ಕನ್ನಡಿಗರು ಹೆಮ್ಮೆಪಡೋ ದಾಖಲೆ ಬರೆದ ನಮ್ಮ ಯಶ್: ಇದು ಅಂತಿಂತ ಸಾಮಾನ್ಯ ರೆಕಾರ್ಡ್ ಅಲ್ಲ!

Rocking Star Yash: ರಾಕಿ ಭಾಯ್​ ಬಗ್ಗೆ ಏನೇ ವಿಷಯ ಇದ್ದರು ಅದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ ಅವರ ಬಗ್ಗೆ ಏನಾದರೊಂದು ಪೋಸ್ಟ್​ ಹರಿಬಿಡುತ್ತಲೇ ಇರುತ್ತಾರೆ. ಇದೀಗ ಟ್ವಿಟ್ಟರ್​ನಲ್ಲಿ ಹೊಸದೊಂದು ದಾಖಲೆಯನ್ನು ಬರೆಯುವ ಮೂಲಕ ಯಶ್ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

news18-kannada
Updated:June 12, 2020, 2:03 PM IST
ಕನ್ನಡಿಗರು ಹೆಮ್ಮೆಪಡೋ ದಾಖಲೆ ಬರೆದ ನಮ್ಮ ಯಶ್: ಇದು ಅಂತಿಂತ ಸಾಮಾನ್ಯ ರೆಕಾರ್ಡ್ ಅಲ್ಲ!
ಯಶ್
  • Share this:
ರಾಕಿಂಗ್​​ ಸ್ಟಾರ್​​​​ ಯಶ್​ಗೆ​ ಕೆ.ಜಿ.ಎಫ್​​ ಸಿನಿಮಾ ಹೊಸ ಫೇಮ್ ತಂದುಕೊಟ್ಟಿತು ಎಂದರೆ ತಪ್ಪಾಗಲಾರದು. ಕೆ.ಜಿ.ಎಫ್ ದಾಖಲೆ ಮೇಲೆ ದಾಖಲೆ ಬರೆದರೆ, ಇತ್ತ ಯಶ್ ಹೆಸರು ಚಿತ್ರರಂಗದಲ್ಲಿ ಉತ್ತುಂಗಕ್ಕೇರಿತು. ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದರು. ಸದ್ಯ ರಾಕಿ ಭಾಯ್​ ಬಗ್ಗೆ ಏನೇ ವಿಷಯ ಇದ್ದರು ಅದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅಭಿಮಾನಿಗಳು ಕೂಡ ಅವರ ಬಗ್ಗೆ ಏನಾದರೊಂದು ಪೋಸ್ಟ್​ ಹರಿಬಿಡುತ್ತಲೇ ಇರುತ್ತಾರೆ. ಇದೀಗ ಟ್ವಿಟ್ಟರ್​ನಲ್ಲಿ ಹೊಸದೊಂದು ದಾಖಲೆಯನ್ನು ಬರೆಯುವ ಮೂಲಕ ಯಶ್ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದಲ್ಲೇ ಅತಿ ಹೆಚ್ಚು ಟ್ವೀಟ್​ಗಳು ರೀಟ್ವೀಟ್​​​ ಆಗಿರುವ ನಟರ ಪಟ್ಟಿಯಲ್ಲಿ ಯಶ್​ ಹೆಸರು ಕಾಣಿಸಿಕೊಂಡಿದೆ. ಆ ಮೂಲಕ ಕನ್ನಡದ ಏಕೈಕ ನಟನ ಹೆಸರು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸಿದೆ. ಅನೇಕ ನಟರ ಟ್ವೀಟ್​ಗಳು ಟ್ವಿಟ್ಟರ್​ನಲ್ಲಿ ರೀಟ್ವೀಟ್​ ಆಗುತ್ತದೆ. ಅದರಂತೆ ರಾಕಿ ಭಾಯ್​ ಟ್ವೀಟ್​ಗಳು ಕೂಡ ಹೆಚ್ಚು ರೀಟ್ವೀಟ್​ ಆಗಿದ್ದು, 12ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ 1496 ಬಾರಿ ರೀಟ್ವೀಟ್​ ಆಗಿವೆ. ಈ ಖುಷಿಯ ಸಂಗತಿಯನ್ನ ಯಶ್​ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ‘ನಾಮ್​​ ಥೋ ಯಾದ್​​​ ಹೈ ನಾ‘ ಎಂದು ಬರೆದುಕೊಂಡು ಶೇರ್​ಮಾಡುತ್ತಿದ್ದಾರೆ.

ರೀಟ್ವೀಟ್​​ ಆದ ಪಟ್ಟಿಯಲ್ಲಿ ಟಾಲಿವುಡ್​ ನಟ ಜ್ಯೂನಿಯರ್​ ಎನ್​ಟಿಆರ್​ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅವರ ಹೆಸರಿನಲ್ಲಿ 13,118 ಬಾರಿ ರೀಟ್ವೀಟ್​ ಆಗಿದೆ. 2ನೇ ಸ್ಥಾನದಲ್ಲಿ ಕಾಲಿವುಡ್​ ನಟ ರಜನಿಕಾಂತ್​ ಅವರ ಹೆಸರು ಕಾಣಿಸಿಕೊಂಡಿದೆ. 10,362 ಬಾರಿ ರೀಟ್ವೀಟ್​ ಆಗಿದೆ. 3ನೇ ಸ್ಥಾನದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಹೆಸರು ಕಾಣಿಸಿಕೊಂಡಿದ್ದು, 6,312 ಬಾರಿ ರೀಟ್ವೀಟ್​ ಆಗಿದೆ.

ವಿಶೇಷವೆಂದರೆ ನಟ ಯಶ್​​ ಹೆಸರಿನ ನಂತರ ಖ್ಯಾತ ನಟ ಅಮೀರ್​ ಖಾನ್​, ಹೃತಿಕ್​ ರೋಷನ್​, ಮೋಹನ್​ ಲಾಲ್​​​, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ರಣ್​ವೀರ್​ ಸಿಂಗ್​​, ಪ್ರಿಯಾಂಕಾ ಚೋಪ್ರಾ, ಸಮಂತಾ, ಕಾಜಲ್​ ಅಗರ್​ವಾಲ್​​ ಮುಂತಾದವರ ಹೆಸರಗಳು ಪಟ್ವಿಯಲ್ಲಿ ಕಾಣಿಸಿಕೊಂಡಿದೆ.

Viral Video: ಕೋತಿಗೆ ಕೈ ತುತ್ತು ತಿನ್ನಿಸುತ್ತಿರುವ ಮಹಿಳೆ; ಈ ಪ್ರೀತಿಗೆ ನೀವೇನು ಹೇಳುತ್ತೀರಿ?

ಸ್ಯಾಮಿಯನ್ನು ಜನಾಂಗೀಯ ನಿಂದನೆ ಮಾಡಿದ್ದು ಮತ್ಯಾರು ಅಲ್ಲ; ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ?
First published: June 12, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading