`ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ಮೇಲೆ ನನ್ದೆ ಹವಾ’ ಈ ಡೈಲಾಗ್(Dialogue) ನೆನೆಸಿಕೊಂಡರೇ ಸಾಕು ಯಶ್(Yash) ಅವರ ಸಾಧನೆ ಕಣ್ಣಮುಂದೆನೆ ಬರುತ್ತೆ. ಸಿನಿಮಾದಲ್ಲಿ ಮಾತ್ರ ಈ ಡೈಲಾಗ್ ಅಲ್ಲ ನಿಜ ಜೀವನದಲ್ಲೂ ಯಶ್ಗೆ ಈ ಡೈಲಾಗ್ ಸೂಟ್ ಆಗುತ್ತೆ.ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಅಂದರೆ ಅಸಡ್ಡೆ, ಮಾರುಕಟ್ಟೆ(Market) ಇರಲಿಲ್ಲ. ಆದರೆ ಯಶ್ ಅವರ ಕೆಲಸ ನೋಡಿ, ಬೇರೆ ಭಾಷೆಯವರು ನಿಂತು ಕನ್ನಡ ಚಿತ್ರರಂಗದತ್ತ ತಿರುಗಿ ಇವರನ್ನು ಹುಡುಕಿಕೊಂಡು ಬರುವಂತೆ ಮಾಡಿದ್ದಾರೆ. ಕೆಜಿಎಫ್(KGF) ಸಿನಿಮಾದ ಮೂಲಕ ರಾಕಿ ಭಾಯ್ ನ್ಯಾಷನಲ್(National), ಇಂಟರ್ನ್ಯಾಷ್ನಲ್ ಸ್ಟಾರ್(International Star) ಆಗಿದ್ದಾರೆ. ನಮಗೂ ಒಂದು ಹೆಮ್ಮೆ ನಮ್ಮ ಕನ್ನಡದವರ ಹವಾ ಇಡೀ ವಿಶ್ವಕ್ಕೆ ಗೊತ್ತಾಯಿತ್ತಲ್ಲ ಅಂತ. ರಾಕಿಂಗ್ ಸ್ಟಾರ್(Rocking Star) ಅವರ ಕೆಜಿಎಫ್ ಸಿನಿಮಾ ನೋಡಿ ಅದೆಷ್ಟೋ ಮಂದಿ ಗಡ್ಡ(Beard) ಬಿಡುವುದುನ್ನ ಟ್ರೆಂಡ್ ಮಾಡಿಕೊಂಡಿದ್ದಾರೆ. ಎಲ್ಲೇ ನೋಡಿದರು ಗಡ್ಡದಾರಿಗಳದ್ದೇ ಹವಾ. ನಮ್ಮ ರಾಕಿ ಪ್ರತಿಷ್ಠಿತ ಗಡ್ಡದ ಎಣ್ಣೆಯ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್(Brand Ambassador) ಅನ್ನೋದು ಗೊತ್ತೇ ಇದೆ. ಇದೀಗ ಇದರ ಹೊಸ ಜಾಹೀರಾತಿ(New Advertisement)ನಲ್ಲಿ ರಾಕಿ ಭಾಯ್ ಲುಕ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ರಾಕಿ ಭಾಯ್ ಗಡ್ಡ, ಸ್ಟೈಲ್, ಡ್ರೆಸ್ ಅಬ್ಬಬ್ಬಾ ಎಲ್ಲವೂ ಸೂಪರ್..ನೀವು ಒಮ್ಮೆ ನೋಡಿ..
ಹೊಸ ಜಾಹೀರಾತಿನಲ್ಲಿ ರಾಕಿ ಭಾಯ್!
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಈಗ ಸ್ಟೈಲ್ ಐಕಾನ್. ಕೆಜಿಎಫ್ ಚಿತ್ರದ ಮೂಲಕ ಶುರುವಾಗಿ ಯಶ್ ಹೊಸ ಗಡ್ಡದ ಲುಕ್ ಈಗ ಗಡ್ಡದಾರಿಗಳಿಗೆ ರೋಲ್ ಮಾಡೆಲ್. ಯಶ್ ಗಡ್ಡ ನೋಡಿಯೇ ಬಹುತೇಕ ಬ್ರ್ಯಾಂಡ್ಗಳು ಮಾಡಲ್ ಆಗುವಂತೆ ಸಂಪರ್ಕಿಸುತ್ತಿವೆ. ಕೆಲವು ದಿನಗಳ ಹಿಂದೆ ಯಶ್ ಇನ್ಸ್ಟಾಗ್ರಾಂನಲ್ಲಿ ಗಡ್ಡ ಮತ್ತು ಕೂದಲ ಆರೈಕೆ ಮಾಡುವ ಬ್ರ್ಯಾಂಡ್ ಜಾಹೀರಾತು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಶ್ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸ್ವತಃ ರಾಕಿ ಭಾಯ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಜಾಹೀರಾತಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಇದನ್ನು ಓದಿ : ರಕ್ತಪಾತದ ದೃಶ್ಯದಲ್ಲಿ ಮಾದಪ್ಪನ ಜಪ: ವಿವಾದದ ಸುಳಿಯಲ್ಲಿ `ಗರುಡ ಗಮನ ವೃಷಭ ವಾಹನ’
ಕೆಜಿಎಫ್-2 ರಿಲೀಸ್ ಆಗೋವರೆಗೂ ಗಡ್ಡ ತೆಗೆಯಲ್ಲ ಅಂತಿದ್ದಾರೆ ಫ್ಯಾನ್ಸ್
ಇನ್ನೂ ಈ ವಿಡಿಯೋ ನೋಡಿ ಎಲ್ಲರೂ ಥ್ರಿಲ್ ಆಗಿದ್ದಾರೆ. ಏನ್ ಖದರ್ ಲುಕ್ ಗುರೂ ನಾವು ಹೀಗೆ ಗಡ್ಡ ಬಿಡಬೇಕು ಅಂತ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ವಿಡಿಯೋ ಶೇರ್ ಮಾಡುತ್ತಿದ್ದಾರೆ. ಇನ್ನೂ ಮತ್ತೊಬ್ಬ ಅಭಿಮಾನಿ ಕೆಜಿಎಫ್-1 ರಿಲೀಸ್ ಆದಾಗ ಗಡ್ಡ ಬಿಡಲು ಶುರುಮಾಡಿದೆ. ಕೆಜಿಎಫ್ 2 ರಿಲೀಸ್ ಆಗುವವರೆಗೂ ಗಡ್ಡ ತೆಗೆಯಲ್ಲ ಅಂತ ಕಮೆಂಟ್ ಮಾಡಿದ್ದಾನೆ. ಯಶ್ ಅವರ ಹೊಸ ಜಾಹೀರಾತು ಕಂಡು ಫ್ಯಾನ್ಸ್ ಸಖತ್ಖುಷ್ ಆಗಿದ್ದಾರೆ. ಇನ್ನೂ ಹುಡುಗಿಯರಂತೂ ಸಿಕ್ಕರೆ ಇಂಥ ಲುಕ್ ಇರುವ ಗಂಡನೇ ಸಿಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಇದನ್ನು ಓದಿ : ನೋಟದಲ್ಲೇ ಕ್ಲೀನ್ ಬೋಲ್ಡ್ ಮಾಡ್ತಾಳೆ ಈ ಮಿಲ್ಕಿ ಬ್ಯೂಟಿ!
ಏಪ್ರಿಲ್ 14ಕ್ಕೆ ತೆರೆ ಮೇಲೆ ಕೆಜಿಎಫ್-2
ಕೆಜಿಎಫ್ ಸಿನಿಮಾ ಸೃಷ್ಟಿಸಿದ ಹವಾ ಎಲ್ಲರಿಗೂ ಗೊತ್ತೇ ಇದೆ. ಬೇರೆ ದೇಶಗಳು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಸಿನಿಮಾ ಮಾಡಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಇದೀಗ ಕೆಜಿಎಫ್ 2 ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಜನ ಕಾದು ಕೂತಿದ್ದಾರೆ. ಈಗಾಗಲೇ ಕೆಜಿಎಫ್ 2 ಸಿನಿಮಾ ಟ್ರೈಲರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಏಪ್ರಿಲ್ 14 ಯಾವಾಗ ಆಗುತ್ತೆ ಅಂತ ಉಗುರು ಕಚ್ಚಿಕೊಂಡು ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ