ಕಳೆದ ಕೆಲ ದಿನಗಳಿಂದ ಬಾಲಿವುಡ್ (Bollywood) ನಲ್ಲಿ ಗುಟ್ಕಾ (Pan) ವಿಚಾರವಾಗಿ ಹಿಂದಿ ಚಿತ್ರರಂಗದ ಟಾಪ್ ಸ್ಟಾರ್ಗಳು ಸಿಕ್ಕಾಪಟ್ಟೆ ಟ್ರೋಲ್ (Troll) ಆಗುತ್ತಿದ್ದಾರೆ. ಬಾಲಿವುಡ್ನಲ್ಲಿ 'ಗುಟ್ಕಾ ಗ್ಯಾಂಗ್' (Gutka Gang) ಎಂದೇ ಅವರನ್ನು ಕರೆಯಲಾಗುತ್ತಿದೆ. ಹೀರೋ ಅಂದರೆ ಹೇಗಿರಬೇಕು ಹೇಳಿ. ಅವರು ಏನೇ ಮಾಡಿದರೂ ಜನ ಅದನ್ನು ಫಾಲೋ ಮಾಡುತ್ತಾರೆ. ಅದು ತೆರೆ ಮುಂದೆಯಾಗಲಿ, ತೆರೆ ಹಿಂದೆಯಾಗಲಿ. ಅಕ್ಷಯ್ ಕುಮಾರ್(Akshay Kumar) , ಅಜಯ್ ದೇವಗನ್ (Ajay Devgn) ಹಾಗೂ ಶಾರುಖ್ ಖಾನ್ (Shah Rukh Khan) ಈ ಮೂವರೂ ಸೂಪರ್‌ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ (Pan Masala) ಜಾಹೀರಾತಿನಲ್ಲಿ ಈ ಮೂವರು ನಟರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.ಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು.
ಹೌದು, ಕೋಟಿ ಕೋಟಿ ಹಣ ಪಡೆದು ಬಾಲಿವುಡ್ನ ತ್ರಿಮೂರ್ತಿಗಳು ಪಾನ್ ಮಸಾಲ ಆ್ಯಡ್ನಲ್ಲಿ ನಟಿಸಿ ಟ್ರೋಲ್ ಆಗುತ್ತಿದ್ದಾರೆ. ವಿಶ್ವದಾದ್ಯಂತ ನರಾಚಿ ಅಧಿಪತಿಯ ಓಟ ಮುಂದುವರೆದಿದೆ. ಇದರ ಜೊತೆಗೆ ಇದೀಗ ರಾಕಿ ಭಾಯ್ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಹೊರಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸ್ಟಾರ್ ನಟರೇ ದುಡ್ಡಿಗೆ ಬೆಲೆ ಕೊಟ್ಟು ಪಾನ್ ಮಸಲಾ ಆ್ಯಡ್ನಲ್ಲಿ ನಟಿಸಿದ್ದಾರೆ.
ಕೋಟಿ ಕೋಟಿ ಕೊಡ್ತೀವಿ ಅಂದ್ರು ಮಾಡಲ್ಲ ಎಂದ ಯಶ್!
ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಬಂದಿರುವ ಕೆಜಿಎಫ್ 2 ಸಿನಿಮಾ ಪ್ರತಿದಿನ ಒಂದಲ್ಲ ಒಂದು ದಾಖಲೆಗಳನ್ನು ಮಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ತಮ್ಮದೇ ಬ್ರ್ಯಾಂಡ್ ಸೃಷ್ಟಿಸಿದ್ದಾರೆ. ಇಡೀ ವಿಶ್ವದಲ್ಲೇ ರಾಕಿ ಭಾಯ್ ಯಾರೆಂದು ತಿಳಿದಿದೆ. 'ಕೆಜಿಎಫ್ 2' ಅದ್ಧೂರಿ ಯಶಸ್ಸಿನ ಬಳಿಕ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಯಶ್‌ಗೆ ಕೇಳಲಾಗಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ.
Yash has refused an endorsement deal with a pan masala and elaichi brand, Exceed Entertainment, the agency that manages his endorsements, said in a statement. @TheNameIsYash #Yash pic.twitter.com/uFBL8UX1Ea
— S Shyam Prasad (@ShyamSPrasad) April 30, 2022
ಇದನ್ನೂ ಓದಿ: ಮುದ್ದಾಗಿ ಸಲಾಂ ರಾಕಿ ಭಾಯ್ ಎಂದ ಐರಾ, ಮಗಳ ವಿಡಿಯೋ ಕಂಡು ಯಶ್ ಫುಲ್ ಖುಷ್!
ಅಭಿಮಾನಿಗಳ ಆರೋಗ್ಯವೇ ರಾಕಿ ಭಾಯ್ಗೆ ಮುಖ್ಯ!
'ಕೆಜಿಎಫ್' ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ. ರಾಕಿ ಭಾಯ್ ಯಶ್ 10 ರಿಂದ 99 ಕೋಟಿವರೆಗೂ ಆಫರ್ ನೀಡುತ್ತಿದ್ದ ಜಾಹೀರಾತನ್ನು ತಿರಸ್ಕರಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದರು. ಈ ಮೂವರು ಸ್ಟಾರ್‌ಗಳ ದಾರಿಯನ್ನು ಯಶ್ ಹಿಡಿಯದೆ ಇದ್ದಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: KGF 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್ ಟೀಂ, ರಾಕಿ ಭಾಯ್ ಅಬ್ಬರ ಕಂಡು ದಂಗಾದ ಹಾರ್ದಿಕ್ ಪಾಂಡ್ಯ!
ನಿಜವಾದ ಸುಲ್ತಾನ ನೀವು ಎಂದ ಫ್ಯಾನ್ಸ್!
ರಾಕಿ ಭಾಯ್ ಪಾನ್ ಮಸಲಾ ಆ್ಯಡ್ ತಿರಸ್ಕರಿಸಿರುವ ವಿಚಾರ ತಿಳಿದ ಅಭಿಮಾನಿಗಳು ಯಶ್ ಅವರ ವ್ಯಕ್ತಿತ್ವಕ್ಕೆ ಫಿದಾ ಆಗಿದ್ದಾರೆ. ದುಡ್ಡಿಗೆ ಪ್ರಾಮುಖ್ಯತೆ ನೀಡದೇ ನೀವು ನಿಜವಾದ ಸುಲ್ತಾನ ಎನಿಸಿಕೊಂಡಿದ್ದೀರಾ ಬಾಸ್ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ