ಅದೃಷ್ಟದ ಮನೆಯಿಂದ ಹೊರಬಂದ್ರ ರಾಕಿಂಗ್ ಸ್ಟಾರ್: ಮನೆ ಮಾಲೀಕರ ಸಂಬಂಧಿಗೆ ಧಮಕಿ ಹಾಕಿದ್ರಾ ಯಶ್ ?

ರಾಕಿಂಗ್ ಸ್ಟಾರ್ ಯಶ್, ಕಳೆದ ಐದು ವರ್ಷಗಳಿಂದ ಸಿನಿಮಾ, ತಮ್ಮ ನಟನೆ ಹಾಗೂ ಯಶೋಮಾರ್ಗದ ಸಮಾಜಮುಖಿ ಕೆಲಸಗಳಿಂದ ಮಾತ್ರವಲ್ಲ, ಬದಲಾಗಿ ಮನೆ ಬಾಡಿಗೆ ವಿವಾದದಿಂದಲೂ ಸುದ್ದಿಯಾಗ್ತಿದ್ದಾರೆ. ಈ ವಿವಾದಕ್ಕೆ ಈಗ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ.

Anitha E | news18
Updated:June 7, 2019, 8:02 PM IST
ಅದೃಷ್ಟದ ಮನೆಯಿಂದ ಹೊರಬಂದ್ರ ರಾಕಿಂಗ್ ಸ್ಟಾರ್: ಮನೆ ಮಾಲೀಕರ ಸಂಬಂಧಿಗೆ ಧಮಕಿ ಹಾಕಿದ್ರಾ ಯಶ್ ?
ಯಶ್​
  • News18
  • Last Updated: June 7, 2019, 8:02 PM IST
  • Share this:
ರಾಕಿಂಗ್ ಸ್ಟಾರ್ ಯಶ್ ಅವರಿಗೂ ಬಾಡಿಗೆ ಮನೆ ವಿವಾದಕ್ಕೂ ಮುಗಿಯದ ನಂಟು ಎಂಬಂತಾಗಿದೆ. ಕಾರಣ ಕಳೆದ ಐದಾರು ವರ್ಷಗಳಿಂದ ಈ ಬಾಡಿಗೆ ಮನೆ ವಿವಾದ ಆಗಾಗ ಸದ್ದು ಮಾಡುತ್ತಲೇ ಇದೆ. ಇನ್ನು ಈಗ ಮುಗೀತು ಎನ್ನುತ್ತಿರುವಾಗಲೇ ಈ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ರಾಕಿಂಗ್ ಸ್ಟಾರ್ ಯಶ್, ಕಳೆದ ಐದು ವರ್ಷಗಳಿಂದ ಸಿನಿಮಾ, ತಮ್ಮ ನಟನೆ ಹಾಗೂ ಯಶೋಮಾರ್ಗದ ಸಮಾಜಮುಖಿ ಕೆಲಸಗಳಿಂದ ಮಾತ್ರವಲ್ಲ, ಬದಲಾಗಿ ಮನೆ ಬಾಡಿಗೆ ವಿವಾದದಿಂದಲೂ ಸುದ್ದಿಯಾಗ್ತಿದ್ದಾರೆ. ಯಶ್ ಮತ್ತು ಕುಟುಂಬದವರು ಒಂಭತ್ತು ವರ್ಷಗಳ ಹಿಂದೆ 2010ರಲ್ಲಿ ತಿಂಗಳಿಗೆ 40 ಸಾವಿರ ರೂಪಾಯಿ ಬಾಡಿಗೆಗೆ ಈ ಮನೆಗೆ ಬಂದಿದ್ದರು. ಅಲ್ಲಿಗೆ ಬಂದ ಬಳಿಕ ಯಶ್​ಗೆ ಅದೃಷ್ಟ ಕೈ ಹಿಡಿದು ರಾಕಿಂಗ್ ಸ್ಟಾರ್ ಆದರು.

2015ರಲ್ಲಿ ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಮತ್ತು ವನಜಾ ದಂಪತಿ, ಯಶ್ ಕುಟುಂಬಕ್ಕೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಆದರೆ ಅದೃಷ್ಟದ ಮನೆ ಬಿಡಲು ಯಶ್ ತಾಯಿ ಪುಷ್ಪಾರಿಗೆ ಮನಸ್ಸಿರಲಿಲ್ಲವೋ ಏನೋ, ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಹಗ್ಗಜಗ್ಗಾಟವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಅದರಂತೆ ಸಿವಿಲ್ ಕೋರ್ಟ್ ನಾಲ್ಕು ವರ್ಷಗಳ ಬಾಡಿಗೆ ಹಣ ಕ್ಲಿಯರ್ ಮಾಡಿ ಇದೇ ಮಾರ್ಚ್ 31ರೊಳಗೆ ಮನೆ ಖಾಲಿ ಮಾಡುವಂತೆ ಸೂಚಿಸಿತು. ಆದರೆ ಯಶ್ ತಾಯಿ ಗಡುವು ವಿಸ್ತರಿಸುವಂತೆ ಕೇಳಿಕೊಂಡಾಗ ಮೇ 31ರವರೆಗೆ ಸಮಯ ನೀಡಲಾಗಿತ್ತು.

ಆದರೂ ಯಶ್ ಮನೆ ಖಾಲಿ ಮಾಡಿಲ್ಲ, ಕೋರ್ಟ್ ತೀರ್ಪನ್ನೇ ಉಲ್ಲಂಘಿಸಿದ್ದಾರೆ ಅಂತ ಮನೆ ಮಾಲೀಕರು ಆರೋಪಿಸುತ್ತಿದ್ದಾರೆ. ಜತೆಗೆ ಇದೇ ಸೋಮವಾರ ಮತ್ತೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಯಶ್ ಕಡೆಯವರು, ಇಲ್ಲ ಈಗಾಗಲೇ ಕೋರ್ಟ್‍ಗೆ ನಾವು ಬಾಡಿಗೆ ಹಣ ಕಟ್ಟಿದ್ದೇವೆ, ಮೇ 31ರಂದೇ ಮನೆ ಖಾಲಿ ಮಾಡಿ, ಬೀಗವನ್ನು ಹಸ್ತಾಂತರಿಸಿ ಆಗಿದೆ ಅಂತಿದ್ದಾರೆ. ಹೀಗೆ ಇಬ್ಬರೂ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿರುವ ಕಾರಣ, ಬಾಡಿಗೆ ಪ್ರಕರಣ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆ ದೊರೆತಿದೆ.

ಹೀಗಿರುವಾಗಲೇ ಬಾಡಿಗೆ ಮನೆ ವಿವಾದ ಈಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಕತ್ರಿಗುಪ್ಪೆ ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಅವರ ಸಂಬಂಧಿ ಡಾ. ಉಪೇಂದ್ರ ಎಂಬುವರಿಗೆ ಯಶ್ ಧಮಕಿ ಹಾಕಿದ್ದಾರೆ ಎನ್ನಲಾಗಿದೆ. ಖಾಸಗಿ ಹೋಟೆಲ್‍ ಒಂದಕ್ಕೆ ಅವ್ರನ್ನು ಕರೆಸಿಕೊಂಡ ಯಶ್, ಮನೆ ಖಾಲಿ ಮಾಡ್ತೀನಿ, ಬಾಕಿ ಹಣವನ್ನೂ ಕೊಡ್ತೀನಿ. ಆದರೆ ಕ್ಷಮೆ ಕೋರಿ ಮಾಧ್ಯಮ ಪ್ರಕಟಣೆ ಹೊರಡಿಸಬೇಕು ಎಂದು ಕಳೆದ ಮೇ ತಿಂಗಳಲ್ಲೇ ಬೆದರಿಸಿದ್ದರಂತೆ.

ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ತಮ್ಮ ವಕೀಲರೊಂದಿಗೆ ಚರ್ಚಿಸಿರುವ ಡಾ. ಉಪೇಂದ್ರ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಒಟ್ಟಾರೆ ಮೇ ಕೊನೆಗೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುತ್ತಿರುವಾಗಲೇ ಮತ್ತಷ್ಟು ಬಿಗಡಾಯಿಸುವ ಪರಿಸ್ಥಿತಿ ಬಂದಿತ್ತು. ಇದನ್ನು ಮನಗಂಡ ನಟ ಯಶ್, ಮನೆಯ ಮೂರು ಕೀಗಳನ್ನು ಹಾಗೂ ಬಾಡಿಗೆ ಹಣದ ಡಿಡಿಯನ್ನು ಮನೆ ಮಾಲೀಕರ ಪರ ವಕೀಲರಿಗೆ ಇಂದೇ ತಲುಪಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ, ಮತ್ತಷ್ಟು ವಿವಾದಕ್ಕೀಡಾಗುವ ಮುನ್ನವೇ ಬಾಡಿಗೆ ಮನೆ ವಿವಾದದಿಂದ ಯಶ್ ಹೊರ ಬಂದಿದ್ದಾರೆ.

 

Photos: ಹಾಟ್​ ಫೋಟೊಶೂಟ್​ ಮೂಲಕ ಪಡ್ಡೆಗಳ ನಿದ್ದೆಗೆಡಿಸುತ್ತಿರುವ ಅಮಿಶಾ ಪಟೇಲ್​..!


 
First published:June 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ