• Home
  • »
  • News
  • »
  • entertainment
  • »
  • Rocking Star Yash: 19ನೇ ಚಿತ್ರಕ್ಕೆ ಭರ್ಜರಿ ತಯಾರಿ ಮಾಡ್ತಿದ್ದಾರಂತೆ ಯಶ್​, ರಾಕಿಂಗ್ ಸ್ಟಾರ್ ಸಿನಿಮಾ ಅಪ್​ಡೇಟ್​ಗೆ ಕಾಯ್ತಿದ್ದಾರೆ ಫ್ಯಾನ್ಸ್

Rocking Star Yash: 19ನೇ ಚಿತ್ರಕ್ಕೆ ಭರ್ಜರಿ ತಯಾರಿ ಮಾಡ್ತಿದ್ದಾರಂತೆ ಯಶ್​, ರಾಕಿಂಗ್ ಸ್ಟಾರ್ ಸಿನಿಮಾ ಅಪ್​ಡೇಟ್​ಗೆ ಕಾಯ್ತಿದ್ದಾರೆ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್​

ರಾಕಿಂಗ್ ಸ್ಟಾರ್ ಯಶ್​

Yash Next Film: ಅಲ್ಲದೇ, ಯಶ್​ ಸುಮ್ಮನೆ ಯಾವುದೋ ಕಥೆಗಳನ್ನು ಒಪ್ಪಿಕೊಂಡಿಲ್ಲ, ಹಾಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಅವರ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್​ ಇಲ್ಲ.

  • Share this:

ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ನಂತರ ಯಾವ ಸಿನಿಮಾ ಮಾಡ್ತಾರೆ ಎಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಅವರ ಯಾವುದೇ ಚಿತ್ರದ ಅನೌನ್ಸ್​ ಆಗಿಲ್ಲ. ಅಭಿಮಾನಿಗಳಂತೂ (Fans) ಯಾವಾಗ ರಾಕಿಭಾಯ್ (Rocky Bhai) ಹೊಸ ಸಿನಿಮಾದ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಸದ್ಯದ ಸುದ್ದಿ ಪ್ರಕಾರ ಯಶ್​ ಅವರ 19 ನೇ ಸಿನಿಮಾದ ತಯಾರಿ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಈಗೊಂದು ಸುದ್ದಿ ಹೊರ ಬಂದಿದೆ. ಅದು ಯಶ್ ಮುಂದಿನ ಸಿನಿಮಾಗೆ ತಯಾರಿ ಮಾಡ್ತಿದ್ದಾರೆ ಎನ್ನುವುದು.  


ಸಿನಿಮಾಗೆ ಭರ್ಜರಿ ತಯಾರಿ ಮಾಡ್ತಿದ್ದಾರಂತೆ ಯಶ್ 


ಹೌದು, ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1500 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್​ ಇಡುವ ಪ್ರತಿ ಹೆಜ್ಜೆಯೂ ಬಹಳ ನಾಜೂಕಿರಬೇಕು. ಆಯ್ಕೆ ಮಾಡುವ ಸಿನಿಮಾ, ಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಯಶ್​ ಸಿನಿಮಾ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಅಲ್ಲದೇ, ಯಶ್​ ಸುಮ್ಮನೆ ಯಾವುದೋ ಕಥೆಗಳನ್ನು ಒಪ್ಪಿಕೊಂಡಿಲ್ಲ, ಹಾಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಅವರ ಸಿನಿಮಾದ ಬಗ್ಗೆ ಯಾವುದೇ ಅಪ್​ಡೇಟ್​ ಇಲ್ಲ. ಆದರೆ ಮಾಹಿತಿಯ ಪ್ರಕಾರ ಯಶ್​ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಆರಂಭಿಸಿದ್ದಾರಂತೆ.  ರಾಕಿಂಗ್ ಸ್ಟಾರ್ ತಮ್ಮ 19ನೇ ಸಿನಿಮಾಗಾಗಿ ಕಸರತ್ತು ಮಾಡುತ್ತಿದ್ದಾರಂತೆ. ಈ ಬಗ್ಗೆ ಯಶ್ ಅವರ ಟ್ರೈನರ್ ಪಾನಿಪುರಿ ಕಿಟ್ಟಿ ರಿವೀಲ್ ಮಾಡಿದ್ದು, ನಟ ತೂಕ ಇಳಿಸಲು ಸಾಕಷ್ಟು ವರ್ಕ್​ಔಟ್​ ಮಾಡುತ್ತಿದ್ದಾರಂತೆ.


ಇದನ್ನೂ ಓದಿ: ಗಿಟಾರ್ ಬಿಟ್ಟು ಡೈರೆಕ್ಟರ್ ಕ್ಯಾಪ್ ಹಾಕೋಕೆ ಸಜ್ಜಾದ ಅರ್ಜುನ್ ಜನ್ಯ, ಮ್ಯೂಸಿಕ್ ಮಾಂತ್ರಿಕನಿಗೆ ಶಿವಣ್ಣ ಸಾಥ್


ಹೊಸ ಸಿನಿಮಾದಲ್ಲಿ ಅವರ ಲುಕ್ ವಿಭಿನ್ನವಾಗಿರಲಿದೆಯಂತೆ, ಹಾಗಾಗಿ ಅದಕ್ಕೆ ಸೂಕ್ತವಂತೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪಾತ್ರದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಯಶ್​ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರಂತೆ.  ಸದ್ಯ ಸ್ಯಾಂಡಲ್​ವುಡ್​ನಲ್ಲಿ ಯಶ್​ ಮುಂದಿನ ಸಿನಿಮಾ ಕೆಜಿಎಫ್ 3 ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಿರ್ದೇಶಕ ನರ್ತನ್ ಜೊತೆ ರಾಕಿಭಾಯ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.


ನರ್ತನ್ ಕೂಡ ನಟ ಯಶ್‌ಗೆ ಸೂಕ್ತವಾಗುವ ಅದ್ಭುತ ಕಥೆಯನ್ನು ತಯಾರಿ ಮಾಡಿಕೊಂಡಿದ್ದಾರೆ, ಹಾಗಾಗಿ ಯಶ್​ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಲುಕ್ ಚೇಂಜ್​ ಮಾಡಿಕೊಳ್ಳಲು ವರ್ಕೌಟ್​ ಸ್ಟಾರ್ಟ್​ ಮಾಡಿದ್ದಾರಂತೆ. ನರ್ತನ್ ಕೂಡ ಸ್ಯಾಂಡಲ್​ವುಡ್​ನಲ್ಲಿ ಉತ್ತಮ ನಿರ್ದೇಶಕ ಎಂದು ಹೆಸರು ಪಡೆದಿದ್ದಾರೆ, ಹಾಗಾಗಿ ಅಭಿಮಾನಿಗಳು ಸಹ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಯಶ್​ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ,


ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಂತೆ


ಇತ್ತೀಚೆಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ, ಅದೇನೆಂದರೆ ಯಶ್​ ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಎಂಬುದು. ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ತರ ತರಹದ ಕಾಮೆಂಟ್​ ಸಹ ಮಾಡುತ್ತಿದ್ದರು. ಅಲ್ಲದೇ ಈ ಮೂಲಕ ಪೂಜಾ ಹೆಗ್ಡೆ ಕನ್ನಡಕ್ಕೆ ಬರ್ತಾರೆ ಎಂದು ಸಹ ಹೇಳಲಾಗುತ್ತಿತ್ತು.


ಇದನ್ನೂ ಓದಿ: ಸಾಯಿ ಪಲ್ಲವಿಗೆ ನೀವೇ ನ್ಯಾಷನಲ್ ಕ್ರಶ್​ ಎಂದ ಫ್ಯಾನ್ಸ್, ಒಂದು ಸೀನ್​ಗಾಗಿ ಎರಡು ದಿನ ಉಪವಾಸ ಇದ್ರಂತೆ ನಟಿ


ಯಶ್ ಮುಂದಿನ ಸಿನಿಮಾ ಬಗ್ಗೆ ಇಷ್ಟೆಲ್ಲಾ ಚರ್ಚೆಯಾಗ್ತಿದ್ದರೂ ಸಹ ಯಶ್​ ಮಾತ್ರ ಈ ಬಗ್ಗೆ ತುಟಿ ಬಿಚ್ಚಿಲ್ಲ. ಅಲ್ಲದೇ ನಿರ್ದೇಶಕ ನರ್ತನ್ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಯಾವಾಗ ಯಶ್​ ಸಿನಿಮಾ ಎಂದು ಕೇಳುತ್ತಿದ್ದಾರೆ.

Published by:Sandhya M
First published: