• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Yash: ಬಾಲಿವುಡ್‌ಗೆ ಹೋಗ್ತಾರಾ ರಾಕಿ ಭಾಯ್​? ಮುಂಬೈನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ ಯಶ್!

Yash: ಬಾಲಿವುಡ್‌ಗೆ ಹೋಗ್ತಾರಾ ರಾಕಿ ಭಾಯ್​? ಮುಂಬೈನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ ಯಶ್!

ನಟ ಯಶ್​

ನಟ ಯಶ್​

ರಾಕಿಭಾಯ್​ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್, ಬಾಲಿವುಡ್ ಸಿನಿಮಾ ಮಾಡ್ತಾರಾ ಅಥವಾ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಲು ಬಂದ್ರಾ ಎನ್ನುವ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ಸಿನಿಮಾದ (KGF Movie) ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ (Rocking Star Yash)​ ಇನ್ನೂ ತಮ್ಮ ಮುಂದಿನ ಪ್ರಾಜೆಕ್ಟ್​ ಘೋಷಿಸಿಲ್ಲ. ಇದೀಗ ಮುಂಬೈನಲ್ಲಿ ನಟ ಯಶ್​ ಕಾಣಿಸಿಕೊಂಡಿದ್ದಾರೆ. ರಾಕಿಭಾಯ್​  ಮುಂಬೈನಲ್ಲಿ (Mumbai) ರಾಕಿಭಾಯ್ ನೋಡಿದ ಅಭಿಮಾನಿಗಳು ನಟ ಬಾಲಿವುಡ್​ ಸಿನಿಮಾ (Bollywood Movie) ಮಾಡ್ತಿದ್ದಾರಾ ಎಂದು ಪ್ರಶ್ನೆ ಹುಟ್ಟಿಕೊಂಡಿತ್ತು.


ಮುಂಬೈನಲ್ಲಿ ರಾಕಿಂಗ್ ಸ್ಟಾರ್ ಯಶ್​


ಯಶ್, ಬಾಲಿವುಡ್ ಸಿನಿಮಾ ಮಾಡ್ತಾರಾ ಅಥವಾ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಲು ಬಂದ್ರಾ ಎನ್ನುವ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಜಾಹಿರಾತುವೊಂದರಲ್ಲಿ ನಟಿಸಲು ಯಶ್ ಮುಂಬೈಗೆ ಬಂದಿದ್ದಾರೆ. ಹೊಸ ಬ್ರ್ಯಾಂಡ್‌ನ ಪ್ರಮೋಟ್ ಮಾಡಲು ಸಾಥ್ ನೀಡ್ತಿದ್ದಾರೆ. 




ನಾಯಕ ಪಟ್ಟ ಕೊಟ್ಟ 'ಮೊಗ್ಗಿನ ಮನಸ್ಸು'


​ಸೀರಿಯಲ್​ ಗಳಲ್ಲಿ ಅಭಿನಯಿಸುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್​, 2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್​ ವುಡ್​ಗೆ ಎಂಟ್ರಿ ಕೊಟ್ರು, ಬಳಿಕ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಯಶ್​ ಪೂರ್ಣ ಪ್ರಮಾಣದ ನಾಯಕ ನಟನಾದ್ರು. ಈ ಚಿತ್ರದ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. ಯಶ್​ ಪತ್ನಿ ರಾಧಿಕಾ ಪಂಡಿತ್​ ಅವರೇ ಯಶ್ ಮೊದಲ ಸಿನಿಮಾದ ನಾಯಕಿರಾಗಿದ್ರು.


yash
ರಾಕಿಂಗ್ ಸ್ಟಾರ್ ಯಶ್


ಬಿಗ್​ ಬ್ರೇಕ್ ಕೊಟ್ಟ ಸಿನಿಮಾಗಳು


2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ರಾಕಿಂಗ್ ಸ್ಟಾರ್ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ನಿರ್ಮಿಸಿತು.


ಇದನ್ನೂ ಓದಿ: Puneeth Rajkumar Road: 'ದೊಡ್ಮನೆ ದೊರೆ'ಯ 'ಹಾದಿ'ಯಲ್ಲಿ ನಡೆಯೋಣ ಇನ್ನು, ಉದ್ಘಾಟನೆಯಾಯ್ತು ಪುನೀತ್ ರಾಜ್‌ಕುಮಾರ್ ರಸ್ತೆ


ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!


2018 ಡಿಸೆಂಬರ್‌ ನಲ್ಲಿ ತೆರೆಕಂಡ ಯಶ್​ ಚಿತ್ರ, ಕೆಜಿಎಫ್​ ಸಿನಿಮಾ ಬಾಲಿವುಡ್, ಟಾಲಿವುಡ್​ನಲ್ಲೂ ಕಮಾಲ್​ ಮಾಡಿತು. ಬಾಲಿವುಡ್​ ಮಂದಿ ಕೂಡ ಕನ್ನಡದ ರಾಕಿ ಭಾಯ್​ಗೆ ಜೈ ಎಂದ್ರು. ರಿಲೀಸ್ ಆದ 5 ದಿನದಲ್ಲಿ ಕೆಜಿಎಫ್​ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಸ್ಯಾಂಡಲ್​ವುಡ್​ ಮಾತ್ರವಲ್ಲ ಬಾಲಿವುಡ್​ ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆಯಿತು.


​ಪ್ಯಾನ್​ ಇಂಡಿಯಾ ಸ್ಟಾರ್ ಯಶ್​


ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್​ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್​ ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆದ್ರು. ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು