ರಾಕಿಂಗ್ ಸ್ಟಾರ್ ಯಶ್ ಅಭಿನಯದ (Yash Next Movie Updates) ಮುಂದಿನ ಚಿತ್ರದ ಕುರಿತು ಇನ್ನಿಲ್ಲದ ಕುತೂಹಲ ಮೂಡಿದೆ. ಸಿನಿಮಾ ಸುತ್ತ ಏನೇನೋ ಕಲ್ಪನೆಗಳು ಮೂಡುತ್ತಲೇ ಇವೆ. ಅದರ ಸುತ್ತವೇ ಕಲ್ಪನೆಗೂ (Rocky Bhai New Movie) ನಿಲುಕದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಸಿನಿಮಾ ನಿರೀಕ್ಷೆಯಲ್ಲಿ ಚಾತಕ ಪಕ್ಷಿಯಂತೆ (Yash Next Movie News) ಕಾಯುತ್ತಲೇ ಇದ್ದಾರೆ. ಇದರ ಮಧ್ಯೆ ರಾಕಿಂಗ್ ಸ್ಟಾರ್ ಯಶ್ ಪ್ರತಿ ಚಟುವಟಿಕೆಯನ್ನ ವಿಶೇಷವಾಗಿಯೇ ಅರ್ಥ ಮಾಡಿಕೊಳ್ಳಲಾಗುತ್ತಿದೆ ಅನಿಸುತ್ತಿದೆ. ಪ್ರತಿ ಫೋಟೋಕೂ ಒಂದೊಂದು (Rocking Star Yash Movie) ಅರ್ಥವನ್ನ ಕಲ್ಪಿಸಿಕೊಳ್ಳಲಾಗುತ್ತಿದೆ. ಮೊನ್ನೆ ಮೊನ್ನೆ ರಾಕಿ ಭಾಯ್ ಶ್ರೀಲಂಕಾ ದೇಶಕ್ಕೆ ಹೋಗಿ ಬಂದರು.
ಅಲ್ಲಿಯ ಜನರ ಜೊತೆಗೆ ಫೋಟೋ ತೆಗೆಸಿಕೊಂಡು ಬಂದ್ರು. ಅದಕ್ಕೂ ಸ್ಪೆಷಲ್ ಅರ್ಥಕೊಡಲಾಗಿದೆ.
ಶ್ರೀಲಂಕಾದಲ್ಲಿ ಯಶ್ ಸಿನಿಮಾ ಶೂಟಿಂಗ್-ಇದು ನಿಜವೇ?
ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಬಗ್ಗೆ ಕುತೂಹಲ ಮೂಡೋಕೆ ಬಲವಾದ ಕಾರಣ ಇದೆ. ಹೌದು, ರಾಕಿ ಭಾಯ್ ಸಾಮಾನ್ಯ ನಟ ಅಲ್ಲವೇ ಅಲ್ಲ ಅನ್ನೋದು ಎಲ್ಲರಿಗೂ ತಿಳಿದು ಬಹು ದಿನಗಳೇ ಆಗಿವೆ. ರಾಕಿ ಭಾಯ್ ಕೆಜಿಎಫ್ ಚಿತ್ರದ ಮೂಲಕವೇ ಭಾರತ ದಾಟಿ ಹೋಗಿದ್ದಾರೆ. ಬೇರೆ ಬೇರೆ ದೇಶದ ಸಿನಿಪ್ರಿಯರಿಗೆ ಬಹುವಾಗಿಯೆ ಇಷ್ಟ ಆಗಿದ್ದಾರೆ.
ಕೆಜಿಎಫ್ ಸ್ಟಾರ್ ಮುಂದಿನ ಸಿನಿಮಾ ಯಾವಾಗ?
ಕೆಜಿಎಫ್ ಓಟದ ಹಿನ್ನೆಲೆಯಲ್ಲಿ ಕೆಜಿಎಫ್-ಭಾಗ ಎರಡು ಕೂಡ ವಿಶೇಷವಾಗಿಯೇ ರೆಡಿ ಆಗಿತ್ತು. ಇದನ್ನ ಕೂಡ ಜನ ಒಪ್ಪಿದರು. ಮೊನ್ನೆ ಏಪ್ರಿಲ್ ಹದಿನಾಲ್ಕಕ್ಕೆ ಈ ಚಿತ್ರ ಬಂದು ಒಂದು ವರ್ಷವೇ ಕಳೆದಿದೆ. ಆದರೂ ರಾಕಿ ಮುಂದಿನ ಚಿತ್ರದ ಅನೌನ್ಸ್‌ಮೆಂಟ್ ಇನ್ನೂ ಆಗಿಲ್ಲ ಅನ್ನೊದು ಅಭಿಮಾನಿಗಳಿಗೆ ಬೇಸರ.
ಆದರೆ ಯಶ್ ತಮ್ಮ ಚಿತ್ರವನ್ನ ಶೀಘ್ರದಲ್ಲಿಯೇ ಅನೌನ್ಸ್ ಮಾಡ್ತಾರೆ ಅನ್ನೋ ಮಾತು ಅಭಿಮಾನಿಗಳ ಬೇಸರದ ಬೆನ್ನಲ್ಲಿಯೇ ಕೇಳಿ ಬರ್ತಾನೇ ಇದೆ. ಯಾವಾಗ ಅನ್ನೊ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಅನ್ನೋದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ.
ರಾಕಿ ಭಾಯ್ ಪ್ರತಿ ನಡೆಗೆ ಇದೀಗ ವಿಶೇಷ ಅರ್ಥ ಬರ್ತಿದೆ!
ಇದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಪ್ರತಿ ಚಟುವಟಿಕೆಯನ್ನ ವಿಶೇಷವಾಗಿಯೆ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಮೊನ್ನೆ ಯಶ್ ಶ್ರೀಲಂಕಾ ಪ್ರವಾಸ ಮಾಡಿದ್ದರು. ಆಗ ಅಲ್ಲಿಯ ಜನರ ಜೊತೆಗೆ ಫೋಟೋ ತೆಗೆಸಿಕೊಂಡು ಬಂದರ
ಆದರೆ ಈ ಒಂದು ಪ್ರವಾಸ ಸುಮ್ನೆ ಅಲ್ವೇ ಅಲ್ಲ, ತಮ್ಮ ಮುಂದಿನ ಚಿತ್ರಕ್ಕಾಗಿ ರಾಕಿ ಭಾಯ್ ಶ್ರೀಲಂಕಾ ದೇಶಕ್ಕೆ ಹೋಗಿದ್ದರು ಅನ್ನುವ ಮಾತು ಕೂಡ ಈಗ ಕೇಳಿ ಬರುತ್ತಲೇ ಇದೆ.
ರಾಕಿ ಭಾಯ್ ಮುಂದಿನ ಚಿತ್ರದ ಕುರಿತು ಕಲರ್‌ಫುಲ್ ನ್ಯೂಸ್
ಇದಕ್ಕೂ ಹೆಚ್ಚಾಗಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಷಯ ಹರಿದಾಡುತ್ತಲೇ ಇದೆ. ನಿಜ, ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಮಾಡಿದ್ದಾರೆ. ಶ್ರೀಲಂಕಾ ದೇಶದಲ್ಲಿ ಚಿತ್ರದ ಕೆಲವು ಮಹತ್ವದ ಭಾಗದ ಚಿತ್ರೀಕರಣ ಕೂಡ ಆಗಿದೆ ಅನ್ನುವ ಸುದ್ದಿ ಕೂಡ ಇದೀಗ ಹರಿದಾಡುತ್ತಲೇ ಇದೆ.
ಇದು ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದನ್ನ ಯಾರೂ ಅಧಿಕೃತವಾಗಿ ಹೇಳಿಯೇ ಇಲ್ಲ. ಹಾಗಾಗಿಯೇ ಈ ಸುದ್ದಿಗೆ ರೆಕ್ಕೆ-ಪುಕ್ಕ ಬಂದು ಸಿಕ್ಕಾಪಟ್ಟೆ ಹರಿದಾಡುತ್ತಲೇ ಇದೆ ಅಂತ ಹೇಳಬಹುದು ನೋಡಿ.
ಗೀತು ಮೋಹನದಾಸ್ ಅವರೇನಾ ಯಶ್ ಸಿನಿಮಾ ಡೈರೆಕ್ಟರ್?
ಇದರ ಹೊರತಾಗಿ ಇನ್ನೂ ಒಂದು ಸುದ್ದಿ ಬಹು ದಿನಗಳಿಂದಲೂ ಕೇಳಿ ಬರ್ತಾನೇ ಇದೆ. ಆ ಸುದ್ದಿಗೆ ನೇರವಾಗಿ ಮಾಲಿವುಡ್ ನಟಿ-ನಿರ್ದೇಶಕಿ ಗೀತು ಮೋಹನದಾಸ್ ಅವರಿಗೆ ಹೋಗಿ ಕನೆಕ್ಟ್ ಆಗುತ್ತಿದೆ. ಈ ಹಿಂದೇನೆ ಹೆಸರು ಕೇಳಿ ಬರ್ತಾ ಇತ್ತು.
ಹೌದು, ಗೀತು ಮೋಹನ್‌ದಾಸ್ ಅವರ ಕಥೆಯನ್ನ ಯಶ್ ಒಪ್ಪಿಕೊಂಡಿದ್ದಾರೆ. ಯಶ್ ಮುಂದಿನ ಚಿತ್ರಕ್ಕೆ ಇವರೇ ಡೈರೆಕ್ಟರ್ ಅನ್ನೋ ವಿಷಯ ಹರಿದಾಡುತ್ತಲೇ ಇದೆ. ಈ ಬಗ್ಗೆ ಕೂಡ ಎಲ್ಲೂ ಯಾರೂ ಏನೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಇದನ್ನೂ ಓದಿ: Lovely Star New Movie: ಲವ್ಲಿ ಸ್ಟಾರ್ ಇದೀಗ ಆ್ಯಕ್ಷನ್ ಸ್ಟಾರ್; ನೆನಪಿರಲಿ ಪ್ರೇಮ್ ಹೊಸ ಲುಕ್
ಒಟ್ಟಾರೆ, ಯಶ್ ಮುಂದಿನ ಸಿನಿಮಾ ಬಗೆಗಿನ ವಿಷಯ ಪ್ರತಿ ದಿನ ಒಂದೊಂದು ಕಲರ್‌ಫುಲ್ ಸುದ್ದಿಯಾಗಿಯೇ ಈಗ ಹರಿದಾಡುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ