‘ಕೆಜಿಎಫ್ 2’(KGF 2) ಚಿತ್ರ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್ ಆಫೀಸ್(Box Office)ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಒಂದು ವಾರದಲ್ಲಿ 600 ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ರೆಕಾರ್ಡ್ ಬರೆಯಲು ಮುಂದಾಗಿದೆ. ಕೆಜಿಎಫ್ 2 ಸಿನಿಮಾ ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು.ಹಿಂದಿ(Hindi)ಯಲ್ಲಿ ಅತಿ ದೊಡ್ಡ ಓಪನಿಂಗ್(Biggest Opening) ಪಡೆದ ಸಿನಿಮಾ ಎಂಬ ದಾಖಲೆಯನ್ನು ಬರೆದಿರುವ ’ಕೆಜಿಎಫ್ 2’ ಬಾಲಿವುಡ್(Bollywood)ನ ಸ್ಟಾರ್ ನಟರನ್ನೇ ಹಿಂದಿಕ್ಕಿಬಿಟ್ಟಿದ್ದಾರೆ. ಘಟಾನುಘಟಿ ಹೃತಿಕ್ ರೋಷನ್(Hritik Roshan), ಅಕ್ಷಯ್ ಕುಮಾರ್(Akshay Kumar), ಆಮಿರ್ ಖಾನ್ (Aamir Khan)ಅಂಥಹವರ ಸಿನಿಮಾಗಳ ಕಲೆಕ್ಷನ್ ಅನ್ನೇ ಯಶ್(Yash)ರ ಈ ಸಿನಿಮಾ ಹಿಂದಿಕ್ಕಿದೆ. ಇದೀಗ 6ನೇ ದಿನದಲ್ಲಿ ಆಮೀರ್ ಖಾನ್ ಸಿನಿಮಾದ ದಾಖಲೆಯನ್ನೇ ರಾಕಿ ಭಾಯ್ ಮುರಿದಿದ್ದಾರೆ. ಇದನ್ನು ಕಂಡ ಖಾನ್ಗಳಿಗೆ ಭಯ ಶುರುವಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ದಂಗಲ್ ದಾಖಲೆ ಬ್ರೇಕ್ ಮಾಡಿದ ರಾಕಿ ಭಾಯ್
ಬಾಲಿವುಡ್ನಲ್ಲಿ ಕೆಜಿಎಫ್ ಕಡಿಮೆ ಅವಧಿಯಲ್ಲಿ ಅಧಿಕ ಕಲೆಕ್ಷನ್ ಮಾಡಿದ ಚಿತ್ರ ಅನ್ನೋ ದಾಖಲೆ ಮಾಡಿದೆ. ಈ ಮೂಲಕ ಆಮೀರ್ ಖಾನ್ ನಟನೆಯ ‘ದಂಗಲ್’(Dangal) ಚಿತ್ರದ ದಾಖಲೆ ಉಡೀಸ್ ಮಾಡಿದೆ. ಒಂದು ವಾರದೊಳಗೇ ‘ಕೆಜಿಎಫ್ 2’ ಹಿಂದಿ ವರ್ಷನ್ 219.56 ರೂ. ಕೋಟಿ ಸಂಗ್ರಹ ಮಾಡಿದೆ. ಬಾಲಿವುಡ್ನಲ್ಲಿ ಅತ್ಯಧಿಕ ಗಳಿಕೆ ಮಾಡಿದ್ದ ‘ದಂಗಲ್’ ಚಿತ್ರ ಮೊದಲ ವಾರದಲ್ಲಿ 197.54 ಕೋಟಿ ರೂ. ಸಂಗ್ರಹಿಸಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ರಾಕಿ ಭಾಯ್ ಬ್ರೇಕ್ ಮಾಡುವುದರಲ್ಲಿ ಸಂಶಯವೇ ಬೇಡ ಅಂತಿದ್ದಾರೆ ಯಶ್ ಅಭಿಮಾನಿಗಳು.
ರಾಕಿ ಭಾಯ್ ಎದುರು ಬೀಸ್ಟ್ ಕೂಡ ಊಸ್ಟ್!
ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾವನ್ನು ಬೀಟ್ ಮಾಡಿ ನಂ.1 ಸಿನಿಮಾವಾಗಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹೊರ ಹೊಮ್ಮಿದೆ. ತಮಿಳುನಾಡಿನಲ್ಲೇ 50 ಕೋಟಿ ಕ್ಲಬ್ ಸೇರಿದೆ. ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಅನ್ನೋ ದಾಖಲೆ ಮಾಡಿದೆ. ‘ಕೆಜಿಎಫ್ 2’ ಗಿಂತ ಹೆಚ್ಚು ಥಿಯೇಟರ್ಗಳಲ್ಲಿ ‘ಬೀಸ್ಟ್’ ಚಿತ್ರ ರಿಲೀಸ್ ಆಗಿತ್ತು. ಸೋಮವಾರ ತಮಿಳುನಾಡಿನಲ್ಲಿ ಬೀಸ್ಟ್ ಗಳಿಕೆ ನೆಲಕ್ಕಚ್ಚಿತ್ತು. ಆದರೆ ‘ಕೆಜಿಎಫ್ 2’ಗೆ ಸೋಮವಾರವೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸದ್ಯ ತಮಿಳುನಾಡಿನಲ್ಲಿ ಕೆಜಿಎಫ್ 50.27 ಕೋಟಿ ರು. ಗಳಿಕೆ ಮಾಡಿದೆ.
ಇದನ್ನೂ ಓದಿ: ರಾಕಿ ಭಾಯ್ ಮುಂದಿನ ಸಿನಿಮಾದ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್! ಯಶ್ ನೆಕ್ಸ್ಟ್ ಮೂವಿಗೆ ಇವ್ರೇ ಡೈರೆಕ್ಟರ್
ರಾಕಿ ಭಾಯ್ ಮುಂದಿನ ಸಿನಿಮಾ ಯಾವುದು?
ಹೌದು, ಕೆಜಿಎಫ್ 2 ಇಡೀ ವಿಶ್ವದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ಇದರ ಜೊತೆಗೆ ಯಶ್ ಅವರ ಮುಂದಿನ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ರಾಕಿ ಭಾಯ್ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಈ ಹಿಂದೆಯೂ ಈ ಸುದ್ದಿ ಹೆಚ್ಚು ಸೌಂಡ್ ಮಾಡಿತ್ತು. ಬಳಿಕ ಇದು ಫೇಕ್ ನ್ಯೂಸ್ ಅಂತ ಹೇಳಲಾಗಿತ್ತು. ಆದರೆ, ಈಗ ಮತ್ತೆ ಈ ಸುದ್ದಿ ಚಾಲ್ತಿಯಲ್ಲಿದೆ. ಈ ನಿರ್ದೇಶಕನ ಜೊತೆ ಯಶ್ ಮುಂದಿನ ಸಿನಿಮಾ ಮಾಡಲಿದ್ದಾರೆ ಅಂತ ಸ್ಯಾಂಡಲ್ವುಡ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೆಜಿಎಫ್ಗೂ ಮೊದಲು ಅಪ್ಪುಗೆ ಕಥೆ ಹೇಳಿದ್ರಂತೆ ಪ್ರಶಾಂತ್ ನೀಲ್! ಟೈಟಲ್ ಕೂಡ ಫಿಕ್ಸ್ ಆಗಿತ್ತು
ಯಶ್ ಮುಂದಿನ ಸಿನಿಮಾ ನರ್ತನ್ ಆ್ಯಕ್ಷನ್ ಕಟ್?
ಹೌದು, ಮಫ್ತಿ ಸಿನಿಮಾದ ನಿರ್ದೇಶಕ ಹಾಗೂ ಕೆಲ ಸಿನಿಮಾಗಳಿಗೆ ರೈಟರ್ ಆಗಿ ಕೆಲಸ ಮಾಡಿದ್ದ ನರ್ತನ್, ಯಶ್ ಅವರ ಮುಂದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಖಚಿತವಾಗಿದೆ. ಇನ್ನೂ ಯಶ್ಗಾಗಿಯೇ ಆ್ಯಕ್ಷನ್ ಕಮ್ ಲವ್ ಸ್ಟೋರಿವೊಂದನ್ನು ನರ್ತನ್ ರೆಡಿಮಾಡಿಕೊಂಡಿದ್ದಾರಂತೆ. ಯಶ್ ಜೊತೆ ಕೂಡ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಜೊತೆಗೆ ಯಶ್ ಅವರಿಗೂ ಈ ಕಥೆ ಇಷ್ಟವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ