• Home
  • »
  • News
  • »
  • entertainment
  • »
  • Rocking Star Yash: ವಿದೇಶದಲ್ಲಿ ರಾಕಿಭಾಯ್ ನೋಡಿ ಫ್ಯಾನ್ಸ್ ಖುಷ್, ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡ ಯಶ್​

Rocking Star Yash: ವಿದೇಶದಲ್ಲಿ ರಾಕಿಭಾಯ್ ನೋಡಿ ಫ್ಯಾನ್ಸ್ ಖುಷ್, ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಂಡ ಯಶ್​

ಯಶ್​ , ರಾಧಿಕಾ

ಯಶ್​ , ರಾಧಿಕಾ

Radhika Pandith: ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1000 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ.

ಮುಂದೆ ಓದಿ ...
  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ (Pan India  Star) ಆಗಿ ಮೆರೆಯುತ್ತಿದ್ದಾರೆ. ಅವರಿಗೆ ಅಭಿಮಾನಿ ಬಳಗ ಹೆಚ್ಚಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಸಹ ಅವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ರಾಕಿಭಾಯ್​ ಎಂದರೆ ಸಾಕು ಫ್ಯಾನ್ಸ್​ಗೆ ಅದೇನೋ ಇಷ್ಟ. ಅವರನ್ನು ಭೇಟಿ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಯಾವುದೇ ನಟನ ಅಭಿಮಾನಿಗೆ (ರ್ರFans) ನ್ನು ಒಮ್ಮೆ ನೋಡಿದರೇ ಸಾಕು ಎಂದು ಅನಿಸುತ್ತದೆ. ಅಂತಹ ಒಂದು ಸುಂದರ ಕ್ಷಣ ಯಶ್​ ಅಭಿಮಾನಿಗಳಿಗೆ ಸಿಕ್ಕಿದೆ.


ಇಟಲಿ, ಬಾಂಗ್ಲಾ ಅಭಿಮಾನಿಗಳನ್ನು  ಭೇಟಿ ಮಾಡಿದ ಯಶ್ 


ಯಶ್ ಹಾಗು ರಾಧಿಕಾ ಪಂಡಿತ್ ಸದ್ಯ ಇಟಲಿಯಲ್ಲಿ ಸುತ್ತಾಡುತ್ತಿದ್ದಾರೆ. ಈಗಾಗಲೇ ರಾಧಿಕಾ ಪಂಡಿತ್ ಹಾಗೂ ಯಶ್​ ತಮ್ಮ ಪ್ರವಾಸದ ವಿಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈಗ ಯಶ್​ ಅಭಿಮಾನಿಗಳಿಗೆ ನೆಚ್ಚಿನ ನಟನನ್ನ ನೋಡುವ ಅವಕಾಶ ಸಿಕ್ಕಿದೆ. ಇದು ಅಭಿಮಾನಿಗಳಿಗೆ ಮಾತ್ರವಲ್ಲದೇ ನಟನಿಗೆ ಸಹ ವಿಶೇಷ  ಸಂದರ್ಭ ಎನ್ನಬಹುದು. ವಿದೇಶದಲ್ಲಿ ಬೇರೆ ಬೇರೆ ದೇಶದ ಅಭಿಮಾನಿಗಳು ನಟನನ್ನ ನೋಡಿ ಫುಲ್ ಖುಷ್​ ಆಗಿದ್ದಾರೆ.


ಈ ಬಗ್ಗೆ ಯಶ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳ ಬಗ್ಗೆ ಸ್ಪಷಲ್​ ಮಾತುಗಳನ್ನು ಬರೆದುಕೊಂಡಿದ್ದಾರೆ.  ಯಶ್​ ಸದ್ಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಯಶ್​ ಹಾಗೂ ರಾಧಿಕಾ ಪಂಡಿತ್ ಜೊತೆ ಒಂದು ಗುಂಪು ನಿಂತಿದೆ. ಈ ಜೋಡಿಯ ಜೊತೆ ಇರುವವರು ಬೇರೆ ದೇಶಗಳಲ್ಲಿ ಇರುವ ಯಶ್ ಅವರ ಅಭಿಮಾನಿಗಳು.




ಹೌದು, ಈ ಗುಂಪಿನಲ್ಲಿ, ಇಟಲಿ ಮತ್ತು ಬಾಂಗ್ಲಾದೇಶದ ಅಭಿಮಾನಿಗಳಿದ್ದು, ಯಶ್​ ಅಭಿಮಾನಿಗಳ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.  ಗಡಿಯ ಆಚೆಗೂ ನನ್ನ ಮೇಲಿನ ನಿಮ್ಮ ಪ್ರೀತಿ ಹರಡಿದೆ. ಇದನ್ನು ನೋಡಲು ಸಂತೋಷವಾಗುತ್ತದೆ. ತೆರೆದ ತೋಳುಗಳಿಂದ ನಾನು ಇದನ್ನು ಸ್ವಾಗತಿಸುತ್ತೇನೆ. ಇಟಲಿ ಮತ್ತು ಬಾಂಗ್ಲಾದೇಶದ ಈ ಅಭಿಮಾನಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಈ ಪೋಸ್ಟನ್ನು ಹಂಚಿಕೊಳ್ಳಲು ಕಾರಣ ಎಂದರೆ ಈ ಪೋಸ್ಟ್​ ಎಂದೆಂದಿಗೂ ವಿಶೇಷವಾಗಿ ಉಳಿಯಲಿ ಎನ್ನುವುದು ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಲಾಲ್‌ಬಾಗ್‌ಗೆ ಶಿವರಾಜ್‌ಕುಮಾರ್ ಭೇಟಿ, ಅಪ್ಪು ಪುಷ್ಪೋತ್ಸವದ ಬಗ್ಗೆ ಮಾಹಿತಿ ಪಡೆದ ಶಿವಣ್ಣ









View this post on Instagram






A post shared by Yash (@thenameisyash)





ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1000 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್​ ಇಡುವ ಪ್ರತಿ ಹೆಜ್ಜೆಯೂ ಬಹಳ ನಾಜೂಕಿರಬೇಕು. ಆಯ್ಕೆ ಮಾಡುವ ಸಿನಿಮಾ, ಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಯಶ್​ ಸಿನಿಮಾ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ:ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ, ಫ್ರೆಂಡ್​ ಶಿಪ್​ ಮಹತ್ವ ಸಾರುವ ಕನ್ನಡ ಸಿನಿಮಾಗಳಿವು


ಮುಂದಿನ ಸಿನಿಮಾ ಯಾವ್ದು?


ಸದ್ಯ ಸ್ಯಾಂಡಲ್​ವುಡ್​ನಲ್ಲಿ ಯಶ್​ ಮುಂದಿನ ಸಿನಿಮಾ ಕೆಜಿಎಫ್ 3 ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಿರ್ದೇಶಕ ನರ್ತನ್ ಜೊತೆ ರಾಕಿಭಾಯ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನರ್ತನ್ ಕೂಡ ನಟ ಯಶ್‌ಗೆ ಸೂಕ್ತವಾಗುವ ಅದ್ಭುತ ಕಥೆಯನ್ನು ತಯಾರಿ ಮಾಡಿಕೊಂಡಿದ್ದಾರೆ, ಹಾಗಾಗಿ ಯಶ್​ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಲುಕ್ ಚೇಂಜ್​ ಮಾಡಿಕೊಳ್ಳಲು ವರ್ಕೌಟ್​ ಸ್ಟಾರ್ಟ್​ ಮಾಡಿದ್ದಾರಂತೆ. ನರ್ತನ್ ಕೂಡ ಸ್ಯಾಂಡಲ್​ವುಡ್​ನಲ್ಲಿ ಉತ್ತಮ ನಿರ್ದೇಶಕ ಎಂದು ಹೆಸರು ಪಡೆದಿದ್ದಾರೆ, ಹಾಗಾಗಿ ಅಭಿಮಾನಿಗಳು ಸಹ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಯಶ್​ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ,

Published by:Sandhya M
First published: