ನಟ ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಭಿನೇಷನ್ ನ ಕೆಜಿಎಫ್ 2 (c) ಚಿತ್ರ ಈಗಾಗಲೇ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಆದರೂ ಅದರ ಅಬ್ಬರ ಇನ್ನೂ ತಗ್ಗಿಲ್ಲ ಎಂದೆನ್ನಬಹುದು. ಇದೀಗ ಚಿತ್ರದ ‘ತೂಫಾನ್’ ಎಂಬ ವಿಡಿಯೋ ಸಾಂಗ್ (Toofan) ಇಂದು ಬಿಡುಗಡೆ ಆಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಯೂಟ್ಯೂಬ್ (YouTube) ಸೇರಿದಂತೆ ಇತರೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಂಗ್ ಧೂಳೆಬ್ಬಿಸುತ್ತಿದ್ದು, ಸಖತ್ ವೈರಲ್ (Viral) ಆಗಿದೆ. ಅದಲ್ಲದೇ ಮತ್ತೊಮ್ಮೆ ಕೆಜಿಎಫ್ 2ನ ತುಫಾನ್ ಅಬ್ಬರ ಆರಂಭವಾಗಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಬಿಡುಗಡೆಯಾದ ಕ್ಷಣದಿಂದಲೇ ತೂಫಾನ್ ಅಬ್ಬರ:
ಇನ್ನು, ಈಗಾಗಳೇ ಚಿತ್ರದಲ್ಲಿ ಮತ್ತು ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದರೂ, ಇದೀಗ ರಿಲೀಸ್ ಆಗಿರುವ ತೂಫಾನ್ ವಿಡಿಯೋ ಸಾಂಗ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ. ಬಿಡುಗಡೆ ಆಗಿ ಕೆಲವೇ ನಿಮಿಷಗಳಲ್ಲಿ ವಿಡಿಯೋ ಸಾಂಗ್ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತಿದೆ. ಹಿಂದಿ ಭಾಷೆಯಲ್ಲಂತೂ ತೂಫಾನ್ ಅಬ್ಬರ ಜೋರಾಗಿದ್ದು, ಕನ್ನಡ ಅವತರಣಿಕೆಗಿಂತ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ರವಿ ಬಸ್ರೂರ್ ಸಂಗೀತದಲ್ಲಿ ಬಂದ ಸಾಂಗ್:
ಈ ಹಾಡಿನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ಬರೆದು, ಸಂಗೀತ ನೀಡಿದ್ದಾರೆ. ಇನ್ನು ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ಪುನೀತ್ ರುದ್ರರಂಗ, ವರ್ಷಾ ಆಚಾರ್ಯ ಸೇರಿದಂತೆ ಅನೇಕ ಗಾಯಕರು ದನಿ ನೀಡಿದ್ದಾರೆ. ಜೊತೆಗೆ ಜ್ಯೂನಿಯರ್ ಸಿಂಗರ್ ಸಹ ಹಾಡಿದ್ದಾರೆ.
ಇದನ್ನೂ ಓದಿ: KGF 2 ಚಿತ್ರದ ಯಶಸ್ಸಿನ ಹಿಂದಿನ ಕಾಣದ ಕೈಗಳ ಕಥೆ ಹೇಳ್ತಿದೆ Route To EL Dorado
ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ ಕೆಜಿಎಫ್ 2:
ಕೆಜಿಎಫ್ ಚಾಪ್ಟರ್ 2 ದಿನೇ ದಿನೇ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಇದೀಗ ಚಿತ್ರವು ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದ್ದು, ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್ 2 ಅಲಂಕರಿಸಿದೆ.
ಏನಿದು ರೂಟ್ ಟು ಎಲ್ ಡೊರಾಡೋ?:
ಕೆಜಿಎಫ್ 2 ಚಿತ್ರದ ಯಶಸ್ಸಿನ ಹಿಂದೆ ಅನೇಕ ಕಾಣದ ಕೈಗಳಿವೆ. ಅವುಗಳ ಪರಿಚಯ ಮಾಡಲು ರೂಟ್ ಟು ಎಲ್ ಡೊರಾಡೋ ಎಂಬುದರ ಮೂಲಕ ವೀಕ್ಷಕರಿಗೆ ಕೆಆರ್ಜಿ ಸ್ಟುಡಿಯೋಸ್ ತಿಳಿಸುತ್ತಿದೆ. ಈಗಾಗಲೇ ರೂಟ್ ಟು ಎಲ್ ಡೊರಾಡೋ ಸೀಸರಿಸ್ ನಲ್ಲಿ, ಕಾಸ್ಟಿಂಗ್, ಡೈರೆಕ್ಷನ್, ಆರ್ಟ್ ಎಂಡ್ ಪ್ರೊಡೆಕ್ಷನ್, ವಸ್ತ್ರಾಲಂಕಾರ ಮತ್ತು ಡಿಓಪಿ ಡಿಪಾರ್ಟ್ಮೆಂಟ್ ಗಳ ಕುರಿತಾದ ವಿಡಿಯೋ ಬಿಡುಗಡೆಯಾಗಿದೆ. ಇವುಗಳ ಮೂಲಕ ಕೆಜಿಎಫ್ ಹಿಂದಿನ ಕಾಣದ ಕೈಗಳ ಪರಿಚಯವನ್ನು ಮಾಡಿದ್ದಾರೆ.
ಇದನ್ನೂ ಓದಿ: Karan Johar: ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ಯಶ್ಗೆ ಆಹ್ವಾನ, ಬಾಲಿವುಡ್ನಲ್ಲಿ ಹೆಚ್ಚುತ್ತಿದೆ ರಾಕಿ ಭಾಯ್ ಹವಾ
ಕರಣ್ ಜೋಹಾರ್ ಹುಟ್ಟುಹಬ್ಬ್ಕಕೆ ಯಶ್ಗೆ ಆಹ್ವಾನ:
ಇನ್ನು, ಬಾಲಿವುಡ್ ನಲ್ಲಿ ಕರಣ್ ಜೋಹಾರ್ ಹುಟ್ಟುಹಬ್ಬದ ಪಾರ್ಟಿ ಎಂದರೆ ಅದೆನೋ ವಿಶೇಷ ಎಂಬಂತಾಗಿದೆ. ಅದಕ್ಕಾಗಿ ಯಾರೊಬ್ಬರೂ ಸಹ ಮಿಸ್ ಮಾಡದೆಯೇ ಅವರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈ ಬಾರಿ ಕರಣ್ ಬರ್ತಡೇ ಪಾರ್ಟಿ ಮತ್ತಷ್ಟು ವಿಶೇಷವಾಗಿರಲಿದೆ. ಏಕೆಂದರೆ, ಈ ಬಾರಿ ಅವರ ಹುಟ್ಟುಹಬ್ಬದಂದು ನಮ್ಮ ರಾಕಿ ಭಾಯ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅವರಿಗೂ ಸಹ ಪಾರ್ಟಿಗೆ ಆಹ್ವಾನವಿದೆ. ಯಶ್ ಮಾತ್ರವಲ್ಲದೇ ಸೌತ್ ಇಂಡಸ್ಟ್ರಿಯಿಂದ ನಿರ್ದೇಶಕ ಪ್ರಶಾಮತ್ ನೀಲ್, ತೆಲುಗು ನಿರ್ದೇಶಕ ರಾಜಮೌಳಿ, ನಟ ಜೂನಿಯರ್ ಎನ್ಟಿಆರ್ ಸೇರಿದಂತೆ ದೊಡ್ಡ ಬಳಗವನ್ನೇ ಆಹ್ವಾನಿಸಿರುವುದಾಗಿ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ