ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ (Yash Next Movie Updates) ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಈ ಒಂದು ಕುತೂಹಲದ ಸುತ್ತ ಈಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅದಕ್ಕೂ ಹೆಚ್ಚಾಗಿ ಈ ಸಿನಿಮಾದ ಒಂದು ಪೋಸ್ಟರ್ ಹೊರ (Yash Next Movie News) ಬಿದ್ದಿದೆ ಅನ್ನೋ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನ ಒಮ್ಮೆ ಗಮನಿಸಿದ್ರೆ, ನಿಜವೇ ಇರಬೇಕು ಅನಿಸುತ್ತದೆ. ಈ ಚಿತ್ರಕ್ಕೆ ಸ್ಪೆಷಲ್ ಕ್ಯಾಮೆರಾ ಬಳಸಿರೊದು ಕಾಣಿಸುತ್ತದೆ. ರಾಕಿಂಗ್ ಸ್ಟಾರ್ ಯಶ್ ಕೂಡ ಈ ಒಂದು (Yash Movie Latest News got Viral) ಫೋಟೋದಲ್ಲಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ತೆಗೆದ ಫೋಟೋ ರೀತಿನೇ ಇದು ಇದೆ. ಇದರ ಸುತ್ತವೇ ಈಗ ಕುತೂಹಲ ಹೆಚ್ಚುತ್ತಲೇ ಇದೆ.
ಇದರ ಬಗೆಗಿನ ಇನ್ನಷ್ಟು (Sandalwood Yash Updates) ಮಾಹಿತಿ ಇಲ್ಲಿದೆ ಓದಿ.
ರಾಕಿ ಭಾಯ್ ಮುಂದಿನ ಸಿನಿಮಾ ಫೋಟೋ ವೈರಲ್
ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ದಿನೇ ದಿನೇ ಕ್ಯೂರಿಯೋಸಿಟಿ ಹುಟ್ಟಿಸುತ್ತಲೇ ಇದೆ. ಈ ಸಿನಿಮಾದ ಬಗ್ಗೆ ಇರೋ ಕುತೂಹಲ ಬೇಜಾನ್ ಇದೆ. ಈ ಚಿತ್ರದಲ್ಲಿ ಯಶ್ ಹೇಗೆಲ್ಲ ಕಾಣಿಸುತ್ತಾರೆ ಅನ್ನುವ ಇನ್ನಿಲ್ಲದ ಕುತೂಹಲ ಹುಟ್ಟಿಕೊಂಡಿದೆ. ಇದರ ಬಗ್ಗೆ ಅದ್ಯಾವಾಗ ಅಧಿಕೃತ ಮಾಹಿತಿ ಬರುತ್ತದೆ ಅನ್ನುವ ಪ್ರಶ್ನೆಯನ್ನ ಕೂಡ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
ಹೌದು, ಈ ಒಂದು ಪ್ರಶ್ನೆಯನ್ನ ಅಭಿಮಾನಿಗಳು ಕೇಳ್ತಾನೇ ಇದ್ದಾರೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿಯ ತಲೆ ಮೇಲೆ ಹೊಡೆಯೋ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇವೆ.
ಯಶ್ ಮುಂದಿನ ಚಿತ್ರದ ಫೋಟೋ ಲೀಕ್ ಆಯಿತೇ?
ಇದಕ್ಕೆ ತಾಜಾ ಉದಾಹರಣೆ ಅನ್ನುವ ಹಾಗೆ ರಾಕಿಂಗ್ ಸ್ಟಾರ್ ಯಶ್ ಇರೋ ಒಂದು ಫೋಟೋ ಈಗ ಹರಿದಾಡುತ್ತದೆ. ಇದು ಸ್ಪೆಷಲ್ ಅನಿಸುತ್ತದೆ. ಸೆಟ್‌ನಲ್ಲಿಯೇ ತೆಗೆದಿರೋ ಫೋಟೋದಂತೆ ಕಾಣಿಸುತ್ತಿದೆ. ಯಶ್ ಅಭಿನಯದ ಮುಂದಿನ ಸಿನಿಮಾದ ಫೋಟೋನೇ ಇದಾಗಿದೆ ಅನ್ನುವ ಮಟ್ಟಿಗೆ ಈ ಫೋಟೋ ಸುತ್ತ ಸುದ್ದಿ ಹರಿದಾಡುತ್ತಲೇ ಇದೆ.
ಆದರೆ ಇದು ನಿಜವೇ ಅಥವಾ ಸುಳ್ಳಾ ಅನ್ನುವ ಕ್ಲಾರಿಟಿಯನ್ನ ಯಾರೂ ಇನ್ನೂ ಕೊಟ್ಟಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರುವ ಎಲ್ಲ ಸುದ್ದಿಗಳು ನಿಜ ಇರಬೇಕು ಅಂತ ಏನು ಇಲ್ಲ. ಹಾಗೇನೆ ಕೆಲವೊಮ್ಮೆ ನಿಜವಾದ ಸುದ್ದಿಗಳು ಹೀಗೇನೆ ವೈರಲ್ ಆಗುತ್ತವೆ.
ಯಶ್ ಮುಂದಿನ ಸಿನಿಮಾ ಕಥೆ ಹೇಳ್ತಿರೋ ಫೋಟೋ ವೈರಲ್
ಅದಕ್ಕೆ ಸೂಕ್ತ ಮಾಹಿತಿಯನ್ನ ಕೂಡ ಸಿನಿಮಾ ತಂಡ ಕೊಡ್ತಾನೇ ಇರುತ್ತದೆ. ಅದೇ ರೀತಿ ಈಗ ಯಶ್ ಮುಂದಿನ ಸಿನಿಮಾ ಕುರಿತ ಕ್ಯೂರಿಯೆಸ್ ಕಥೆ ಹೇಳ್ತಿರೋ ಈ ಫೋಟೋ ವೈರಲ್ ಆಗುತ್ತಿದೆ.
ಯಶ್ ಅಭಿನಯದ ಮುಂದಿನ ಸಿನಿಮಾದ ಫೋಟೋನೇ ಇದು ಅನ್ನುವ ಅರ್ಥದಲ್ಲಿಯೆ ಎಲ್ಲೆಡೆ ಈ ಫೋಟೋ ಕಂಡು ಬರುತ್ತಿದೆ. ಆದರ ಅಸಲಿ ಮ್ಯಾಟರ್ ಏನೂ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ ಬಿಡಿ.
ರಾಕಿ ಭಾಯ್ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾಕೆ ಮಾತಾಡೋದಿಲ್ಲ?
ಇನ್ನು ಯಶ್ ತಮ್ಮ ಮುಂದಿನ ಚಿತ್ರದ ತಯಾರಿಯನ್ನ ಮಾಡಿಕೊಳ್ತಾನೇ ಇದ್ದಾರೆ. ದೊಡ್ಡ ಮಟ್ಟದಲ್ಲಿಯೇ ತಮ್ಮ ಮುಂದಿನ ಸಿನಿಮಾ ಮಾಡೋ ಪ್ಲಾನ್ ಹಾಕಿದ್ದಾರೆ. ಹಾಗಾಗಿಯೇ ತಡವಾಗುತ್ತಿದೆ ಅನ್ನುವ ಮಾಹಿತಿ ಕೂಡ ಇದೆ.
ಇದನ್ನೂ ಓದಿ: Tamannaah Bhatia: ಸ್ವಿಜರ್‌ಲ್ಯಾಂಡ್‌ನಲ್ಲಿ ಮಿಲ್ಕಿ ಬ್ಯೂಟಿ ಏನ್ಮಾಡ್ತಿದ್ದಾರೆ? ಜೊತೆಗಿದ್ದಾರಾ ಬಾಯ್ಫ್ರೆಂಡ್?
ಎಲ್ಲೇ ಹೋದ್ರು ತಮ್ಮ ಈ ಚಿತ್ರದ ಬಗ್ಗೆ ಯಶ್ ಏನೂ ಹೇಳಿಕೊಳ್ಳೋದಿಲ್ಲ. ಅದಕ್ಕೋ ಏನೋ ಯಶ್ ಮುಂದಿನ ಚಿತ್ರದ ಕುರಿತು ಭಾರೀ ಕುತೂಹಲ ಮೂಡ್ತಾನೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ