ಇಂದು ರಾಜ್ಯಾದ್ಯಂತ KGF 2 ಅಬ್ಬರ ಶುರು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ರಾಕಿ ಬಾಯ್ ಆರ್ಭಟ

ನಟ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2 (KGF Chapter 2) ಚಿತ್ರ ಇಂದು ಪ್ರಪಂಚದಾತ್ಯಂತ ಬಿಡುಗಡೆಯಾಗಿದೆ.

ಕೆಜಿಎಫ್ 2

ಕೆಜಿಎಫ್ 2

  • Share this:
ನಟ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ 2 (KGF Chapter 2) ಚಿತ್ರ ಇಂದು ಪ್ರಪಂಚದಾತ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಟ್ರೈಲರ್ (Trailer), ಟೀಸರ್ ಮತ್ತು​ ಹಾಡುಗಳಿಂದ (Songs) ಚಿತ್ರದ ಮೇಲಿನ ನಿರೀಕ್ಷೆ ಸಿನಿಪ್ರೇಮಿಗಳಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಚಿತ್ರದ ಶೋಗಳ ಟಿಕೆಟ್​ಗಳು ಎಲ್ಲಡೆ ಸೋಲ್ಡ್ ಔಟ್ ಆಗಿದ್ದು, ಚಿತ್ರದ ಮೇಳಿನ ಕ್ರೇಜ್​ ಎಷ್ಟಿದೆ ಎಂದು ತೋರುವಂತಿದೆ. ಕೆಲವಡೆ ಯಶ್ ಅಭಿಮಾನಿಗಳು ಕೆಜಿಎಫ್ 2 ಅನ್ನು ಹಬ್ಬದ ರೀತಿಯಲ್ಲಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು, ಇದರ ನಡುವೆ ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ತೆರೆಕಾಣಲಿದ್ದು, ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಇಂದು ತೆರೆಮೇಲೆ ಅಬ್ಬರಿಸಲಿದ್ದಾನೆ ರಾಕಿ ಬಾಯ್:

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್​ 2 ಇಂದು ಬಿಡುಗಡೆಯಾಗಿದೆ. ಈಗಾಗಲೇ ಟ್ರೇಲರ್​ ಮೂಲಕ ಕೆಜಿಎಫ್​ 2 ಚಿತ್ರ ನಿರೀಕ್ಷೆ ಹೆಚ್ಚಿಸಿದ್ದು, ಯಶ್​ ಅಭಿಮಾನಿಗಳು ಬಾಸ್​ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಭಾರತದಲ್ಲಿಯೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಾಕಿಂಗ್ ಸ್ಟಾರ್ ಯಶ್ ಆಭಿನಯದ ಕೆಜಿಎಫ್ ಸಿನಿಮಾ ಬಾಲಿವುಡ್ ಹಾಗೂ ಟಾಲಿವುಡ್ ಸೇರಿ ವಿಶ್ವಾದ್ಯಂತ ದೊಡ್ಡ ಮಟ್ಟದ ಹವಾ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿತ್ತು.

10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಮೇಲೆ ರಾಕಿ ಬಾಯ್ ದರ್ಶನ:

ಇಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ಕೆಜಿಎಫ್ 2 ಚಿತ್ರವು 10 ಸಾವಿರಕ್ಕೂ ಹೆಚ್ಚಿನ ಬೆಳ್ಳಿತೆರೆಯ ಮೇಲೆ ತೆರೆಕಾಣಲಿದೆ. ಈ ಮೂಲಕ ಬಿಡುಗಡೆ ವಿಚಾರದಲ್ಲೂ ದಾಖಲೆ ಬರೆದಿದ್ದಾರೆ ರಾಕಿ ಬಾಯ್. ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ಕೆಜಿಎಫ್-2 ತೆರೆಕಾಣಲಿದ್ದು, ಭಾರತದಲ್ಲಿಯೇ 6000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: KGF - 2 ಜೊತೆ ಬಿಡುಗಡೆ ಆಗುತ್ತಿದೆ ಕಾಂತಾರಾ, ರಾಘವೇಂದ್ರ ಸ್ಟೋರ್ಸ್ ಚಿತ್ರದ ಟೀಸರ್, ಏನಿದು ಹೊಂಬಾಳೆ ಫಿಲ್ಮಂ ಹೊಸ ಫ್ಲಾನ್?

ಉಳಿದಂತೆ ಉತ್ತರ ಭಾರತದಲ್ಲಿ 4000 ಸ್ಕ್ರೀನ್ಗಳಲ್ಲಿ, ಕರ್ನಾಟಕದಲ್ಲಿ 550 ಥಿಯೇಟರ್ಗಳಲ್ಲಿ, ತಮಿಳುನಾಡಿನಲ್ಲಿ 350 ಅಧಿಕ ಸ್ಕ್ರೀನ್, ಕೇರಳ 400 ಚಿತ್ರಮಂದಿರದಲ್ಲಿ , ಆಂದ್ರ ಮತ್ತು ತೆಲಂಗಾಣದಿಂದ 1 ಸಾವಿರ ಸ್ಕ್ರೀನ್ ಮತ್ತು ಹೊರ ದೇಶಗಳಲ್ಲಿ 4000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿದೆ. ಈ ಮೂಲಕ ಕೆಜಿಎಫ್-2 ಬಿಡುಗಡೆಯಲ್ಲಿ ರಾಕಿ ಮತ್ತೊಂದು ದಾಖಲೆ ಬರೆದಿದ್ದಾರೆ.

ವಿದೇಶದಲ್ಲಿ ಜೋರಾಗಿದೆ ಕೆಜಿಎಫ್ 2 ಹವಾ:

ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. 75 ದೇಶಗಳಲ್ಲಿ ಕೆಜಿಎಫ್ ಚಾಪ್ಟರ್- 2 ರಿಲೀಸ್ ಆಗುತ್ತಿದೆ. ಯೂರೋಪ್ ರಾಷ್ಟ್ರಗಳು, ಅಮೆರಿಕಾ, ಯುಎಇ, ಗ್ರೀಸ್, ಸ್ವಿಟ್ಜರ್ಲ್ಯಾಂಡ್, ದುಬೈ, ಕುವೈತ್, ರಷ್ಯಾ ಸೇರಿದಂತೆ 75ಕ್ಕೂ ಅಧಿಕ ದೇಶಗಳಲ್ಲಿ ಚಿತ್ರವು ಬಿಡುಗಡೆಯಾಗಿದೆ. ಇದರಲ್ಲಿಯೂ ದಾಖಲೆ ಬರೆದಿರುವ ಕೆಜಿಎಪ್, ಭಾರತದಲ್ಲೇ ಮೊದಲ ಬಾರಿಗೆ 75 ದೇಶಗಳಲ್ಲಿ ಒಂದು ಸಿನಿಮಾ ತೆರೆಗೆಕಾಣುತ್ತಿದೆ. ಅಲ್ಲದೇ ವಿಶೇಷ ಎಂಬಂತೆ ಬೇರೆ ದೇಶಗಳಲ್ಲಿ 5 ಭಾಷೆಗಳಲ್ಲೂ ಕೆಜಿಎಫ್-2 ರಿಲೀಸ್ ಆಗಿದೆ. ಇನ್ನು, ವಿದೇಶಗಳಲ್ಲಿ ಕಳೆದ ರಾತ್ರಿಯೇ ಪ್ರೀಮಿಯರ್ ಶೋ ಆರಂಭವಾಗಿದೆ. ಅಲ್ಲದೇ ವಿದೇಶದ ಕಾಲಮಾನದ ಪ್ರಕಾರ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Pan Indian ಸ್ಟಾರ್ ಅಂತ ಕರೆದ್ರೆ ಇನ್ನೂ ಹೆಚ್ಚು ಪ್ರೀತಿ ಗಳಿಸಿದ್ದೇನೆ ಎಂದರ್ಥ: ನಟ ಯಶ್

ಕೆಜಿಎಫ್ 2 ಜೊತೆ ಕನ್ನಡದ ಮತ್ತೆರಡು ಚಿತ್ರದ ಟೀಸರ್ ಬಿಡುಗಡೆ:

ಕೆಜಿಎಫ್ ಚಿತ್ರದ ಜೊತೆ ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಮತ್ತು ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಕಳೆದ ರಾತ್ರಿ 10:45ಕ್ಕೆ ಟೀಸರ್ ಬಿಡುಗಡೆಯಾಗಿದೆ.

ಕೆಜಿಎಫ್ ನಲ್ಲಿ ಇದೆ ದೊಡ್ಡ ತಾರಾಬಳಗ:

ಕೆಜಿಎಫ್ 2 ಚಿತ್ರ ಮಾತ್ರವಲ್ಲದೇ ತಾರಾಬಳಗದಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ಇದೆ. ಪ್ರಕಾಶ್ ರಾಜ್, ರವೀನಾ ಟಂಡನ್, ಸಂಜಯ್ ಧತ್ ಸೇರಿಂದಂತೆ ದೊಡ್ಡ ಸ್ಟಾರ್​ ಕಾಸ್ಟ್ ಗಳೇ ತುಂಬಿ ತುಳುಕುತ್ತಿದೆ.

ಇನ್ನು, ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಭುವನ್ ಗೌಡ ಕ್ಯಾಮಾರಾ ಕೈ ಚಳಕ ಚಿತ್ರಕ್ಕಿದೆ. ಸಿನಿಮಾಗೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ.
Published by:shrikrishna bhat
First published: