ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದ (Yash New Movie Updates) ಬಗ್ಗೆ ಭಾರೀ ಕುತೂಹಲ ಮೂಡಿದೆ. ರಾಕಿ ಭಾಯ್ ಅಭಿಮಾನಿಗಳಂತೂ ಯಶ್ ಅವರ ನೆಕ್ಸ್ಟ್ ಸಿನಿಮಾ ಕುರಿತು ಇನ್ನಿಲ್ಲದ ಕುತೂಹಲ ಉಳಿಸಿಕೊಂಡಿದ್ದಾರೆ. ರಾಕಿ (Rocking Star Next Movie News) ಭಾಯ್ ಸಿನಿಮಾ ಈಗ ಅನೌನ್ಸ್ ಆಗುತ್ತದೆ, ಈಗ ಅನೌನ್ಸ್ ಆಗುತ್ತದೆ ಅನ್ನೋ ಮಾತು ಕೇಳಿ ಬರ್ತಾನೇ ಇದೆ. ಆದರೆ ಯಾವುದು ಇನ್ನೂ ಅಧಿಕೃತವಾಗಿ ಅನೌನ್ಸ್ (Yash News Film Latest News) ಆಗಿಲ್ಲ. ಕೆ.ವಿ.ಎನ್. ಪ್ರೊಡಕ್ಷನ್ ಹೌಸ್ ಜೊತೆಗೆ ರಾಕಿ ಭಾಯ್ ಸಿನಿಮಾ ಮಾಡುತ್ತಾರೆ ಅನ್ನೋದೇ ಹೆಚ್ಚು ಕೇಳಿ ಬರ್ತಿರೋ ಮಾತು. ಆದರೆ ಇದರ ಮಧ್ಯೆ ಇನ್ನೂ ಒಂದು ಹೊಸ ಸುದ್ದಿ (Yash New Movie Updates) ಹರಿದಾಡುತ್ತಿದೆ.
ಇದು ತುಂಬಾನೇ ಇಂಟ್ರಸ್ಟಿಂಗ್ ಆಗಿಯೇ ಇದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.
ಶೀಘ್ರದಲ್ಲಿಯೇ ರಾಕಿಂಗ್ ಸ್ಟಾರ್ ರಾಕಿಂಗ್ ನ್ಯೂಸ್ !
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೊನೆ ಸಿನಿಮಾ ಯಾವುದು? ಅದು ಬೇರೆ ಯಾವುದೋ ಅಲ್ಲ. ಯಾರನ್ನ ಕೇಳಿದ್ರೂ ಹೇಳಿ ಬಿಡ್ತಾರೆ. ಅದು ಕೆಜಿಎಫ್-2 ಅಂತ ಸಾರಿ ಸಾರಿ ಹೇಳಿ ಬಿಡ್ತಾರೆ. ಹೀಗೆ ಹೇಳಲಿಕ್ಕೆ ಕಾರಣವೂ ಇದೆ. ಅದೆಷ್ಟೋ ದಿವಸಗಳಿಂದ ಯಶ್ ಅಭಿಮಾನಿಗಳು ಯಶ್ ಹೊಸ ಸಿನಿಮಾಗೋಸ್ಕರವೇ ಕಾದು ಕುಳಿತಿದ್ದಾರೆ.
ಏಪ್ರಿಲ್-14 ರಂದು ರಾಕಿ ಭಾಯ್ ಕೊಡ್ತಾರೆ ಬಿಗ್ ನ್ಯೂಸ್
ಹೌದು ಇದಂತೂ ನಿಜ, ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಹಾಗಿದ್ದರೂ ಕೂಡ ಯಶ್ ಮುಂದಿನ ಸಿನಿಮಾ ಅನೌನ್ಸ್ ಆಗಲೇ ಇಲ್ಲ. ಯಾಕೆ ಅಂತ ಕೇಳೋರಿಗೆ ವೇಟ್ ಮಾಡಿ ಟೈಮ್ ಬಂದಾಗ ಹೇಳ್ತಿವಿ ಅಂತಲೇ ರಾಕಿ ಭಾಯ್ ಹೇಳ್ತಾನೇ ಇದ್ದಾರೆ.
ಆದರೆ ಆ ಟೈಮ್ ಇನ್ನೂ ಬಂದಂತೆ ಕಾಣೋದೇ ಇಲ್ಲ. ಆ ಟೈಮ್‌ಗೋಸ್ಕರವೇ ಅದೆಷ್ಟೋ ಅಭಿಮಾನಿಗಳು ಕಾಯುತ್ತಿದ್ದಾರೆ. ತಮ್ಮ ಮನಸ್ಸಿಗೆ ತೋಚಿದ ಇಲ್ಲವೇ ಅಲ್ಲಿ-ಇಲ್ಲಿ ಕೇಳಿದ ವಿಷಯವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ರಾಕಿ ಭಾಯ್ ಮುಂದಿನ ಸಿನಿಮಾದ ಹೊಸ ಮ್ಯಾಟರ್
ರಾಕಿ ಭಾಯ್ ಮುಂದಿನ ಸಿನಿಮಾ ಈಗ ಬರುತ್ತದೆ. ಇನ್ನೇನೂ ಬಂದೇ ಬಿಡ್ತು ಅನ್ನೋ ಅರ್ಥದಲ್ಲಿಯೇ ಬರೆದುಕೊಂಡು ಖುಷಿ ಪಡುತ್ತಿದ್ದಾರೆ. ಆದರೆ ಅಧಿಕೃತ ಮಾಹಿತಿ ಇನ್ನೂ ಎಲ್ಲೂ ಬಂದಿಯೇ ಇಲ್ಲ. ಹಾಗೇನೆ ರಾಕಿ ಭಾಯ್ ಯಾರ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಕೂಡ ಹಾಗೇ ಇದೆ.
ಆದರೆ ಈ ಮಧ್ಯೆ ಇನ್ನೂ ಒಂದು ಸುದ್ದಿ ಈಗ ಬಲವಾಗಿಯೇ ಹರಿದಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬೇರೆ ಲೆವಲ್‌ಗೆ ಇರುತ್ತದೆ ಅನ್ನೋದು ಒಂದು ಮಾತು, ಅದರ ಬೆನ್ನಲ್ಲಿಯೇ ಇನ್ನೂ ಒಂದು ಕುತೂಹಲ ಕೂಡ ಹುಟ್ಟಿಕೊಂಡಿದೆ.
ರಾಕಿ ಭಾಯ್ ಮುಂದಿನ ಚಿತ್ರಕ್ಕೆ ಲೇಡಿ ಡೈರೆಕ್ಟರ್!
ಹೌದು, ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರಕ್ಕೆ ಲೇಡಿ ಡೈರೆಕ್ಟರ್ ಇರ್ತಾರೆ ಅನ್ನೋದು ಈಗಿನ ತುಂಬಾ ಇಂಟ್ರಸ್ಟಿಂಗ್ ಅನಿಸೋ ವಿಷಯ. ಆದರೆ ಯಾರು ಆ ಲೇಡಿ ಡೈರೆಕ್ಟರ್ ಯಾರು ಅನ್ನೋದು ಮಾತ್ರ ಎಲ್ಲೂ ಯಾವ ಅರ್ಥದಲ್ಲೂ ರಿವೀಲ್ ಆಗಿಲ್ಲ ಬಿಡಿ.
ಇದರ ಹೊರತಾಗಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿಯೇ ಹಾಲಿವುಡ್‌ಗೆ ಹೋಗಿ ತರಬೇತಿ ಪಡೆದಿದ್ದಾರೆ ಅನ್ನೋದು ಕೂಡ ಈಗ ಗುಟ್ಟಾಗಿ ಉಳಿದಿಲ್ಲ. ಹಾಲಿವುಡ್‌ನ ಜೆ. ಜೆ. ಪೆರ್ರಿ ಅವರ ಬಳಿ ಆ್ಯಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಬೇಕಾಗೋ ಎಲ್ಲ ತರಬೇತಿ ಪಡೆದುಕೊಂಡು ಬಂದಿದ್ದಾರೆ.
ರಾಕಿ ಭಾಯ್‌ಗೆ ಏಪ್ರಿಲ್-14 ತುಂಬಾ ಸ್ಪೆಷಲ್ ಯಾಕ್ ಗೊತ್ತೇ?
ಹಾಗೆ ಇನ್ನೂ ಹೆಸರಿಡದ ಈ ಚಿತ್ರದ ಅಧಿತಕೃತ ಅನೌನ್ಸ್‌ಮೆಂಟ್ ಕೂಡ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿಯೇ ಆಗುತ್ತದೆ ಅನ್ನೋದು ದಟ್ಟವಾಗಿದೆ. ಏಪ್ರಿಲ್-14 ರಂದು ರಾಕಿಂಗ್ ಸ್ಟಾರ್ ಯಶ್ ಅವರ 19 ನೇ ಸಿನಿಮಾ ಅನೌನ್ಸ್ ಆಗುತ್ತದೆ ಅನ್ನೋದು ಸದ್ಯದ ಹಾಟ್ ನ್ಯೂಸ್ ಆಗಿದೆ.
ಇದನ್ನೂ ಓದಿ: Sai Pallavi: ತನ್ನ ಧ್ವನಿ, ಪಿಂಪಲ್ಸ್ನಿಂದಾಗಿ ತುಂಬಾ ಬೇಸರ ಪಡ್ತಿದ್ರಂತೆ ಪ್ರೇಮಂ ನಟಿ
ಹಾಗಾಗಿಯೇ ಏಪ್ರಿಲ್-14 ಮತ್ತು 19 ನೇ ಸಿನಿಮಾ ಅನ್ನೋದು ಇದೀಗ ಯಶ್ ಚಿತ್ರ ಜೀವನದಲ್ಲಿ ಸ್ಪೆಷಲ್ ಆಗೋ ಸಾಧ್ಯತೆ ಇದೆ. ಹಾಗೇನೆ ಮಹಿಳಾ ನಿರ್ದೇಶಕಿಯ ನಿರ್ದೇಶನದಲ್ಲಿ ಯಶ್ ಅಭಿನಯಿಸುತ್ತಾರೆ ಅನ್ನೋದು ಕೂಡ ಹೊಸ ವಿಷಯವೇ ಆಗಿದೆ. ಇದರ ಹೊರತಾಗಿ ಯಶ್ ಅವರ ಹೋಮ್ ಬ್ಯಾನರ್‌ನಲ್ಲಿಯೇ ಸಿನಿಮಾ ಬರುತ್ತದೆ ಅನ್ನೋದು ಕೂಡ ಈಗ ಹೆಚ್ಚು ಕೇಳಿ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ