ತಮಿಳಿನ ಖ್ಯಾತ ಡೈರೆಕ್ಟರ್ Yash ಗೆ ಆಕ್ಷನ್ ಕಟ್ ಹೇಳ್ತಾರಾ? ಈ ಚಿತ್ರದ ಬಜೆಟ್ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರೆಂಟಿ!
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಜೆಟ್ ಬರೋಬ್ಬರಿ 800 ಕೋಟಿ ಎಂದು ಹೇಳಲಾಗುತ್ತಿದೆ. ಇದೇನಾದರೂ ನಿಜವಾದಲ್ಲಿ ಇಂತಹ ಬಿಗ್ ಬಜೆಟ್ ಮೂವಿ ಮಾಡಿದ ಮೊದಲ ಸ್ಯಾಂಡಲ್ ವುಡ್ ಹಾಗೂ ಸೌತ್ ನಟ ಎಂಬ ಖ್ಯಾತಿಗೆ ಯಶ್ ಭಾಜನರಾಗಲಿದ್ದಾರೆ.
ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರದ ನಂತ್ರ ರಾಕಿಂಗ್ ಸ್ಟಾರ್ ಯಶ್ (Rocking Star Yash) ನಡೆ ಏನು? ರಾಕಿಂಗ್ ಸ್ಟಾರ್ 19ನೇ ಸಿನಿಮಾ ಯಾವಾಗ ಅನೌನ್ಸ್ (Announce) ಆಗುತ್ತೆ. ಆ ಚಿತ್ರಕ್ಕೆ ಸಾರಥಿ ಯಾರು? ಇಂತ ಹತ್ತು ಹಲವು ಪ್ರಶ್ನೆಗಳು ರಾಕಿಭಾಯ್ ಅಭಿಮಾನಿಗಳ (Fans) ಮನಸ್ಸಿನಲ್ಲಿ ಓಡಾಡುತ್ತಿದೆ. ಅಲ್ಲದೇ ಕೆಲದಿನಗಳಿಂದ ಇವರು ಯಶ್ಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ, ಇವರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಇದನ್ನು ಕೇಳಿದ ರಾಕಿಭಾಯ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಲ್ಲದೇ ಈ ಸುದ್ದಿ ನಿಜವಾಗಲೆಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಅಂತಾ ಸೂಪರ್ ಸುದ್ದಿಯಾದ್ರು ಏನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.
800 ಕೋಟಿ ಬಜೆಟ್ ಸಿನಿಮಾದಲ್ಲಿ ಯಶ್?:
ಹೌದು, ಇಂತದೊಂದು ಸುದ್ದಿ ಇದೀಗ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಜೆಟ್ ಬರೋಬ್ಬರಿ 800 ಕೋಟಿ ಎಂದು ಹೇಳಲಾಗುತ್ತಿದೆ. ಇದೇನಾದರೂ ನಿಜವಾದಲ್ಲಿ ಇಂತಹ ಬಿಗ್ ಬಜೆಟ್ ಮೂವಿ ಮಾಡಿದ ಮೊದಲ ಸ್ಯಾಂಡಲ್ ವುಡ್ ಹಾಗೂ ಸೌತ್ ನಟ ಎಂಬ ಖ್ಯಾತಿಗೆ ಯಶ್ ಭಾಜನರಾಗಲಿದ್ದಾರೆ. ಅಲ್ಲದೇ ಈ ರೂಮರ್ಸ್ ಕೇಳಿದ ಅಭಿಮಾನಿಗಳಂತೂ ಸಖತ್ ಥ್ರಿಲ್ ಆಗಿದ್ದು, ಯಶ್ ಅವರ ಮೂಮದಿನ ಸಿನಿಮಾದ ಅನೌನ್ಸ್ ಗಾಗಿ ಕಾಯುತ್ತಿದ್ದಾರೆ.
ತಮಿಳಿನ ಸ್ಟಾರ್ ಡೈರೆಕ್ಟರ್ ಜೊತೆ ರಾಕಿ ಭಾಯ್?:
ಇದರ ಜೊತೆ ಮತ್ತೊಂದು ಸೂಪರ್ ಸುದ್ದಿ ಹರಿದಾಡುತ್ತಿದ್ದು, ರೋಬೋ, ರೋಬೋ 2.0ನ ನಂತಹ ಅದ್ದೂರಿ ಚಿತ್ರಗಳನ್ನು ನಿರ್ದೇಶಿಸಿರುವ ತಮಿಳಿನ ನಿರ್ದೇಶಕ ಶಂಕರ್ ಅವರು ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಶಂಕರ್ ನಿರ್ದೇಶನದಲ್ಲಿ ಬರೋಬ್ಬರಿ 800 ಕೋಟಿ ಬಜೆಟ್ ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯಶ್ ಆಲೋಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಎಲ್ಲಡೆ ಪಸರಿಸಿದ್ದು, ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆ ಯರ್ಶ ಮುಂದಿನ ಚಿತ್ರವನ್ನು ನರ್ತನ್ ಮಾಡಲಿದ್ದಾರೆ ಎಂಬ ಬಲವಾದ ಮಾತುಗಳೂ ಸಹ ಕೇಳಿಬರುತ್ತಿದೆ.
ಕೆಜಿಎಫ್ 2 ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದೀಗ ಯರ್ಶ ಅವರ ಮಾರ್ಕೆಟ್ ಸಹ ದೊಡ್ಡದಾಗಿದೆ. ಅಲ್ಲದೇ ಅವರ ಮುಂದಿನ ಸಿನಿಮಾದ ಕುರಿತ ಮಾಹಿತಿಗಾಗಿ ಇಡೀ ಭಾರತವೇ ಕಾದುಕುಳಿತಿದೆ. ಇದರ ನಡುವೆ ಕೆಜಿಎಫ್ 2 ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕ ದಿಲ್ ರಾಜು ಅವರು ಯರ್ಶ ಅವರ ಸಿನಿಂಆಗೆ ಬಂಡವಾಳ ಹೂಡಲಿದ್ದಾರೆ ಎಂಬ ಮಾತುಗಳಿವೆ. ಅಲ್ಲದೇ ಯಶ್ ಅವರಿಗೆ 100 ಕೋಟಿ ಸಂಭಾವನೆಯನ್ನೂ ಸಹ ನೀಡಲಿದ್ದಾರೆ ಎನ್ನಲಾಗಿದ್ದು, ಇದೇನಾದರೂ ನಿಜವಾದಲ್ಲಿ ಭಾರತದಲ್ಲಿಯೇ ಒಂದು ಚಿತ್ರಕ್ಕೆ 100 ಕೋಟಿ ಸಂಭಾವನೆ ಪಡೆದ ಮೊದಲ ನಟ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವವರ ಲೀಸ್ಟ್ ನಲ್ಲಿ ರಾಕಿಭಾಯ್ ಮೊದಲಿಗರಾಗುತ್ತಾರೆ.
ಯಶ್ 800 ಕೋಟಿ ಬಜೆಟ್ ಚಿತ್ರದಲ್ಲಿ ನಟಿಸಲಿದ್ದಾರೆ ಹಾಗೂ 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಗಳು ಒಂದೇ ವಾಋದಲ್ಲಿ ಹರಡಿರುವ ಬೆನ್ನಲ್ಲೇ ಅಭಿಮಾನಿಗಳು ಇದು ಪಕ್ಕಾ ಸುದ್ದಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಏನೇ ಆಗಲಿ ಯಶ್ ಅವರ ಮುಂದಿನ ಸಿನಿಂಆದ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದರ ನಡುವೆ ಇಂತಹ ಹಲವಾರು ಮಾಹಿತಿಗಳು ಹರಿದಾಡುತ್ತಿದ್ದು, ರಾಕಿಭಾಯ್ ಹವಾ ಎಷ್ಟಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ