• Home
  • »
  • News
  • »
  • entertainment
  • »
  • Rocking Star Yash: ರಾಕಿಂಗ್ ಸ್ಟಾರ್ ಸಿನಿಮಾ ರೀ-ರಿಲೀಸ್ ಆಗ್ತಿರೋದೇಕೆ? 'ಕೆಜಿಎಫ್‌'ನಲ್ಲಿ ಮತ್ತೆ ಗೆಲ್ತಾನಾ 'ರಾಮಾಚಾರಿ?

Rocking Star Yash: ರಾಕಿಂಗ್ ಸ್ಟಾರ್ ಸಿನಿಮಾ ರೀ-ರಿಲೀಸ್ ಆಗ್ತಿರೋದೇಕೆ? 'ಕೆಜಿಎಫ್‌'ನಲ್ಲಿ ಮತ್ತೆ ಗೆಲ್ತಾನಾ 'ರಾಮಾಚಾರಿ?

ಯಶ್ ಸಿನಿಮಾ ರೀ-ರಿಲೀಸ್ ಆಗ್ತಿರೋದೇಕೆ?

ಯಶ್ ಸಿನಿಮಾ ರೀ-ರಿಲೀಸ್ ಆಗ್ತಿರೋದೇಕೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಗಳು ಹೊಸ ವರ್ಷಕ್ಕೆ ಇಲ್ವೇ ಇಲ್ಲ. ಅದಕ್ಕೆ ಸಂಬಂಧಿಸಿದಂತೆ ಹೊಸ ಚಿತ್ರಗಳ ಅನೌನ್ಸ್​ಮೆಂಟ್​ ಕೂಡ ಇನ್ನೂ ಆಗಿಲ್ಲ. ಅದಕ್ಕೋ ಏನೋ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್-2' ಸಿನಿಮಾ ರೀ ರಿಲೀಸ್ ಆಗಿದೆ. 'ರಾಮಾಚಾರಿ' ಕೂಡ ಮತ್ತೆ ಬರುತ್ತಿದ್ದಾನೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash Movies) ಅಭಿನಯದ ಹಾಗೂ ಇಡೀ ಕನ್ನಡ ನಾಡಿನ ಹೆಸರನ್ನ ಎಲ್ಲೆಡೆ ಪಸರಿಸಿದ ಕನ್ನಡದ (KGF-2 Re-Released) ಕೆಜಿಎಫ್-2 ಸಿನಿಮಾ ರೀ ರಿಲೀಸ್ ಆಗಿದೆ. ಇದಕ್ಕೆ ಕಾರಣವೂ ಇದೆ. ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನದ ಪ್ರಯುಕ್ತ ಈ ಚಿತ್ರವನ್ನ ಬೆಂಗಳೂರಿನ ಒಂದೇ ಒಂದು (D J Halli Vinayaka Theater) ಥಿಯೇಟರ್​ನಲ್ಲಿ ರೀ ರಿಲೀಸ್ ಮಾಡಲಾಗಿದೆ. ಹೆಚ್ಚು ಕಡಿಮೆ ಜನವರಿ 6 ರಂದು ಇಂದಿನಿಂದ ಮುಂದಿನ 12 ವರೆಗೂ ಇಲ್ಲಿ ಕೆಜಿಎಫ್-2 (KGF-2 Cinema) ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಈ ಒಂದು ಚಿತ್ರದ ವಿಚಾರದಲ್ಲಿ ಒಂದ ಬೇಸರ ಕೂಡ ಇದೆ. ಅದೇನೂ ಅನ್ನೋದನ್ನ ಈ ಸ್ಟೋರಿಯಲ್ಲಿ ಹೇಳಿದ್ದೇವೆ ನೋಡಿ.


ರಾಕಿಂಗ್ ಸ್ಟಾರ್ ಸಿನಿಮಾ ರೀ-ರಿಲೀಸ್ ಆಗ್ತಿರೋದು ಯಾಕೆ?
ರಾಕಿ ಭಾಯ್ ಯಶ್ ಅಭಿನಯದ ಹೊಸ ಸಿನಿಮಾಗಳು ವರ್ಷಕ್ಕೆ ಒಂದೇ ಅನ್ನೋ ಲೆಕ್ಕದಲ್ಲಿಯೇ ಬರ್ತಿವೆ. ಕೆಜಿಫ್​-1 ಆದ್ಮೇಲೆ ಯಶ್ ಮತ್ಯಾವ ಚಿತ್ರವನ್ನೂ ಒಪ್ಪಿಕೊಳ್ಳಲಿಲ್ಲ. ಅದ್ಯಾಕೆ ಅಂತ ನೋಡಿದ್ರೆ ಅಲ್ಲೂ ಒಂದು ಸಿನಿಮಾದ ಕಮಿಟ್​​ಮೆಂಟ್ ಇತ್ತು. ಅದುವೇ ಕೆಜಿಎಫ್-2 ಸಿನಿಮಾನೇ ಆಗಿದೆ.


Rocking Star Yash Hit Movies are getting Re-Release
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ರೀ-ರಿಲೀಸ್!


ಕೆಜಿಎಫ್ ಚಿತ್ರಕ್ಕಾಗಿಯೇ ಇಡೀ ವರ್ಷಗಳನ್ನ ರಾಕಿ ಭಾಯ್ ಯಶ್ ಮುಡುಪಾಗಿಟ್ಟಿದ್ದರು. ಅದಕ್ಕಾಗಿಯೇ ಲಾಂಗ್ ಬಿಯರ್ಡ್ ಮೆಂಟೇನ್​ಮಾಡಿದ್ದರು. ಹಾಗಾಗಿಯೇ ಬೇರೆ ಯಾವುದೇ ಸಿನಿಮಾಗಳನ್ನೂ ಒಪ್ಪಿರಲಿಲ್ಲ.
ರಾಕಿಂಗ್ ಸ್ಟಾರ್ ಯಶ್ ನಟನೆ ಕೆಜಿಎಫ್-2 ರೀ-ರಿಲೀಸ್!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್​-2 ಚಿತ್ರ ಮತ್ತೆ ರೀ-ರಿಲೀಸ್ ಆಗಿದೆ. ಇದಕ್ಕೆ ಕಾರಣ ಏನೂ ಅನ್ನೋದಕ್ಕೆ ಆ ಒಂದು ದಿನವೇ ಕಾರಣ ಆಗಿದೆ. ಏನ್ ಅದು ಅಂತಿರೋ ಇಲ್ಲಿದೆ ನೋಡಿ.


ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ ಸ್ಪೆಷಲ್ ಗಿಫ್ಟ್?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಗಳು ಹೊಸ ವರ್ಷಕ್ಕೆ ಇಲ್ವೇ ಇಲ್ಲ. ಅದಕ್ಕೆ ಸಂಬಂಧಿಸಿದಂತೆ ಹೊಸ ಚಿತ್ರಗಳ ಅನೌನ್ಸ್​ಮೆಂಟ್​ ಕೂಡ ಇನ್ನೂ ಆಗಿಲ್ಲ. ಅದಕ್ಕೋ ಏನೋ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ರೀ ರಿಲೀಸ್ ಆಗಿದೆ.


ಬೆಂಗಳೂರಿನ ಡಿ.ಜೆ.ಹಳ್ಳಿಯ ಥಿಯೇಟರ್​​ನಲ್ಲಿ ರಿಲೀಸ್
ಕೆಜಿಎಫ್-2 ಸಿನಿಮಾ ಈಗಾಗಲೇ ಡಿ.ಜೆ.ಹಳ್ಳಿಯ ವಿನಾಯಕ ಥಿಯೇಟರ್​ನಲ್ಲಿ ರೀ-ರಿಲೀಸ್ ಆಗಿದೆ. ಇದೇ ಶುಕ್ರವಾರ 6 ರಿಂದ ಮುಂದಿನ 12ರ ವರೆಗೂ ಈ ಒಂದು ಥಿಯೇಟರ್​ನಲ್ಲಿ ಕೆಜಿಎಫ್​-2 ಸಿನಿಮಾ ಪ್ರದರ್ಶನ ಆಗುತ್ತಿದೆ.


Rocking Star Yash Hit Movies are getting Re-Release
ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನಕ್ಕೆ ಸ್ಪೆಷಲ್ ಗಿಫ್ಟ್?


ಇಲ್ಲಿ ಹಿಂದಿ ಭಾಷೆಯ ಕೆಜಿಎಫ್-2 ಪ್ರದರ್ಶನ
ಹೌದು, ಡಿ.ಜೆ.ಹಳ್ಳಿಯ ವಿನಾಯಕ ಥಿಯೇಟರ್​ ನಲ್ಲಿ ಜನವರಿ-6 ರಿಂದ ಜನವರಿ-12 ವರೆಗೂ ಒಟ್ಟು ಇಲ್ಲಿ 28 ಶೋಗಳನ್ನ ಪ್ರದರ್ಶನ ಪ್ಲಾನ್ ಮಾಡಲಾಗಿದೆ. ಆದರೆ ಇದೇ ಥಿಯೇಟರ್​ನಲ್ಲಿ ಕನ್ನಡದ ಬದಲಾಗಿ ಇಲ್ಲಿ ಕೆಜಿಎಫ್-2 ಪ್ರದರ್ಶನ ಆಗುತ್ತಿದೆ.


ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ರೀ-ರಿಲೀಸ್!
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರ ಕೂಡ ರೀ-ರಿಲೀಸ್ ಆಗುತ್ತಿದೆ. ಜನವರಿ-8 ಯಶ್ ಬರ್ತ್​ ಡೇ ಹಿನ್ನೆಲೆಯಲ್ಲಿ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ. ಬೆಂಗಳೂರಿನ ಸಂತೋಷ್ ಥಿಯೇಟ್​​ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.


ಇದನ್ನೂ ಓದಿ: Yash: ಫ್ಯಾಮಿಲಿ ಜೊತೆ ದುಬೈಗೆ ಹಾರಿದ ರಾಕಿ ಭಾಯ್​! ಮನೆ ಬಳಿ ಬಂದ ಫ್ಯಾನ್ಸ್​ಗೆ ಭರ್ಜರಿ ಗಿಫ್ಟ್!


ರಾಜಾದ್ಯಂತ ಇದೇ ದಿನ ಎಲ್ಲೆಡೆ ಒಂದೊಂದು ಶೋ ಕೂಡ ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ-ವಿತರಕ ಜಯಣ್ಣ ನ್ಯೂಸ್-18 ಕನ್ನಡ ಡಿಜಿಟಲ್​ಗೆ ತಿಳಿಸಿದ್ದಾರೆ. ಉಳಿದಂತೆ ಕೆಜಿಎಫ್​-2 ಹಾಗೂ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಈಗ ಯಶ್​ ಫ್ಯಾನ್ಸ್​ ಎಂಟರಟೈನ್​ ಮಾಡಲು ಮತ್ತೆ ಪ್ರದರ್ಶನ ಆಗುತ್ತಿವೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು