KGF 2 ಅಬ್ಬರದ ನಡುವೆ ಹೊಸ ಹಾಡು ರಿಲೀಸ್, ಮೆಹಬೂಬಾ ಆಡಿಯೋ ಸಾಂಗ್ ಬಿಡುಗಡೆ

ಕೆಜಿಎಫ್ 2 ಚಿತ್ರತಂಡ ಇಂದು ಸಂಜೆ ಚಿತ್ರದ ಮತ್ತೊಂದು ಆಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಹೌದು, ಮೆಹಬೂಬಾ (Mehabooba Song) ಹಾಡಿನ ಆಡಿಯೋ ರಿಲೀಸ್ ಆಗಿದೆ.

ಮೆಹಬೂಬಾ ಆಡಿಯೋ ಸಾಂಗ್

ಮೆಹಬೂಬಾ ಆಡಿಯೋ ಸಾಂಗ್

  • Share this:
ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಕೆಜಿಎಫ್ ಚಾಫ್ಟರ್ 2 (KGF 2) ಚಿತ್ರ ಇಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ದಿನವೇ ನಿರೀಕ್ಷೆಯಂತೇ ಕೆಜಿಎಫ್ 2 ಉತ್ತಮ ಪ್ರದರ್ಶನ ಕಾಣುತ್ತಿದೆ. ಸರಿ ಸುಮಾರು 10 ಸಾವಿರಕ್ಕಿಂತಲೂ ಹೆಚ್ಚಿನ ಸ್ಕ್ರೀನ್​ ಗಳ ಮೇಲೆ ತೆರೆಕಂಡಿರುವ ಚಿತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ಚಿತ್ರತಂಡ ಇಂದು ಸಂಜೆ ಚಿತ್ರದ ಮತ್ತೊಂದು ಆಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಹೌದು, ಮೆಹಬೂಬಾ (Mehabooba Song) ಹಾಡಿನ ಆಡಿಯೋ ರಿಲೀಸ್ ಆಗಿದೆ.

ಮೆಹಬೂಬಾ ಆಡಿಯೋ ಸಾಂಗ್ ಬಿಡುಗಡೆ:

ಕೆಜಿಎಫ್ 2 ಚಿತ್ರದ ಮೆಹಬೂಬಾ ಆಡಿಯೊ ಸಾಂಗ್ ಹೊಂಬಾಳೆ ಯೂಟ್ಯೂಬ್ ಚಾನಲ್​ ನಲ್ಲಿ ಬಿಡುಗಡೆಯಾಗಿದೆ. ಇನ್ನು, ಈ ಹಾಡಿಗೆ ಕಿನ್ನಾಲ್ ರಾಜ್ ಸಾಹಿತ್ಯ ಬರೆದಿದ್ದು, ಅನನ್ಯಾ ಭಟ್ ಕಂಠದಾನ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕ ಮತ್ತು ನಾಯಕಿಯ ನಡುವಿನ ಈ ಹಾಡು ಸದ್ಯ ಬಿಡುಗಡೆಯಾಗಿದ್ದು, ಸಖತ್ ವೀವ್ಸ್ ಪಡೆದುಕೊಳ್ಳುತ್ತಿದೆ.ಚಿತ್ರದ 3 ಹಾಡುಗಳು ಬಿಡುಗಡೆ:

ಈಗಾಗಲೇ ಕೆಜಿಎಫ್ 2 ಚಿತ್ರದ 3 ಹಾಡುಗಳು ಬಿಡುಗಡೆಯಾದಂತಾಗಿದೆ. ಇಂದು ಬಿಡುಗಡೆಯಾದ ಮೆಹಬೂಬಾ, ಸುಲ್ತಾನ್ ಮತ್ತು ತೂಫಾನ್ ಹಾಡುಗಳು ಬಿಡುಗಡೆಯಾಗಿದೆ. ಆದರೆ ಮೆಹಬೂಬಾ ಕೇವಲ ಆಡಿಯೋ ಸಾಂಗ್ ಬಡಿಗಡೆ ಮಾಡಲಾಗಿದೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ KGF 2 ಅಬ್ಬರ ಶುರು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ರಾಕಿ ಬಾಯ್ ಆರ್ಭಟ

10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಕೆಜಿಎಫ್ 2 ರಿಲೀಸ್:

ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ಕೆಜಿಎಫ್ 2 ಚಿತ್ರವು 10 ಸಾವಿರಕ್ಕೂ ಹೆಚ್ಚಿನ ಬೆಳ್ಳಿತೆರೆಯ ಮೇಲೆ ತೆರೆಕಂಡಿದೆ. ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ತೆರೆ ಕಂಡಿದ್ದು, ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಉಳಿದಂತೆ ಉತ್ತರ ಭಾರತದಲ್ಲಿ 4000 ಸ್ಕ್ರೀನ್ಗಳಲ್ಲಿ, ಕರ್ನಾಟಕದಲ್ಲಿ 550 ಥಿಯೇಟರ್ಗಳಲ್ಲಿ, ತಮಿಳುನಾಡಿನಲ್ಲಿ 350 ಅಧಿಕ ಸ್ಕ್ರೀನ್, ಕೇರಳ 400 ಚಿತ್ರಮಂದಿರದಲ್ಲಿ , ಆಂದ್ರ ಮತ್ತು ತೆಲಂಗಾಣದಿಂದ 1 ಸಾವಿರ ಸ್ಕ್ರೀನ್ ಮತ್ತು ಹೊರ ದೇಶಗಳಲ್ಲಿ 4000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿದೆ. ಈ ಮೂಲಕ ಕೆಜಿಎಫ್-2 ಬಿಡುಗಡೆಯಲ್ಲಿ ರಾಕಿ ಬಾಯ್ ಮತ್ತೊಂದು ದಾಖಲೆ ಬರೆದಿದ್ದಾರೆ.

ಕೆಜಿಎಫ್ 2ಗೆ ಪೈರಸಿ ಶಾಕ್:

ಕೆಜಿಎಫ್ ಚಾಪ್ಟರ್ 2 ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೆಜಿಎಫ್ ಚಾಪ್ಟರ್ 2ವನ್ನು ಪೈರಸಿ ಮಾಡಲಾಗಿದೆ. ಕೆಜಿಎಫ್ ಚಾಪ್ಟರ್ 2 ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಜಿಎಫ್ ಚಾಪ್ಟರ್ 2 ಚಲನಚಿತ್ರವನ್ನು ಈಗ ಟೊರೆಂಟ್ ಸೈಟ್‌ಗಳಲ್ಲಿ ಸ್ಟ್ರೀಮಿಂಗ್‌ ಮಾಡಲಾಗಿದೆ.

ಇದನ್ನೂ ಓದಿ: ಬುಕ್ ಮೈ ಶೋ -IMDB ಗಳಲ್ಲಿಯೂ KGF 2 ಹವಾ, ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಲಿದ್ದಾನಾ ರಾಕಿಬಾಯ್?

75 ದೇಶಗಳಲ್ಲಿ ಬಿಡುಗಡೆ:

ಅಲ್ಲದೇ 75 ದೇಶಗಳಲ್ಲಿ ಕೆಜಿಎಫ್ ಚಾಪ್ಟರ್- 3 ರಿಲೀಸ್ ಆಗಿದೆ. ಯೂರೋಪ್ ರಾಷ್ಟ್ರಗಳು, ಅಮೆರಿಕಾ, ಯುಎಇ, ಗ್ರೀಸ್, ಸ್ವಿಟ್ಜರ್ಲ್ಯಾಂಡ್, ದುಬೈ, ಕುವೈತ್, ರಷ್ಯಾ ಸೇರಿದಂತೆ 75ಕ್ಕೂ ಅಧಿಕ ದೇಶಗಳಲ್ಲಿ ಯಶ್ ಹವಾ ಕಾಣಿಸುತ್ತಿದೆ. ಭಾರತದಲ್ಲೇ ಮೊದಲ ಬಾರಿಗೆ 75 ದೇಶಗಳಲ್ಲಿ ಒಂದು ಸಿನಿಮಾ ತೆರೆಕಂಡಿದೆ. ಬೇರೆ ದೇಶಗಳಲ್ಲಿ 5 ಭಾಷೆಗಳಲ್ಲೂ ಕೆಜಿಎಫ್-2 ರಿಲೀಸ್ ಆಗಿದೆ.

ಟ್ವಿಟರ್​ನಲ್ಲಿ ಕೆಜಿಎಫ್ 3 ಹ್ಯಾಷ್ ಟ್ಯಾಗ್ ಟ್ರೇಂಡ್:

ಇನ್ನು, ಕೆಜಿಎಫ್ 2 ಚಿತ್ರದ ನಂತರ ಕೆಜಿಎಫ್ 3 ಚಿತ್ರ ಬರಲಿದೆ ಎಂಬ ಮುನ್ಸೂಚನೆ ದೊಕ್ಕಿದ್ದೆ ತಡೆ ಅಭಿಮಾನಿಗಳು ಟ್ವಿಟರ್​ನಲ್ಲಿ ಕೆಜಿಎಫ್ 3 ಹ್ಯಾಷ್​ಟ್ಯಾಗ್​ ನ್ನು ಟ್ರೇಂಡ್ ಮಾಡಿದ್ದಾರೆ.
Published by:shrikrishna bhat
First published: