ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ (Narthan New Movie News) ನರ್ತನ್ ಕಾಂಬಿನೇಷನ್ ಸಿನಿಮಾ ಏನ್ ಆಯಿತು. ಈ ಸಿನಿಮಾ ಕಥೆ ಎಲ್ಲಿಗೆ ಬಂತು ? ಈ ಚಿತ್ರದ ಈಗೀನ ಅಪ್‌ಡೇಟ್ಸ್ ಏನು? ನರ್ತನ್ ಮತ್ತು ಯಶ್ ಚಿತ್ರ ಸೆಟ್ಟೇರೋದಿಲ್ವೇ ? ಅಸಲಿಗೆ ಈ (Rocking Star Yash-Narthan Movie) ಸಿನಿಮಾಕ್ಕೆ ನರ್ತನ್ ಹಾಕಿರೋ ಶ್ರಮ ವೇಸ್ಟ್ ಆಯಿತೇ ? ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನರ್ತನ್ ಚಿತ್ರ ಮಾಡೋದೇ ಇಲ್ವೇ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಆದರೆ ಅದು ಸಮರ್ಥವಾಗಿದೆ ಅಂತ ಹೇಳೋದು ಕಷ್ಟವೆ ಸರಿ. ಡೈರೆಕ್ಟರ್ ನರ್ತನ್ ತಮ್ಮ ಈ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆ ಹೇಳೋವಾಗ ಇನ್ನೂ ಒಂದು ಸತ್ಯವನ್ನ (Rocking Star Yash Updates) ಕೂಡ ಹೇಳಿಕೊಂಡಿದ್ದಾರೆ.
ಅಸಲಿಗೆ ನರ್ತನ್ ಮತ್ತು ಯಶ್ ಸಿನಿಮಾ ಕಥೆ ರೆಡಿ ಆಗಿತ್ತು. ಯಶ್ ಕೂಡ ಈ ಒಂದು ಕಥೆಯನ್ನ ಕೇಳಿದ್ದರು. ಇದಕ್ಕಾಗಿಯೇ ನರ್ತನ್ ಸಾಕಷ್ಟು ಶ್ರಮಪಟ್ಟಿದ್ದರು. ಅದ್ಭುತ ಕಥೆಯನ್ನ ಮಾಡಿಕೊಂಡಿದ್ದರು. ದೊಡ್ಡ ದೊಡ್ಡ ಕನಸುಗಳನ್ನ ಕೂಡ ಕಟ್ಟಿಕೊಂಡಿದ್ದರು.
ಯಶ್-ನರ್ತನ್ ಸಿನಿಮಾ ಸ್ಟಾಪ್ ಆಯಿತೇ ?
ಆದರೆ ಈ ಕಥೆ ಅದ್ಯಾರಿಗೆ ಹೊಳೆದಿತ್ತೋ ಏನೋ ? ಓಟಿಟಿ ಪ್ಲಾಟ್ ಫಾರಂ ಅಲ್ಲಿ ನರ್ತನ್ ಬರೆದ ಕಥೆ ರೀತಿಯ ಒಂದು ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಗೆ ಎಲ್ಲವೂ ಏರು-ಪೇರು ಆಯಿತು.
ಡೈರೆಕ್ಟರ್ ನರ್ತನ್ ಕಂಡ ಕನಸು ಕನಸಾಗಿಯೇ ಉಳಿದು ಬಿಡ್ತು ನೋಡಿ. ಹೌದು, ಈ ಒಂದು ವಿಷಯ ಸುಮಾರು ದಿನಗಳಿಂದಲೂ ಹರಿದಾಡುತ್ತಲೇ ಇತ್ತು. ಆದರೆ ನರ್ತನ್ ಈ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಭೈರತಿ ರಣಗಲ್ ಚಿತ್ರದ ಮುಹೂರ್ತದ ಸಮಯದಲ್ಲಿ ಈ ಕುರಿತು ಕೇಳಿದ ಪ್ರಶ್ನೆಗೆ ಡೈರೆಕ್ಟರ್ ನರ್ತನ್ ಉತ್ತರ ಕೊಟ್ಟಿದ್ದಾರೆ.
ಯಶ್‌ಗಾಗಿಯೇ ಕಥೆ ತಿದ್ದುಪಡಿ ಮಾಡ್ತಿದ್ದಾರೆ ನರ್ತನ್
ರಾಕಿಂಗ್ ಸ್ಟಾರ್ ಯಶ್ ಗಾಗಿಯೇ ಕಥೆ ಮಾಡಿಕೊಂಡಿದ್ದೆ. ಆದರೆ ಓಟಿಟಿಯಲ್ಲಿ ದಿನವೂ ಸುಮಾರು ಸಿನಿಮಾಗಳು ಬರ್ತಾನೇ ಇರುತ್ತವೆ. ಹಾಗಾಗಿಯೇ ಈಗ ನಮ್ಮ ಕಥೆಯ ತಿದ್ದುವ ಕೆಲಸ ನಡೆಯುತ್ತಿದೆ. ಯಶ್ ಜೊತೆಗೆ ಸಿನಿಮಾ ಮಾಡುತ್ತೇನೆ. ದೊಡ್ಡ ಸ್ಟಾರ್‌ಗೆ ಸಿನಿಮಾ ಮಾಡೋದನ್ನ ಯಾರು ಮಿಸ್ ಮಾಡಿಕೊಳ್ತಾರೆ ಅಂತಲೇ ನರ್ತನ್ ಹೇಳಿಕೊಂಡಿದ್ದಾರೆ.
ಮಫ್ತಿ ಮೂಲಕ ದೊಡ್ಡ ಹೆಸರು ಮಾಡಿರೋ ಡೈರೆಕ್ಟರ್ ನರ್ತನ್
ನರ್ತನ್ ತಮ್ಮ ಸಿನಿಮಾ ಜೀವನದಲ್ಲಿ ಮಫ್ತಿ ಮೂಲಕ ದೊಡ್ಡ ಹೆಸರು ಮಾಡಿಕೊಂಡರು. ಮೊದಲ ಸಿನಿಮಾದಲ್ಲಿಯೇ ಒಳ್ಳೆ ಡೈರೆಕ್ಟರ್ ಅನಿಸಿಕೊಂಡ್ರು. ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆಗೂ ನರ್ತನ್ ಕೆಲಸ ಮಾಡಿದ್ದಾರೆ. ದೊಡ್ಡ ಕನಸಿನೊಂದಿಗೆ ಯಶ್ ಗಾಗಿ ಕಥೆಯನ್ನ ಕೂಡ ಮಾಡಿಕೊಂಡಿದ್ದರು.
ಆದರೆ ಈ ಸಿನಿಮಾದ ಕಥೆ ಬೇರೆ ಚಿತ್ರ ಒಂದರ ಕತೆಗೆ ಹೋಲುತ್ತದೆ ಅಂತ ತಿಳಿದ ಕೂಡಲೇ, ಎಲ್ಲವೂ ಬದಲಾಗಿ ಹೋಗಿದೆ. ಅತಿ ದೊಡ್ಡ ಕನಸು ಕಂಡ ಡೈರೆಕ್ಟರ್ ನರ್ತನ್ ಇಷ್ಟಪಟ್ಟು ಬರೆದ ಕಥೆಯನ್ನ ಮತ್ತೆ ಮತ್ತೆ ಈಗ ಸರಿ ಮಾಡುತ್ತಿದ್ದಾರೆ.
ಅಂದು ಯಾರೂ ಡೈರೆಕ್ಟರ್ ನರ್ತನ್ ಕೈ ಹಿಡಿಯಲೇ ಇಲ್ವೇ ?
ಇದರ ಮಧ್ಯ ರಾಮ್ ಚರಣ್ ಗಾಗಿಯೂ ಡೈರೆಕ್ಟರ್ ನರ್ತನ್ ಸಿನಿಮಾ ಮಾಡ್ತಿದ್ದಾರೆ ಅನ್ನುವ ಮಾಹಿತಿ ಕೂಡ ಇತ್ತು. ಈ ಬಗ್ಗೆ ನ್ಯೂಸ್-18 ಕನ್ನಡ ಜೊತೆಗೂ ಡೈರೆಕ್ಟರ್ ನರ್ತನ್ ಮಾತನಾಡಿದ್ದರು. ಈ ಸಂಬಂಧ ಮಾತುಕಥೆ ನಡೆಯುತ್ತಿದೆ. ಪ್ರೋಡಕ್ಷನ್ ಹೌಸ್‌ನಿಂದ ಕಾಲ್ ಕೂಡ ಬಂದಿತ್ತು ಅಂತಲೇ ನರ್ತನ್ ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳು ಆಗೋ ಸಮಯದಲ್ಲಿಯೇ ಭೈರತಿ ರಣಗಲ್ ಸಿನಿಮಾದ ಸುದ್ದಿ ಹೊರ ಬಂದಿತ್ತು. ಅದು ಅಧಿಕೃತವಾಗಿ ಅನೌನ್ಸ್ ಕೂಡ ಆಯಿತು. ಆದರೆ ಕಾಮೆಂಟ್‌ಗಳು ತುಂಬಾನೆ ಕೆಟ್ಟದಾಗಿಯೇ ಬಂದಿದ್ದವು
ನರ್ತನ್ ಕಂಡ ಕನಸಿಗೆ ಶಿವರಾಜ್ ಕುಮಾರ್ ಸಾಥ್
ಆ ಕಡೆಗೆ ರಾಮ್ ಚರಣ್ ಕೈಹಿಡಿಯಲಿಲ್ಲ, ಈ ಕಡೆಗೆ ಯಶ್ ಕೂಡ ಸಾಥ್ ಕೊಡಲಿಲ್ಲ ಅನ್ನುವ ಮಾತು ಕೂಡ ಕೇಳಿ ಬಂತು. ಆದರೆ ಶಿವಣ್ಣ ಭೈರತಿ ರಣಗಲ್ ಸಿನಿಮಾ ಮೂಲಕ ನರ್ತನ್ ಕೈಹಿಡಿದಿದ್ದಾರೆ ಅನ್ನುವ ಟಾಕ್ ಕೂಡ ಇದೆ.
ಇದನ್ನೂ ಓದಿ: Shiva Rajkumar: ಭೈರತಿ ರಣಗಲ್ ಕಥೆ ಹೇಳಿ ಬಿಟ್ರಾ ಶಿವಣ್ಣ?
ಹಾಗಾಗಿಯೇ ಅಪಾರ ಸಿನಿಮಾ ಪ್ರೀತಿಯ ನರ್ತನ್, ಭೈರತಿ ರಣಗಲ್ ಚಿತ್ರದ ವಿಷಯದಲ್ಲೂ ದೊಡ್ಡಮಟ್ಟದಲ್ಲಿಯೇ ಕನಸು ಕಂಡಿದ್ದಾರೆ. ಅದನ್ನ ಸಾಕಾರಗೊಳಿಸಲು ಗೀತಾ ಪಿಕ್ಚರ್ಸ್ ಮುಂದಾಗಿದೆ. ಶಿವರಾಜ್ ಕುಮಾರ್ ಇದೀಗ ನರ್ತನ್ ಕನಸನ್ನ ಬೆಳ್ಳಿ ತೆರೆ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ಜೂನ್-10 ರಂದು ಸಿನಿಮಾ ಶೂಟಿಂಗ್ ಶುರು ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ