• Home
  • »
  • News
  • »
  • entertainment
  • »
  • Rocking Star Yash: ಯಶೋಮಾರ್ಗ ಮೂಲಕ ಕಲ್ಯಾಣಿ ಜೀರ್ಣೋದ್ಧಾರ, ಯಶ್​ ಕಾರ್ಯಕ್ಕೆ ಶಿವಮೊಗ್ಗ ಮಂದಿ ಖುಷ್

Rocking Star Yash: ಯಶೋಮಾರ್ಗ ಮೂಲಕ ಕಲ್ಯಾಣಿ ಜೀರ್ಣೋದ್ಧಾರ, ಯಶ್​ ಕಾರ್ಯಕ್ಕೆ ಶಿವಮೊಗ್ಗ ಮಂದಿ ಖುಷ್

ಚಂಪಕ ಸರಸಿ

ಚಂಪಕ ಸರಸಿ

Champaka Sarasi: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವ ಈ ಚಂಪಕ ಕಲ್ಯಾಣಿಯನ್ನ ಯಶ್​ ಅವರ ಯೋಜನೆಯಡಿ ಜೀರ್ಣೋದ್ಧಾರಮಾಡಲಾಗಿದ್ದು, ನಿವಾಸಿಗಳು ನಟ ಯಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  • Share this:

ರಾಕಿಂಗ್ ಸ್ಟಾರ್ ಯಶ್​ (Rocking Star Yash) ತಮ್ಮ ಯಶೋಮಾರ್ಗ (Yashomarga)  ಯೋಜನೆಯ ಮೂಲಕ ಹಲವಾರು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಕೆರೆಗಳ ಸ್ವಚ್ಛತೆ, ಹೂಳೆತ್ತುವುದು ಹೀಗೆ. ಸಾಮಾಜಿಕ ಕಾರ್ಯಗಳಿಗೆ ಯಾವಾಗಲೂ ಸಾಥ್ ನೀಡುವ ಯಶ್ ಈ ಬಾರಿ ಕೂಡ ಯಶೋಮಾರ್ಗ ಮೂಲಕ ಅತಿ ಪುರಾತನ ಕಲ್ಯಾಣಿಯನ್ನು (kalyani) ಜೀರ್ಣೋದ್ಧಾರ ಮಾಡಿದ್ದಾರೆ.  ಕೆಳದಿ ಅರಸ (Keladi dynasty) ಕಾಲದಲ್ಲಿ ನಿರ್ಮಾಣವಾದ ಕಲ್ಯಾಣಿಯನ್ನು ಯಶ್​ ಜೀರ್ಣೋದ್ಧಾರ ಮಾಡಿದ್ದು, ಈ ಸ್ಥಳ ಈಗ ಮೊದಲಿಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವ ಈ ಚಂಪಕ ಕಲ್ಯಾಣಿಯನ್ನ ಯಶ್​ ಅವರ ಯೋಜನೆಯಡಿ ಜೀರ್ಣೋದ್ಧಾರ ಮಾಡಲಾಗಿದ್ದು, ನಿವಾಸಿಗಳು ನಟ ಯಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಯಶ್ ಅವರ ಕನಸಿನ ಕೂಸು ಯಶೋಮಾರ್ಗ ಎನ್​ಜಿಓ ಈ ಚಂಪಕ ಸರಸಿ ಕಲ್ಯಾಣಿಯ ಸ್ವಚ್ಛತೆ ಮಾಡಿದ್ದು, ನಿನ್ನೆ ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ಉದ್ಘಾಟನೆ ಮಾಡಲಾಗಿದೆ.


ಜೀರ್ಣೋದ್ಧಾರಗೊಂಡ ಚಂಪಕ ಸರಸಿ


ಮಹಂತಿನ ಮಠ ಅಥವಾ ಚಂಪಕ ಸರಸಿ ಎಂದು ಕರೆಯಲ್ಪಡುವ ಈ ಸ್ಥಳ ಕೆಳದಿಯ ಅರಸ ರಾಜ ವೆಂಕಟಪ್ಪ ನಾಯಕ ಕಟ್ಟಿಸಿದ್ದರು. ಈ ಕಲ್ಯಾಣಿಯನ್ನು ಮೂಲಗಳ ಪ್ರಕಾರ 14 ಮತ್ತು 15ನೇ ಶತಮಾನದಲ್ಲಿ ಕಟ್ಟಿಸಿದ್ದಾರೆ. ಇನ್ನು ಕೆಳದಿ ಅರಸರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಕೆರೆ ಮತ್ತು ಕಲ್ಯಾಣಿಯನ್ನು ಕಟ್ಟಿಸಿದ್ದಾರೆ. ಈ ಚಂಪಕ ಸರಸಿ ಕೂಡ ಆನಂದಪುರದ ಮಲಂದೂರು ಗ್ರಾಮದಲ್ಲಿದ್ದು, ಸದ್ಯ ಜೀರ್ಣೋದ್ಧಾರವಾಗಿದೆ.


ಇನ್ನು 76.8 ಅಗಲ ಹಾಗೂ 77.8 ಉದ್ದ ಇರುವ ಈ ಕಲ್ಯಾಣಿಯನ್ನು ಸುಮಾರು 20 ಜನ ಕೆಲಸಗಾರರು ಜೀರ್ಣೋದ್ಧಾರ ಮಾಡಿದ್ದು, ಈ ಕಲ್ಯಾಣಿ ಬಳಿ ಇರುವ ದೇವಾಲಯವನ್ನು ಸಹ ಜೀರ್ಣೊದ್ದಾರ ಮಾಡಲಾಗಿದೆ.  ಇನ್ನು ಯಶೋಮಾರ್ಗದ ಸಲಹೆಗಾರರಾಗಿರುವ ಪರಿಸರವಾದಿ ಶಿವಾನಂದ ಕಳವೆ ಈ ಕೆಲಸದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಲ್ಲದೇ, ಖುದ್ದಾಗಿ ನಿಂತು ಕೆಲಸ ಮಾಡಿಸಿದ್ದಾರೆ. ಅಲ್ಲದೇ ಈ ಕಾರ್ಯಕ್ಕೆ ಸಹಾಯ ಮಾಡಿದ ನಟ ಯಶ್ ಅವರಿಗೆ ಅವರು ಕೂಡ ಧನ್ಯವಾದ ತಿಳಿಸಿದ್ದಾರೆ.


ಇದನ್ನೂ ಓದಿ: ರವಿಚಂದ್ರನ್ - ಶಿವರಾಜ್​ಕುಮಾರ್ ಜೊತೆ ನಟಿಸಿದ್ದ ರಂಭಾ ಈಗ ಮೂರು ಮಕ್ಕಳ ತಾಯಿ, ಹೇಗಿವೆ ನೋಡಿ ರಂಭೆಯ ಮಕ್ಕಳು


ಇನ್ನು ಈ ಬಗ್ಗೆ ಮಾತನಾಡಿದ ಶಿವಾನಂದ್, ಈ ಹಳ್ಳಿಯ ಕೆರೆ ನೋಡಿದಾಗ ನಿಜಕ್ಕೂ ಬೇಸರವಾಯಿತು. ಆ ಸ್ಥಳ ಹುಲ್ಲು ಹಾಗೂ ಕಸಗಳಿಂದ ತುಂಬಿತ್ತುಅಲ್ಲಿ ಸ್ವಚ್ಛತೆ ಸಹ ಇರಲಿಲ್ಲ. ಅಲ್ಲಲ್ಲಿ ಲಿಕ್ಕರ್ ಬಾಟಲ್​ಗಳು ಬಿದ್ದಿದ್ದವು. ಇದನ್ನು ನೋಡಿ ನಾನು ಯಶ್​ ಅವರಿಗೆ ಪರಿಸ್ಥಿಯನ್ನು ತಿಳಿಸಿದೆ ಹಾಗೂ ಈ ಸ್ಥಳದ ಇತಿಹಾಸವನ್ನು ವಿವರಿಸಿದ ನಂತರ ಅವರು ಕೂಡ ಜೀರ್ಣೋದ್ಧಾರ ಕಾರ್ಯಕ್ಕೆ ಒಪ್ಪಿಕೊಂಡರು ಎಂದಿದ್ದಾರೆ.


ಪ್ರೀತಿಯ ನೆನಪಿಗೆ ಕಟ್ಟಿಸಿದ್ದ ಕಲ್ಯಾಣಿ


ಇನ್ನು ಇತಿಹಾಸಗಳ ಪ್ರಕಾರ ಕೆಳದಿ ಅರಸ ವೆಂಕಟಪ್ಪ ಚಂಪಕಾ ಎನ್ನುವ ಮಹಿಳೆಯ ಪ್ರೀತಿಯಲ್ಲಿದ್ದ. ಆಕೆಯನ್ನು ಬಹಳ ಪ್ರೀತಿಸುತ್ತಿದ್ದ, ಆದರೆ ಚಂಪಕಾ ಮೀನುಗಾರರ ಸಮುದಾಯಕ್ಕೆ ಸೇರಿದ್ದ ಕಾರಣ, ಅವರ ಸಂಬಂಧ ಮುರಿದು ಬಿದ್ದಿತ್ತು. ಈ ಕಾರಣದಿಂದ ಮನನೊಂದ ಚಂಪಕಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ತನ್ನ ಪ್ರೀತಿಯ ಚಂಪಕಾ ನೆನಪಿನಲ್ಲಿ ವೆಂಕಟಪ್ಪ ಚಂಪಕ ಸರಸಿ ಎಂಬ ಕಲ್ಯಾಣಿಯನ್ನು ಕಟ್ಟಿಸಿದ್ದ ಎನ್ನಲಾಗುತ್ತದೆ. ಆದರೆ ಕೆಲ ಇತಿಹಾಸಕಾರರ ಪ್ರಕಾರ ಈ ಸ್ಥಳ ಚಂಪಕ ಮರಗಳಿಂದ ಸುತ್ತುವರೆದಿರುವುದರಿಂದ ಇದನ್ನು ಚಂಪಕ ಸರಸಿ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ.


ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾವನಾ ರಾವ್, ಮತ್ತೆ ಕಮ್​ಬ್ಯಾಕ್​ ಮಾಡಲು ರೆಡಿ ಆಗ್ತಿದ್ದಾರೆ ಗಾಳಿಪಟ ಬೆಡಗಿ


ಇನ್ನು ಈ ಚಂಪಕಾ ಕಲ್ಯಾಣಿಯನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣಿ ಸುತ್ತ ಕಲ್ಲಿನಲ್ಲಿಯೇ ಸುಂದರವಾದ ಮೂರ್ತಿ ಹಾಗೂ ಡಿಸೈನ್​ಗಳನ್ನು ಕೆತ್ತಲಾಗಿದೆ.  ಈ ಕಲ್ಯಾಣಿಯ ಮಧ್ಯದಲ್ಲಿ ಶಿವನ ಸಣ್ಣ ಮಂದಿರ ಸಹ ಇದೆ.  ಇದೊಂದು ಅತಿ ಸುಂದರ ಕಲ್ಯಾಣಿಯಾಗಿದ್ದು, ಪ್ರಶಾಂತವಾದ ಸ್ಥಳ ಎನ್ನಬಹುದು.

Published by:Sandhya M
First published: