Yash: ಆಹಾ.. ಏನ್​ ಮಸ್ತ್​​​ ಆಟ ಆಡ್ತಾರೆ ರಾಕಿಭಾಯ್​, ವಿಜಯ್​ ಅವ್ರೇ ಬೌಲರ್​, ಇವ್ರೇ ಬ್ಯಾಟ್ಸ್​ಮ್ಯಾನ್​.. ವಿಡಿಯೋ ವೈರಲ್​!

ಈ ಬಾರಿ ವೈರಲ್​ ಆಗಿರುವ ವಿಡಿಯೋದಲ್ಲಿ ರಾಕಿ ಭಾಯ್​ ಮಸ್ತ್​ ಕ್ರಿಕೆಟ್(Cricket)​ ಆಡಿದ್ದಾರೆ. ಅದು ಕೆಜಿಎಫ್​ ಟೀಂನೊಂದಿಗೆ. ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು(Vijay Kiragandur) ಅವರು ಬೌಲಿಂಗ್​ಗೆ ರಾಕಿ ಭಾಯ್​ ಬ್ಯಾಟ್​ ಬೀಸಿದ್ದಾರೆ.

ಕ್ರಿಕೆಟ್ ಆಡಿದ ರಾಕಿಂಗ್​ ಸ್ಟಾರ್​ ಯಶ್​

ಕ್ರಿಕೆಟ್ ಆಡಿದ ರಾಕಿಂಗ್​ ಸ್ಟಾರ್​ ಯಶ್​

  • Share this:
ರಾಕಿಂಗ್ ಸ್ಟಾರ್​.. ಈ ಹೆಸರು ಕೇಳಿದರೆ ಕಣ್ಣ ಮುಂದೆ ಬೆಳೆದು ದೊಡ್ಡ ಸ್ಟಾರ್​ ಆದ ಸಾಹಸ ಕಥೆ ಕಣ್ಣು ಮುಂದೆ ಬರುತ್ತೆ. ಸ್ಯಾಂಡಲ್​ವುಡ್(Sandalwood)​ನಲ್ಲಿ ಅಂದು ಆ ನಟ​ ಕ್ರಿಯೇಟ್​ ಮಾಡಿದ​​ ಹವಾ.. ಅಬ್ಬಬ್ಬಾ.. ಇಂದಿಗೂ ರೇಂಜ್​​​(Range) ಕಿಂಚಿತ್ತು ಕಡಿಮೆಯಾಗಿಲ್ಲ. ಮೈಸೂರಿ(Mysore)ನಿಂದ ನಟನಾಗಬೇಕೆಂದು ಬಟ್ಟೆ ಬ್ಯಾಗ್​ ನೇತುಹಾಕಿಕೊಂಡು ಬೆಂಗಳೂರಿಗೆ ಬಂದ ಆ ಯುವಕನಿಗೆ, ಮುಂದೊಂದು ದಿನ ತಾನೂ ಇಷ್ಟು ದೊಡ್ಡ ಸ್ಟಾರ್(Big Star)​ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ ಅನ್ಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದವರಿಗೆ ಗಪ್​ ಚುಪ್​ ಮಾಡಿಸಿದ್ದು ಇವರೇ.. ಕನ್ನಡ ಸಿನಿಮಾಗಳಿಗೆ ಬೇರೆ ರಾಜ್ಯ, ದೇಶದಲ್ಲಿ ಮಾರ್ಕೆಟ್(Market)​ ಕ್ರಿಯೇಟ್​​​ ಮಾಡಿದ್ದು ಇದೇ ನಟ. ರಾಕಿಂಗ್​ ಸ್ಟಾರ್​​ ಏನೇ ಮಾಡಿದರೂ ಸುದ್ದಿಯಾಗುತ್ತೆ. ಸದ್ಯ ರಾಕಿ ಭಾಯ್​ ಕೆಜಿಎಫ್​ 2 ಸಿನಿಮಾದ ಶೂಟಿಂಗ್​ ಮುಗಿಸಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ಜಾಲಿಮೂಡ್​ನಲ್ಲಿದ್ದಾರೆ. ತನ್ನ ಪತ್ನಿ ರಾಧಿಕಾ ಪಂಡಿತ್​ ಹಾಗೂ ಮಕ್ಕಳೊಂದಿಗೆ ರಾಕಿ ಭಾಯ್​ ವೆಕೆಷನ್​ ಹೋಗಿ ಎಂಜಾಯ್​ ಮಾಡುತ್ತಿದ್ದರು. ಈ ಬಾರಿ ವೈರಲ್​ ಆಗಿರುವ ವಿಡಿಯೋದಲ್ಲಿ ರಾಕಿ ಭಾಯ್​ ಮಸ್ತ್​ ಕ್ರಿಕೆಟ್(Cricket)​ ಆಡಿದ್ದಾರೆ. ಅದು ಕೆಜಿಎಫ್​ ಟೀಂನೊಂದಿಗೆ. ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು(Vijay Kiragandur) ಅವರು ಬೌಲಿಂಗ್​ಗೆ ರಾಕಿ ಭಾಯ್​ ಬ್ಯಾಟ್​ ಬೀಸಿದ್ದಾರೆ.

ಫುಲ್​ ಜಾಲಿ ಮೂಡ್​ನಲ್ಲಿ ರಾಕಿ ಭಾಯ್​!

ಕುಂದಾಪುರ ತಾಲೂಕಿನ ಬಸ್ರೂರಿಗೆ ಆಗಮಿಸಿ ರಾಕಿಂಗ್ ಸ್ಟಾರ್ ಯಶ್ ಜಾಲಿ ಮೂಡ್​​ನಲ್ಲಿದ್ದಾರೆ. ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿರುವ ರವಿ ಬಸ್ರೂರ್ ಜತೆಯಲ್ಲಿದ್ದಾರೆ.  ಇದೇ ವೇಳೆ ಯಶ್ ಬಿಡುವಿನ‌ ವೇಳೆಯಲ್ಲಿ ಸ್ಥಳೀಯ ಹುಡುಗರ ಜತೆ ಕ್ರಿಕೆಟ್ ಆಡಿದ್ದಾರೆ. ಕುಂದಾಪುರದ ಸಂಗೀತ ನಿರ್ದೇಶಕ‌ ರವಿ ಬಸ್ರೂರು ಅವರ ಮನೆ ಬಳಿ ಆಟದ ಮೈದಾನದಲ್ಲಿ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ. ನಿಮಾರ್ಪಕ ವಿಜಯ್​ ಕಿರಗಂದೂರು ಅವರು ರಾಕಿ ಭಾಯ್​ಗೆ ಬೌಲಿಂಗ್​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.


ಇದನ್ನೂ ಓದಿ: ಮಗಳಿಗೆ ರಾಕಿಂಗ್ ಸ್ಟಾರ್ ಕನ್ನಡ ಪಾಠ, ಮುದ್ದು ಮುದ್ದಾಗಿ ‘ಅ ಆ ಇ ಈ’ ನುಡಿದ ಐರಾ!

ನಟ ರಾಕಿಂಗ್​ ಸ್ಟಾರ್​ ಯಶ್​ ಟೆಂಪಲ್​ ರನ್​!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಕೆಜಿಎಫ್ 2 ಚಿತ್ರದ ಮ್ಯೂಸಿಕ್ ಕಂಪೋಸ್ ನಡೆಯುತ್ತಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಸ್ಟುಡಿಯೋದಲ್ಲಿ ಚಿತ್ರದ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ನಿರ್ಮಾಪಕ, ನಟ ಹಾಗೂ ಚಿತ್ರತಂಡ ಭಾಗಿಯಾಗಿದೆ. ಉಡುಪಿ ಪ್ರವಾಸದ ವೇಳೆ ಕುಂಭಾಶಿ ಆನೆಗುಡ್ಡೆ ದೇವಸ್ಥಾನಕ್ಕೆ ನಟ ಯಶ್ ಭೇಟಿ ನೀಡಿ, ಶ್ರೀ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೂ ನಟ ಭೇಟಿ ನೀಡಿದ್ದಾರೆ.


ಇದನ್ನು ಓದಿ: ಆಫ್ರಿಕಾದಲ್ಲೂ ರಾಕಿ ಭಾಯ್ ಹವಾ: KGF-1 ಹಾಡಿಗೆ ಕಿಲಿ ಪೌಲ್ ಕುಣಿದ ವಿಡಿಯೋ ಫುಲ್ ವೈರಲ್

ಏಪ್ರಿಲ್​ 14ಕ್ಕೆ ಕೆಜಿಎಫ್ ಗ್ರ್ಯಾಂಡ್​ ರಿಲೀಸ್​!

ಕೆಜಿಎಫ್​ ಎಂಬ ಒಂದು ಸಿನಿಮಾದಿಂದ ಕನ್ನಡ ಚಿತ್ರರಂಗದ ಹೆಸರೇ ಬದಲಾಯಿತು. ರಾಕಿಂಗ್​ ಸ್ಟಾರ್​ ಯಶ್​ ಅವರ ರೇಂಜ್​ ಬದಲಾಗಿತ್ತು. ಕೆಜಿಎಫ್​ ಬರೆದ ದಾಖಲೆಗಳನ್ನು ಮುರಿಯುವುದಿರಲಿ, ಅದರ ಹತ್ತಿರಕ್ಕೂ ಬರಲು ಯಾರಿಂದಲೂ ಸಾಧ್ಯವಾಗಿಲ್ಲ. ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಏಪ್ರಿಲ್​ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಪ್ರಿಲ್​ನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಬೇರೆ ಭಾಷೆಯ ಬಿಗ್​ ಬಜೆಟ್​ ಸಿನಿಮಾಗಳಿಗೆ ಅವರ ಅಭಿಮಾನಿಗಳೇ ಎಚ್ಚರಿಕೆ ಕೊಟ್ಟಿದ್ದಾರೆ. ದಯವಿಟ್ಟು ಕೆಜಿಎಫ್​ 2 ಮುಂದೆ ಸಿನಿಮಾ ರಿಲೀಸ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Published by:Vasudeva M
First published: