• Home
  • »
  • News
  • »
  • entertainment
  • »
  • Rocking Star Yash: ಡಬ್ಬಿಂಗ್ ಸ್ಟುಡಿಯೋದಲ್ಲಿ ಯಶ್! ಕೆಜಿಎಫ್‌ 3 ಅಲ್ಲ, ಕೆಂಪೇಗೌಡರ ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ದನಿ!

Rocking Star Yash: ಡಬ್ಬಿಂಗ್ ಸ್ಟುಡಿಯೋದಲ್ಲಿ ಯಶ್! ಕೆಜಿಎಫ್‌ 3 ಅಲ್ಲ, ಕೆಂಪೇಗೌಡರ ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ದನಿ!

ಡಬ್ಬಿಂಗ್ ಸ್ಟುಡಿಯೋದಲ್ಲಿ ರಾಕಿಂಗ್ ಸ್ಚಾರ್ ಯಶ್

ಡಬ್ಬಿಂಗ್ ಸ್ಟುಡಿಯೋದಲ್ಲಿ ರಾಕಿಂಗ್ ಸ್ಚಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಗಂಧದಗುಡಿ ಖ್ಯಾತಿಯ ಅಮೋಘವರ್ಷ ಇಬ್ಬರೂ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ!

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking star Yash') ಅವರ ಹೊಸ ಹೇರ್ ಸ್ಟೈಲ್ (New Hair Style), ಕೆಜಿಎಫ್ ಚಾಪ್ಟರ್ 3 ಸಿನಿಮಾ (KGF Chapter 3 Cinema) ಇತ್ಯಾದಿಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ (Dubbing Studio) ಕಾಣಿಸಿಕೊಂಡು ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಹೌದು, ರಾಕಿಂಗ್ ಸ್ಟಾರ್ ಯಶ್ ಹಾಗೂ ‘ಗಂಧದಗುಡಿ’ (Gandhadagudi) ಖ್ಯಾತಿಯ ಅಮೋಘವರ್ಷ (Amoghavarsha) ಇಬ್ಬರೂ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ (Viral Photos) ಆಗಿದ್ದು, ಯಶ್ ಅಭಿಮಾನಿಗಳು, ಕನ್ನಡ ಚಿತ್ರ ಪ್ರೇಕ್ಷಕರು ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದರು. ಇದೀಗ ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದು ನಾಡಪ್ರಭು ಕೆಂಪೇಗೌಡರ (Nadaprabhu Kempegowda) ವಿಶೇಷ ವಿಡಿಯೋಗೆ ದನಿ ನೀಡೋದಕ್ಕೆ (Voice for special video) ಅಂತ ಗೊತ್ತಾಗಿದೆ.


ಕೆಂಪೇಗೌಡರ ವಿಶೇಷ ವಿಡಿಯೋಗೆ ಯಶ್ ದನಿ


ಇದೇ ನವೆಂಬರ್ 11ರಂದು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಕೆಂಪೇಗೌಡರ ಬದುಕು, ಸಾಧನೆ ಇತ್ಯಾದಿಗಳ ಬಗ್ಗೆ ವಿಶೇಷ ವಿಡಿಯೋ ಪ್ರಸಾರವಾಗಲಿದೆ. ಈ ವಿಡಿಯೋಗೆ ರಾಕಿಂಗ್ ಸ್ಟಾರ್ ಯಶ್ ದನಿ ನೀಡಿದ್ದಾರೆ ಎನ್ನಲಾಗಿದೆ.


ಅಮೋಘವರ್ಷಗೆ ವಿಶೇಷ ವಿಡಿಯೋ ಜವಾಬ್ದಾರಿ


ಕೆಂಪೇಗೌಡರ ಪ್ರತಿಮೆಯ ಅನಾವರಣದ ಉಸ್ತುವಾರಿಯನ್ನು ಸಚಿವ ಅಶ್ವತ್ಥ್ ನಾರಾಯಣ್ ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅಶ್ವತ್ಥ್ ನಾರಾಯಣ್ ಸ್ನೇಹಕ್ಕೆ ಕಟ್ಟುಬಿದ್ದು ಯಶ್ ಅವರು ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಂಪೇಗೌಡರ ಜೀವನಗಾಥೆಯ ಸ್ಪೆಷಲ್ ವಿಡಿಯೋವನ್ನು ಮಾಡಲು ಅಮೋಘವರ್ಷ ಅವರು ಜವಾಬ್ದಾರಿ ತಗೆದುಕೊಂಡಿದ್ದು, ಆ ಸಾಕ್ಷ್ಯ ಚಿತ್ರಕ್ಕೆ ಯಶ್ ಧ್ವನಿ ನೀಡಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: KGF 3 Update: ಕೆಜಿಎಫ್ 3 ಚಿತ್ರದ ಬಿಗ್ ನ್ಯೂಸ್! ಹೊಸ ಸುದ್ದಿ ರಿವೀಲ್ ಮಾಡಿದ ರಾಕಿ ಭಾಯ್!


ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ


ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮುಚ್ಚಯದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆರೆಗಳು ನಿರ್ಮಾಣ, ಪೇಟೆಗಳ ನಿರ್ಮಾಣ, ಮರ ನೆಟ್ಟಿರುವುದು ಹಾಗೂ ಅವರ ಕಾಲದಲ್ಲಿ ಮಾಡಿರುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಪ್ರತಿಮೆಯ ಕೆಳಭಾಗದಲ್ಲಿ ಕಂಚಿನಿಂದ ರಚಿಸಲಾಗಿರುವ ಚಿತ್ರದಲ್ಲಿ ತೋರಿಸಲಾಗಿದೆ.


ಹೊಸ ಸುದ್ದಿ ರಿವೀಲ್ ಮಾಡಿದ ರಾಕಿ ಭಾಯ್!


ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಎರಡು ಬ್ಯಾಕ್-ಟು-ಬ್ಯಾಕ್ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಇಡೀ ರಾಷ್ಟ್ರವೇ ತನ್ನ ಕಡೆಗೆ ಒಮ್ಮೆ ತಿರುಗಿ ನೋಡುವಂತೆ ಮಾಡಿಕೊಂಡರು. ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಹೆಸರು ಮತ್ತು ಸ್ಥಾನವನ್ನು ಭದ್ರಪಡಿಸಿಕೊಂಡರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟಕ್ಕೆ ಸುಮ್ಮನೆ ಇರುತ್ತಾರಾ ಈ ರಾಕಿ ಭಾಯ್ ಅಂತ ಅಂದುಕೊಂಡರೆ ಅದು ತಪ್ಪು. ಈಗ ನಟ ಕೆಜಿಎಫ್ ನ ಮುಂದುವರಿದ ಭಾಗದ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ್ದಾರೆ.


ಇದನ್ನೂ ಓದಿ: Kantara-Yash: ಕಾಂತಾರ ನನ್ನ ಸಿನಿಮಾ ಎಂದ ಯಶ್, ಹೀಗಂದಿದ್ದೇಕೆ ರಾಕಿಂಗ್ ಸ್ಟಾರ್?


ಕೆಜಿಎಫ್ 3 ಬಗ್ಗೆ ನಟ ಯಶ್ ನೀಡಿದ ಅಪ್ಡೇಟ್ ಏನು?
ಮುಂಬೈನಲ್ಲಿ ಸುದ್ದಿ ಪೋರ್ಟಲ್​ವೊಂದರ ಜೊತೆ ಮಾತನಾಡಿದ ನಟ ಯಶ್ “ನಾನು ಹೇಳಿದಾಗ ಮಾತ್ರ ಕೆಜಿಎಫ್ 3 ಚಿತ್ರ ತಯಾರಾಗುತ್ತದೆ” ಎಂದು ಹೇಳಿದರು. ಇದನ್ನು ಗಮನಿಸಿದರೆ, ಕೆಜಿಎಫ್ ಮತ್ತೊಂದು ಕಂತಿನೊಂದಿಗೆ ಬರುವ ಮೊದಲು ಯಶ್ ಇನ್ನೂ ಒಂದೆರಡು ಬೇರೆ ಚಲನಚಿತ್ರಗಳನ್ನು ಮಾಡಲು ಬಯಸುತ್ತಾರೆ ಎಂದು ತೋರುತ್ತದೆ. ಅಲ್ಲದೆ, ಕೆಜಿಎಫ್ ಮತ್ತು ಕೆಜಿಎಫ್ 2 ರ ಯಶಸ್ಸನ್ನು ಅವರು ಮುಂಚಿತವಾಗಿಯೇ ನಿರೀಕ್ಷಿಸಿದ್ದರಂತೆ, ಆದ್ದರಿಂದ ಎಲ್ಲಾ ಕಡೆಯಿಂದ ಬರುವ ಅನೇಕ ರೀತಿಯ ಪ್ರತಿಕ್ರಿಯೆಗಳು ಅವರನ್ನು ಉತ್ತೇಜಿಸುವುದಿಲ್ಲ ಎಂದು ಅವರು ಹೇಳಿದರು.

Published by:Annappa Achari
First published: