Rocking Star Yash: ದಚ್ಚು-ಪುನೀತ್​ ನಂತರ ರಾಕಿಂಗ್​ ಸ್ಟಾರ್​ ಸರದಿ: ಪುಟ್ಟ ಅಭಿಮಾನಿಗೆ ಸಾಂತ್ವನ ಹೇಳಿದ ಯಶ್​..!

Rocking Star Yash: ರಾಕಿಂಗ್‍ಸ್ಟಾರ್ ಯಶ್ ರಾಜ್ಯದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರೋ ನಟ. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ತನ್ನ ನೆಚ್ಚಿನ ನಟ ಯಶ್‍ರನ್ನು ನೋಡಬೇಕು ಅಂತ ಮನೆಯವರ ಬಳಿ ಹೇಳಿಕೊಂಡಿದ್ದರು. ಇದನ್ನು ತಿಳಿದುಕೊಂಡ ನಟ ಯಶ್ ಅಭಿಮಾನಿಯನ್ನು ಜಿಮ್ ಬಳಿ ಕರೆಸಿಕೊಂಡು, ಪ್ರೀತಿಯಿಂದ ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

Anitha E | news18
Updated:July 1, 2019, 2:04 PM IST
Rocking Star Yash: ದಚ್ಚು-ಪುನೀತ್​ ನಂತರ ರಾಕಿಂಗ್​ ಸ್ಟಾರ್​ ಸರದಿ: ಪುಟ್ಟ ಅಭಿಮಾನಿಗೆ ಸಾಂತ್ವನ ಹೇಳಿದ ಯಶ್​..!
ಜಿಮ್​ನಲ್ಲಿ ಅಭಿಮಾನಿಯನ್ನು ಭೇಟಿ ಮಾಡಿದ ಅಭಿಮಾನಿ
  • News18
  • Last Updated: July 1, 2019, 2:04 PM IST
  • Share this:
ಸ್ಯಾಂಡಲ್‍ವುಡ್ ನಟರ ಉದಾರ ಹೃದಯ ಅಭಿಮಾನಿಗಳಿಗಾಗಿ ಮಿಡಿಯೋ ಸುದ್ದಿಗಳನ್ನು ಇತ್ತೀಚೆಗೆ ಮತ್ತೆ ಮತ್ತೆ ಕೇಳ್ತಿದ್ದೀವಿ. ಈಗ ರಾಕಿಂಗ್‍ಸ್ಟಾರ್ ಯಶ್ ಕೂಡ ತಮ್ಮ ಅಭಿಮಾನಿಗೆ ಸಾಂತ್ವನ ಹೇಳಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

ರಾಕಿಂಗ್‍ಸ್ಟಾರ್ ಯಶ್ ರಾಜ್ಯದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರೋ ನಟ. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ತನ್ನ ನೆಚ್ಚಿನ ನಟ ಯಶ್‍ರನ್ನು ನೋಡಬೇಕು ಅಂತ ಮನೆಯವರ ಬಳಿ ಹೇಳಿಕೊಂಡಿದ್ದರು. ಇದನ್ನು ತಿಳಿದುಕೊಂಡ ನಟ ಯಶ್ ಅಭಿಮಾನಿಯನ್ನು ಜಿಮ್ ಬಳಿ ಕರೆಸಿಕೊಂಡು, ಪ್ರೀತಿಯಿಂದ ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

yash
ಅಭಿಮಾನಿಯೊಂದಿಗೆ ಯಶ್​


ಇತ್ತೀಚೆಗೆ ಪವರ್​ ಸ್ಟಾರ್​  ಪುನೀತ್ ರಾಜ್‍ಕುಮಾರನ್ನು ನೋಡೋದು ನನ್ನ ಕೊನೆಯ ಆಸೆ ಅಂತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿಯೊಬ್ಬಳು ಬೇಡಿಕೆಯಿಟ್ಟಿದ್ದಳು. ಅಪ್ಪು ಬೆಂಗಳೂರಿನಿಂದಲೇ 17 ವರ್ಷದ ಬಾಲಕಿಯ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದರು. ಇತ್ತೀಚೆಗೆ 'ಯುವರತ್ನ' ಶೂಟಿಂಗ್‍ಗೆ ಧಾರವಾಡಕ್ಕೆ ಹೋಗಿ, ಅಲ್ಲಿ ಬಾಲಕಿಯನ್ನು ಭೇಟಿಯಾಗಿದ್ರು.

ಬಹಳ ವರ್ಷಗಳ ಹಿಂದೆ ಗೋಲ್ಡನ್​ ಸ್ಟಾರ್​ ಗಣೇಶ್​ ಸಹ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪುಟ್ಟ ಬಾಲಕಿಯ ಕೊನೆಯ ಆಸೆಯನ್ನು ಈಡೇರಿಸಿದ್ದರು.

ಚಾಲೆಂಜಿಂಗ್‍ಸ್ಟಾರ್ ದರ್ಶನ್ ಕೂಡ ಇತ್ತೀಚೆಗೆ ಬಳ್ಳಾರಿಯ ತಮ್ಮ ಅಭಿಮಾನಿಗೆ ಬದುಕಿನ ಬುದ್ದಿಮಾತು ಹೇಳಿದ್ದರು. ಹೀಗೆ ಅಭಿಮಾನಿಗಳ ಕೊನೆಯ ಆಸೆ ಈಡೇರಿಸೋ ಸ್ಟಾರ್​ಗಳ ದೊಡ್ಡ ಗುಣಕ್ಕೆ ಒಂದು ಶಹಬ್ಬಾಸ್ ಹೇಳೋಣ ಅಲ್ವಾ.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ