೆ ವೇದಿಕೆಯಾದ ಟ್ವಿಟರ್​; ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಸುತ್ತಿರುವ #SareeTwitter

ನಟನೆ ವಿಷಯದಲ್ಲಿ ನಮ್ಮಿಬ್ಬರ ನಡುವೆ ಸಣ್ಣ ಸಣ್ಣ ಜಗಳಗಳು ಆಗುತ್ತಿರುತ್ತವೆ. ನಟನೆಯಲ್ಲಿ ಏನಾದರೂ ಬದಲಾವಣೆ ಬೇಕು ಎಂದು ನಾನೇದರೂ ರಾಧಿಕಾಗೆ ಹೇಳಿದರೆ,  ಬೇರೆ ನಟರಂತೆ ನನ್ನನ್ನು ಪರಿಗಣಿಸಬೇಡಿ. ಎಲ್ಲಿ ಯಾವ ನಟನೆ ಎಂಬುದನ್ನು ಸರಿಯಾಗಿ ಹೇಳಿ. ನಾನು ಕೂಡ ಮಾಡಬಲ್ಲೆ ಎಂದು ವಾದಿಸುತ್ತಾಳೆ ಎಂದು ತಮ್ಮ ನಡುವಿನ ಜಗಳವನ್ನು ನೆನಪಿಸಿಕೊಂಡರು.
Loading...

ಅಂದಹಾಗೇ ಈವರೆಗೂ ರಾಧಿಕಾ ನಾಲ್ಕು ಬಾರಿ ಸೌಂತ್​ ಇಂಡಿಯನ್​ ಫೀಲ್ಮ್​​ ಫೇರ್​ ಪ್ರಶಸ್ತಿ ಪಡೆದರೆ, ಯಶ್​ ಎರಡು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ.

First published:July 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...