• Home
 • »
 • News
 • »
 • entertainment
 • »
 • KGF Chapter 2: ರಾಕಿ ಭಾಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಡಿ. 21 ರಂದು ಚಾಪ್ಟರ್-2 ಫಸ್ಟ್​​​ ಲುಕ್

KGF Chapter 2: ರಾಕಿ ಭಾಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಡಿ. 21 ರಂದು ಚಾಪ್ಟರ್-2 ಫಸ್ಟ್​​​ ಲುಕ್

ಕೆಜಿಎಫ್​ ಚಾಪ್ಟರ್​ 1ರಲ್ಲಿ ಆ್ಯಂಡ್ರೂನ ಸಹಾಯಕ ದಯಾ ಎಂಬ ಪಾತ್ರದಲ್ಲಿ ತಾರಕ್ ನಟಿಸಿದ್ದರು.

ಕೆಜಿಎಫ್​ ಚಾಪ್ಟರ್​ 1ರಲ್ಲಿ ಆ್ಯಂಡ್ರೂನ ಸಹಾಯಕ ದಯಾ ಎಂಬ ಪಾತ್ರದಲ್ಲಿ ತಾರಕ್ ನಟಿಸಿದ್ದರು.

KGF Chapter 2: ಕೆ.ಜಿ.ಎಫ್​ ಚಾಪ್ಟರ್​-2 ಸಿನಿಮಾದ ಫಸ್ಟ್​​ ಲುಕ್​ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರ ಬಿದ್ದಿದ್ದೇ ತಡ, ಸಾಮಾಜಿಕ ತಾಣದಲ್ಲಿ #KGFChapter2 ಟ್ರೆಂಡಿಂಗ್​ ಕೀ ವರ್ಡ್ಸ್​​​​ ಸೃಷ್ಠಿಯಾಗಿದೆ.

 • Share this:

  ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಗಿ ದೇಶದಾದ್ಯಂತ ಹೊಸ ಅಲೆ ಎಬ್ಬಿಸಿತ್ತು. ಇದೀಗ ಕೆ.ಜಿ.ಎಫ್-2​​ ಸಿನಿಮಾವನ್ನು ಪ್ರೇಕ್ಷಕರೆದುರು ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಅಭಿಮಾನಿಗಳಂತೂ ಈ ಸಿನಿಮಾಗೆ ತುದಿಗಾಲಿನಲ್ಲಿ ಕಾಯುತ್ತಿದ್ದು, ಇದೀಗ ಚಿತ್ರತಂಡ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

  ಹೊಸ ವರ್ಷದ ಹೊಸ್ತಿಲಿಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಮುಂದಿನ ವರ್ಷ ಜನವರಿ 8ರಂದು ಕೆ.ಜಿ.ಎಫ್​ ಚಾಪ್ಟರ್​ 2 ಚಿತ್ರದ ಟ್ರೇಲರ್​​​​ ಅನ್ನು ಬಿಡುಗಡೆ  ಮಾಡುವುದಾಗಿ ಚಿತ್ರತಂಡ ನಿರ್ಧರಿಸಿದೆ. ಆದರೀಗ ಅದಕ್ಕಿಂತ ಮೊದಲೇ ಚಿತ್ರದ ಫಸ್ಟ್​​​ ಲುಕ್​​​  ಬಿಡುಗಡೆಯಾಗಲಿದೆ. ಡಿಸೆಂಬರ್​ 21 ರಂದು ಸಂಜೆ 5.45ಕ್ಕೆ ಚಿತ್ರದ ಫಸ್ಟ್​ ಲುಕ್​​ ಬಿಡುಗಡೆಯಾಗಲಿದೆ. ಅಭಿಮಾನಿಗಳಿಗಂತೂ ಈ ಸಿಹಿ ಸುದ್ದಿಯಿಂದ ಹೊಟ್ಟೆ ತುಂಬಿದಂತಾಗಿದೆ.

  ಇನ್ನು ಈ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​​ ಟ್ವೀಟ್​ ಮಾಡಿದ್ದು, ‘ಡಿಸೆಂಬರ್​​ 21ರಂದು ಸಂಜೆ 5.45ಕ್ಕೆ ಚಿತ್ರದ ಫಸ್ಟ್​ ಲುಕ್​ ಅನಾವರಣಗೊಳಿಸಲು ನಾವು ಸಂಪೂರ್ಣ ಉತ್ಸುಕರಾಗಿದ್ದೇವೆ. ಸಂಭ್ರಮಕ್ಕೆ ಇದೇ ಸೂಕ್ತ ಸಮಯ‘ ಎಂದು ಬರೆದುಕೊಂಡಿದ್ದಾರೆ.

   
  ಕೆ.ಜಿ.ಎಫ್​ ಚಾಪ್ಟರ್​-2 ಸಿನಿಮಾದ ಫಸ್ಟ್​​ ಲುಕ್​ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರ ಬಿದ್ದಿದ್ದೇ ತಡ, ಸಾಮಾಜಿಕ ತಾಣದಲ್ಲಿ #KGFChapter2 ಟ್ರೆಂಡಿಂಗ್​ ಕೀ ವರ್ಡ್ಸ್​ ಸೃಷ್ಠಿಯಾಗಿದೆ.

  ಇನ್ನು ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ​​ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಬಾಲಿವುಡ್​ ನಟ ಸಂಜಯ್​ ದತ್​ ಕಾಣಿಸಿಕೊಂಡಿದ್ದಾರೆ. ಸೂರ್ಯವರ್ಧನನ ಸಹೋದರ ಅಧೀರನ ಪಾತ್ರದಲ್ಲಿ ಸಂಜತ್​ ದತ್​ ನಟಿಸುತ್ತಿದ್ದಾರೆ.

  ಕೆ.ಜಿ.ಎಫ್​ ಚಾಪ್ಟರ್​-1 ಚಿತ್ರದಲ್ಲಿ ರಾಕಿಬಾಯ್​ಗೆ ನಾಯಕಿಯಾಗಿ ಕಾಣಿಸಿಕೊಂಡ ಶ್ರೀನಿಧಿ ಶೆಟ್ಟಿ, ಚಾಪ್ಟರ್​-2ನಲ್ಲಿ ಮುಂದುವರೆದಿದ್ದಾರೆ. ಇನ್ನು ಈ ಸಿನಿಮಾ ಹೊಂಬಾಲೆ ಫಿಲ್ಮ್ಸ್​​​ ಬ್ಯಾನರ್​ನಡಿ ಬರುತ್ತಿದ್ದು, ವಿಜಯ್​ ಕಿರಗಂದೂರು ಬಂಡವಾಳ ಹೂಡಿದ್ದಾರೆ.

  ಇದನ್ನೂ ಓದಿ: ‘ಚಪಾಕ್‘ ಸಿನಿಮಾದ ಹಿಂದಿದೆ ನೊಂದ ಯುವತಿಯ ಅಸಲಿ ಕಥೆ: ಆಕೆ ಯಾರು ಗೊತ್ತಾ?

  ಇದನ್ನೂ ಓದಿ: BSNL 4G Data Pack: 96 ರೂ. ರಿಚಾರ್ಜ್​ ಮಾಡಿದರೆ ದೈನಂದಿನ ಬಳಕೆಗೆ 10ಜಿಬಿ ಡೇಟಾ ಉಚಿತ!

  ಇದನ್ನೂ ಓದಿ:  ವರ್ಷಾಂತ್ಯದಲ್ಲಿ ಕಾರು ಪ್ರಿಯರಿಗೆ ಸಿಹಿ ಸುದ್ದಿ; ಈ ಕಾರಿನ ಮೇಲೆ 2.5 ಲಕ್ಷ ರೂ. ಡಿಸ್ಕೌಂಟ್?   

  Published by:Harshith AS
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು