ನಾವ್ ಬಂದ್ಮೇಲೆ ನಮ್ದೆ ಹವಾ: ಇನ್​ಸ್ಟಾದಲ್ಲೂ ರಾಕಿಂಗ್ ಯಶ್

Rocking star yash: ಡಿಸೆಂಬರ್ 9, 2018ರಲ್ಲಿ ಇನ್​ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ್ದ ಯಶ್, ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು.

zahir | news18-kannada
Updated:August 1, 2019, 9:27 PM IST
ನಾವ್ ಬಂದ್ಮೇಲೆ ನಮ್ದೆ ಹವಾ: ಇನ್​ಸ್ಟಾದಲ್ಲೂ ರಾಕಿಂಗ್ ಯಶ್
Rocking star yash: ಡಿಸೆಂಬರ್ 9, 2018ರಲ್ಲಿ ಇನ್​ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ್ದ ಯಶ್, ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು.
  • Share this:
'ಮಿಸ್ಟರ್ & ಮಿಸೆಸ್ ರಾಮಾಚಾರಿ' ಚಿತ್ರದಲ್ಲಿ 'ನಾವ್ ಬರೋತನಕ ಮಾತ್ರ ಬೇರೆಯವರ ಹವಾ, ನಾವ್ ಬಂದ್ಮೇಲೆ ನಮ್ದೆ ಹವಾ' ಅಂತಾ ಎಂಬ ಡೈಲಾಗ್ ಅಣಿಮುತ್ತನ್ನು ರಾಕಿಂಗ್ ಸ್ಟಾರ್ ಉದುರಿಸಿದ್ದರು. ಅದ್ಯಾವ ಘಳಿಗೆಯಲ್ಲಿ ಆ ಡೈಲಾಗ್ ಸೃಷ್ಟಿಯಾಯಿತೋ ಗೊತ್ತಿಲ್ಲ, ಆದರೆ ಆ ಬಳಿಕ ರಾಕಿ ಭಾಯ್ ತಿರುಗಿ ನೋಡಿಲ್ಲ. 'ಕೆ.ಜಿ.ಎಫ್'  ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲ ಇಂಡಿಯಾದ ಎಲ್ಲಾ ವುಡ್​ಗಳಲ್ಲೂ ತನ್ನದೇ ಹವಾ ಎಬ್ಬಿಸಿದ್ದರು.

ಇದೀಗ ಸಮಾಜಿಕ ಜಾಲತಾಣದಲ್ಲೂ ರಾಕಿ ಭಾಯ್ ನಾಗಾಲೋಟ ಮುಂದುವರೆದಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದ ದಿ ನೇಮ್ ಈಸ್ ಯಶ್ ಇದೀಗ 10 ಲಕ್ಷ ಫಾಲೋವರ್ಸ್​ ಹೊಂದುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದಿ ಯಶ್ ಒನ್ಲಿ ಅನ್ನುತ್ತಿದ್ದಾರೆ. ಹೌದು, ಕನ್ನಡ ಚಿತ್ರನಟರ ಪೈಕಿ ಇನ್​ಸ್ಟಾಗ್ರಾಂನಲ್ಲಿ 1 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಏಕೈಕ ತಾರೆ ಎಂದರೆ ಅದು ಯಶ್.

ಮದುವೆ ವಾರ್ಷಿಕೋತ್ಸವದ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಡಿಸೆಂಬರ್ 9, 2018ರಲ್ಲಿ ಇನ್​ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿದ್ದ ಯಶ್, ತಮ್ಮ ಮುದ್ದಿನ ಮಡದಿ ರಾಧಿಕಾ ಪಂಡಿತ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು.

ಸಾಮಾನ್ಯವಾಗಿ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡಿಕೊಳ್ಳುವ ಯಶ್​ಗೆ 10 ಲಕ್ಷ ಫಾಲೋವರ್ಸ್​ ಇದ್ದರೂ, ಯಶ್ ಫಾಲೋ ಮಾಡುತ್ತಿರುವುದು ಒಬ್ಬರನ್ನ ಮಾತ್ರ. ಅದು ಯಾರು ಅಂತ ಬೇರೆ ಹೇಳಬೇಕಿಲ್ಲ ತಾನೆ. ಮಿಸೆಸ್ ರಾಮಾಚಾರಿ ಅಲಿಯಾಸ್ ರಾಧಿಕಾ ಪಂಡಿತ್ ಅವರನ್ನು.


First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading