Yaanaa: ಅಣ್ತಮ್ಮನಿಗೆ ಲವ್ ಯೂ ಎಂದ ಸುಂದರಿ : ಆಕೆಗೆ ಯಶ್​  `ಭಾಯ್ ಅಲ್ಲವಂತೆ !

ಕೆ.ಜಿ.ಎಫ್ ಸಿನಿಮಾ ನೋಡಿದವರು ರಾಕಿ ಭಾಯ್ ಐ ಲವ್ ಯೂ ಅನ್ನದೇ ಇರೋಕೆ ಸಾಧ್ಯಾನಾ..? ರಾಜಾಹುಲಿಯ ಗತ್ತಿಗೆ ಎಲ್ಲ ಹುಡ್ಗೀರು ಫಿದಾ ಆಗಿದ್ದಾರೆ. ಆದರೆ ಆ ಫೀವರ್ ಇದೆಯಲ್ಲ ಅದು ಕೆ.ಜಿ.ಎಫ್ ಬಂದು ಆರು ತಿಂಗಳಾದರೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಯಾನ ಚಿತ್ರದ ಟ್ರೈಲರ್ ರಿಲೀಸ್ ಸಾಕ್ಷಿಯಾಯ್ತು. ಮೊದಲು ಟ್ರೈಲರ್ ನೋಡಿ, ಯಾವ ನಟಿ ಅಣ್ತಮ್ಮನಿಗೆ ಲವ್ ಯೂ ಅಂತ ಹೇಳಿದ್ದು ಅಂತ ತಿಳಿಸ್ತೀವಿ.

Anitha E | news18
Updated:June 29, 2019, 5:41 PM IST
Yaanaa: ಅಣ್ತಮ್ಮನಿಗೆ ಲವ್ ಯೂ ಎಂದ ಸುಂದರಿ : ಆಕೆಗೆ ಯಶ್​  `ಭಾಯ್ ಅಲ್ಲವಂತೆ !
ಯಾನ ಸಿನಿಮಾಗೆ ಜತೆಯಾದ ಯಶ್​
  • News18
  • Last Updated: June 29, 2019, 5:41 PM IST
  • Share this:
ಸ್ಯಾಂಡಲ್‍ವುಡ್‍ನಲ್ಲಿ ರಾಕಿಭಾಯ್ ಹವಾ ಹೇಗಿದೆ ಅಂದ್ರೆ ಹುಡಿಗಿಯರು ಯಶ್​ ಅವರನ್ನು ಭಾಯ್ ಅನ್ನೋಕೇ ರೆಡಿ ಇಲ್ಲ. ಬದಲಾಗಿ ಲವ್ ಯೂ ಯಶ್ ಅಂತಿದ್ದಾರೆ. ರಾಕಿ ನಮಗೆ ಭಾಯ್ ಅಲ್ಲ ಅಂತ ಫಿಕ್ಸಾಗೋಗಿದ್ದಾರೆ. ಎರಡನೇ ಮಗು ಆಗ್ತಿರೋ ಖುಷಿಯಲ್ಲಿ ಯಶ್ ಇದ್ರೆ, ಹೀರೋಯಿನ್ ಒಬ್ಬರು ವೇದಿಕೆಯಲ್ಲಿ ಸಾರ್ವಜನಿಕವಾಗಿ ಯಶ್‍ಗೆ ಲವ್ ಯೂ ಅಂದಿದ್ದಾರೆ.

'ಕೆ.ಜಿ.ಎಫ್' ಸಿನಿಮಾ ನೋಡಿದವರು ರಾಕಿ ಭಾಯ್ ಐ ಲವ್ ಯೂ ಅನ್ನದೇ ಇರೋಕೆ ಸಾಧ್ಯಾನಾ..? 'ರಾಜಾಹುಲಿ'ಯ ಗತ್ತಿಗೆ ಎಲ್ಲ ಹುಡ್ಗೀರು ಫಿದಾ ಆಗಿದ್ದಾರೆ. ಆದರೆ ಆ ಫೀವರ್ ಇದೆಯಲ್ಲ ಅದು 'ಕೆ.ಜಿ.ಎಫ್' ಬಂದು ಆರು ತಿಂಗಳಾದರೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಯಾನ ಚಿತ್ರದ ಟ್ರೈಲರ್ ರಿಲೀಸ್ ಸಾಕ್ಷಿಯಾಯ್ತು. ಮೊದಲು ಟ್ರೈಲರ್ ನೋಡಿ, ಯಾವ ನಟಿ ಅಣ್ತಮ್ಮನಿಗೆ ಲವ್ ಯೂ ಅಂತ ಹೇಳಿದ್ದು ಅಂತ ತಿಳಿಸ್ತೀವಿ.

Yaana Movie poster
'ಯಾನ' ಸಿನಿಮಾದ ಪೋಸ್ಟರ್


'ಯಾನ' ಸ್ಯಾಂಡಲ್‍ವುಡ್‍ನ ಫಿಲ್ಮಿ ಫ್ಯಾಮಿಲಿ ವಿಜಯಲಕ್ಷ್ಮಿ ಸಿಂಗ್ ಮತ್ತು ಜೈಜಗದೀಶ್ ದಂಪತಿಯ ಮಕ್ಕಳ ಸಿನಿಮಾ. ಈ ಕುಟುಂಬದ ಮೂರು ಬ್ಯೂಟೀಸ್ ವೈಭವಿ, ವೈನಿಧಿ, ವೈಸಿರಿ ನಾಯಕಿಯರಾಗಿ 'ಯಾನ' ಮೂಲಕ ಲಾಂಚ್ ಆಗ್ತಿದ್ದಾರೆ. ರಾಕಿಂಗ್‍ಸ್ಟಾರ್ ಯಶ್ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ರು. ಈ ವೇದಿಕೆಯಲ್ಲಿ ರಾಕಿ ಭಾಯ್ ಟ್ರೈಲರ್ ಲಾಂಚ್ ಮಾಡಿದ್ರಿಂದ ಎಕ್ಸೈಟ್ ಆಗಿದ್ದ ವೈನಿಧಿ ರಾಕಿ..., ಭಾಯ್ ಅಲ್ಲ.. ಲವ್ ಯೂ ಅಂದ್ರು...ರಾಕಿಂಗ್‍ಸ್ಟಾರ್ ಕೂಡ ಟ್ರೈಲರ್ ನೋಡಿ ಫುಲ್ ಖುಷ್ ಆಗಿದ್ರು. 'ಕೆ.ಜಿ.ಎಫ್' ಬಗ್ಗೆ ಇಡೀ ಚಿತ್ರತಂಡ ತಮ್ಮನ್ನು ತುಂಬಾ ಹೊಗಳಿದ್ದಕ್ಕೆ ಯಶ್ ಹಿಗ್ಗಲಿಲ್ಲ. ಇದೆಲ್ಲವೂ ಹೊಸತೇನಲ್ಲ, ಇದನ್ನೆಲ್ಲ ಈ ಹಿಂದೆಯೂ ಮಾಡಿದ್ದಾರೆ ಮುಂದೆಯೂ ಮಾಡ್ತಾರೆ ಅಂತ ವಿನಮ್ರವಾಗಿ ಹೇಳಿಕೊಂಡಿದ್ದು ಯಶ್‍ಗಿರೋ ಪ್ರಬುದ್ಧತೆಯನ್ನು ಎತ್ತಿ ತೋರಿಸಿತ್ತು.

ಇನ್ನು ಯಾನ ಚಿತ್ರವನ್ನು ಸ್ವತಃ ವಿಜಯ ಲಕ್ಷ್ಮಿ ಸಿಂಗ್ ನಿರ್ದೇಶನ ಮಾಡಿದ್ದಾರೆ. ಹಾಗೆ ನೋಡಿದರೆ ಸಿನಿಮಾ ರಂಗದಲ್ಲೊ ಹೀರೋಗಳನ್ನು ಲಾಂಚ್ ಮಾಡ್ತಾರೆ ಆದರೆ ಮೊದಲ ಬಾರಿಗೆ ಹೀರೋಯಿನ್‍ಗಳನ್ನು ಅದ್ಧೂರಿಯಾಗಿ ಲಾಂಚ್ ಮಾಡಲಾಗ್ತಿದೆ. ಮಗಳನ್ನು ತಮ್ಮದೇ ನಿರ್ದೇಶನದಲ್ಲಿ ಲಾಂಚ್ ಮಾಡುವ ಖುಷಿಯಲ್ಲಿದ್ದರು ವಿಜಯಲಕ್ಷ್ಮಿ ಸಿಂಗ್.ಇದನ್ನೂ ಓದಿ: HBD Srujan Lokesh: ಗೆಳೆಯ ಸೃಜನ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಡಿ ಬಾಸ್​ ದರ್ಶನ್​ ಹಾಗೂ ಕಿಚ್ಚ ಸುದೀಪ್​..!

ಇನ್ನು ಸಿನಿಮಾ ಕುಟುಂಬದಿಂದಲೇ ಬಂದು ತಾವೂ ನಾಯಕಿಯರಾಗಿ ಲಾಂಚ್ ಆಗ್ತಿರೋ ವೈನಿಧಿ, ವೈಭವಿ, ವೈಸಿರಿ ಮುಖದಲ್ಲಿ ಮಂದಹಾಸವಿತ್ತು. ಸಿನಿಮಾದಲ್ಲಿ ತಮ್ಮ ಪಾತ್ರ ಎಲ್ಲರಿಗೂ ಇಷ್ಟವಾಗುತ್ತೆ ಅನ್ನೋ ಖುಷಿಯಲ್ಲಿ ಯಾನ ಬ್ಯೂಟೀಸ್ ಥ್ರಿಲ್ಲಾಗಿದ್ದರು.

ಸ್ಯಾಂಡಲ್‍ವುಡ್‍ಗೆ ಹೊಸಬರ ಸಿನಿಮಾಗಳು ಹೊಸತೇನಲ್ಲ. ಆದರೆ ಚಿತ್ರರಂಗದ ತಾರೆಯರ ಮಕ್ಕಳೇ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಾಗ ನಿರೀಕ್ಷೆ ದುಪಟ್ಟು ಆಗುತ್ತೆ. ಈ ಮೂರು ಬ್ಯೂಟೀಸ್ ಸ್ಯಾಂಡಲ್‍ವುಡ್‍ಗೆ ಲಗ್ಗೆ ಇಡ್ತಿರೋ 'ಯಾನ' ಜುಲೈ 12ಕ್ಕೆ ರಿಲೀಸ್ ಆಗ್ತಿದೆ.

 

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​


First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ