KGF 2 ಅಬ್ಬರಕ್ಕೆ ಬಾಲಿವುಡ್ ಶೇಕ್, ಬಾಕ್ಸ್ ಆಫೀಸ್ ಸುಲ್ತಾನನಾದ ರಾಕಿ ಬಾಯ್!​

ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ.

KGF 2

KGF 2

  • Share this:
ರಾಕಿಂಗ್ ಸ್ಟಾರ್ ಯಶ್ (Rcoking Star Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ 'ಕೆಜಿಎಫ್ - 2‘ (KGF 2) ಚಿತ್ರವು ದಿನೇ ದಿನೇ ಒಂದಿಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಅದರೊಂದಿಗೆ ಬಾಕ್ಸ್ ಆಫೀಸ್​ ನಲ್ಲಿ ಭರ್ಜರಿ ಕಲೇಕ್ಷನ್ ಮಾಡುತ್ತಿದ್ದು, ರಾಕಿ ಬಾಯ್ ಅಬ್ಬರವನ್ನು ತಡಯಲು ಯಾರಿಂದಲೂ ಆಗುತ್ತಿಲ್ಲ. ಚಿತ್ರ ಬಿಡುಗಡೆಯಾಗಿ 3 ವಾರ ಕಳೆದರೂ ಕ್ರೇಜ್ ಮಾತ್ರ ಇನ್ನೂ ಹಾಗೆಯೇ ಇದೆ ಎಂದರೂ ತಪ್ಪಾಗಲಾರದು. ಹೌದು ಇದೀಗ ಕೆಜಿಎಫ್ 2 ಚಿತ್ರ ಮತ್ತೊಂದು ಹೊಸ ದಾಖಲೆಯನ್ನು ಮಾಡಿದೆ. ಈ ಮೂಲಕ ರಾಕಿಬಾಯ್ ಹಿಂದಿ ಚಿತ್ರರಂಗದ ಸುಲ್ತಾನನಾಗಿ ಮೆರೆಯುವಂತೆ ಮಾಡಿದೆ. ಹೌದು, ಚಿತ್ರವು (Movie) ₹ 343 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.

ಬಾಲಿವುಡ್ ನಲ್ಲಿ ತಗ್ಗದ ರಾಕಿ ಬಾಯ್ ಹವಾ:

ಚಿತ್ರ ಬಿಡುಗಡೆಯಾಗಿ 14ನೇ ದಿನವಾಗಿದೆ. ಈಗಾಗಲೇ 900 ಕೋಟಿ ಕಲೇಕ್ಷನ್ ಮಾಡಿದ್ದು, 1000 ಕೋಟಿಯತ್ತ ದಾಪುಗಾಲಿಡುತ್ತಿದೆ ಕೆಜಿಎಫ್ 2 ಚಿತ್ರ. ಇದರ ನಡುವೆ ಚಿತ್ರದ ಹಿಂದಿ ಅವತರಣಿಕೆಯು ₹ 343 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ.

ಸಲ್ಲು, ಅಮೀರ್ ಹಿಂದಿಕ್ಕಿದ ಯಶ್:

ಕೆಜಿಎಫ್ ಚಾಪ್ಟರ್ 2 ಚಿತ್ರವು ಹಿಂದಿಯ ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ( ₹ 339.16 ಕೋಟಿ), ಅಮೀರ್ ಖಾನ್ ಅವರ ಪಿಕೆ ( ₹ 340.8 ಕೋಟಿ) ಮತ್ತು ರಣಬೀರ್ ಕಪೂರ್ ಅವರ ಸಂಜು ( ₹ 342.53 ಕೋಟಿ) ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದ್ದು, ಹಿಂದಿಯ 3ನೇ ಅತಿ ಹೆಚ್ಚು ಗಳಿಕೆ ಮಾಡಿರುವ ಚಿತ್ರಗಳ ಪಟ್ಟಿಗೆ ಸೇರಿದೆ. ಇನ್ನು, ಅಮೀರ್‌ನ ದಂಗಲ್‌ ಚಿತ್ರವು 387.38 ಕೋಟಿ ದಾಖಲೆಯನ್ನೂ ಮುರಿಯಬಹುದು ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: KGF 2: ರಾಕಿಂಗ್​ ಸ್ಟಾರ್​ ಯಶ್​ - ಸಿಇಓ, ಇಂಡಿಯಾ! ರೆಕಾರ್ಡ್​ ಮೇಲೆ ರೆಕಾರ್ಡ್ ಯಾರೂ ತಡೆಯೋಕ್ಕಾಗಲ್ಲ

ತರಣ್ ಆದರ್ಶ್ ಟ್ವೀಟ್:

ಟ್ವಿಟ್ಟರ್‌ನಲ್ಲಿ ಕೆಜಿಎಫ್ 2 ಸಂಗ್ರಹವನ್ನು ಹಂಚಿಕೊಂಡ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ , ಹಿಂದಿಯಲ್ಲಿ ಕೆಜಿಎಫ್ 2 3ನೇ ಅತಿ ಹೆಚ್ಚು ಕಲೇಕ್ಷನ್ ಮಾಡಿದ ಚಿತ್ರವಾಗಿದೆ. ಇದು ಶುಕ್ರವಾರ 11.56 ಕೋಟಿ, ಶನಿವಾರ 18.25 ಕೋಟಿ, ಭಾನುವಾರ 22.68 ಕೋಟಿ, ಸೋಮವಾರ 8.28 ಕೋಟಿ, ಮಂಗಳವಾರ 7.48 ಕೋಟಿ ಮತ್ತು ಬುಧವಾರ 6.25 ಕೋಟಿ ಕಲ್ಏಕ್ಷನ್ ಮಾಡುವ ಮೂಲಕ ಒಟ್ಟು ₹ 343.13 ಕೋಟಿ ಬಾಕ್ಸ್ ಆಫಿಸ್ ಕಲೇಕ್ಷನ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: KGF 2: ವ್ಹಾ, ಕೊನೆಗೂ ಕೆಜಿಎಫ್​ 3 ಸುಳಿವು ಕೊಟ್ಟ ಯಶ್​​! ಅದ್ರಲ್ಲಿ ಮತ್ಯಾವ ಸಾಮ್ರಜ್ಯ ಆಳ್ತಾರೋ ರಾಕಿ ಭಾಯ್​​?

1000 ಕೋಟಿ ಕ್ಲಬ್ ಸನಿಹ:

ಕೆಜಿಎಫ್ 2 ಹವಾ ಎಷ್ಟಿದೆ ಎಂದರೆ ಬಿಡುಗಡೆಯಾಗಿ ಕೇವಲ 2 ವಾರಗಳಲ್ಲಿಯೇ 1000 ಕೋಟಿ ಸನಿಹ ಬಂದು ನಿಂತಿದೆ. ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಈ ಚಿತ್ರವು ಬುಧವಾರದಂದು 19.37 ಕೋಟಿ ಗಳಿಸುವ ಮೂಲಕ ವಿಶ್ವಾದ್ಯಂತ ಒಟ್ಟು 926.67 ಕೋಟಿ.ಯನ್ನು ಗಳಿಸಿದೆ ಎಂದು ತಿಳಿಸಿದ್ದಾರೆ. ಇನ್ನು, ಕೆಜಿಎಫ್ 2 ಚಿತ್ರವು ಬಾಹುಬಲಿ 2 ನಂತರ ಹಿಂದಿ ಅವತರಣಿಕೆಯಲ್ಲಿ 300 ಕ್ಲಬ್ ಸೇರಿದ 2ನೇ ಚಿತ್ರವಾಗಿದೆ.
Published by:shrikrishna bhat
First published: