ನೆರೆರಾಜ್ಯದಲ್ಲಿ ರಾಕಿ ಭಾಯ್ ಅಪ್ಪಟ ಫ್ಯಾನ್ಸ್: ಅವರ ಮಹತ್ಕಾರ್ಯವೇನು ಗೊತ್ತಾ?

Rocking Star Yash: ಸಿನಿ ತಾರೆಯರು ಎಂದ ಕೂಡಲೇ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅದರಂತೆ ಯಶ್​ ಕೂಡ ಕೆಜಿಎಫ್​ ಚಾಪ್ಟರ್​1ರ ನಂತರ ಕೇರಳ, ತಮಿಳುನಾಡು, ಮುಂಬೈ ಹೀಗೆ ದೇಶದ ನಾನಾ ಭಾಗಗಳಲ್ಲಿ ಬಹು ಸಂಖ್ಯೆಯ ಅಭಿಮಾನಿಗಳುನ್ನು ಹೊಂದಿದ್ದಾರೆ.

ಯಶ್​

ಯಶ್​

 • Share this:
  ರಾಕಿಂಗ್ ಸ್ಟಾರ್​ ಯಶ್​ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ರಾಕಿ ಬಾಯ್​ ಅಭಿಮಾನಿಗಳಿದ್ದಾರೆ. ಅವರ ಹೆಸರಿನಡಿ ಸಂಘವನ್ನು ನಿರ್ಮಿಸಿ ಒಂದೊಳ್ಳೆ ಕಾರ್ಯವನ್ನು ಮಾಡುತ್ತಿದ್ದಾರೆ. ಅದರಂತೆ ತಮಿಳುನಾಡಿನಲ್ಲಿ ಯಶ್​ ಅಭಿಮಾನಿಗಳು ಮಹತ್ತರವಾದ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಆ ಕಾರ್ಯವೇನೆಂದು ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!.

  ಸಿನಿ ತಾರೆಯರು ಎಂದ ಕೂಡಲೇ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅದರಂತೆ ಯಶ್​ ಕೂಡ ಕೆಜಿಎಫ್​ ಚಾಪ್ಟರ್​1ರ ನಂತರ ಕೇರಳ, ತಮಿಳುನಾಡು, ಮುಂಬೈ ಹೀಗೆ ದೇಶದ ನಾನಾ ಭಾಗಗಳಲ್ಲಿ ಬಹು ಸಂಖ್ಯೆಯ ಅಭಿಮಾನಿಗಳುನ್ನು ಹೊಂದಿದ್ದಾರೆ.

  ಯಶ್​ ಹುಟ್ಟುಹಬ್ಬದಂದು ನೆರೆಯ ರಾಜ್ಯದ ಅಭಿಮಾನಿಗಳು ಅವರ ಮನೆ ಎದುರು ದೌಡಾಯಿಸಿ ಶುಭಾಶಯ ಕೋರುವುದನ್ನು ಕಾಣಬಹುದು. ಅಷ್ಟು ಮಾತ್ರವಲ್ಲದೆ, ತಮ್ಮ ನೆಚ್ಚಿನ ನಟನ ಹೆಸರನ್ನಿಟ್ಟುಕೊಂಡು ಅಭಿಮಾನಿ ಸಂಘವನ್ನು ನಿರ್ಮಿಸಿ ಅದರಿಂದ ಮಹಾಕಾರ್ಯವನ್ನು ಮಾಡುತ್ತಿರುತ್ತಾರೆ. ಅದರಂತೆ ತಮಿಳುನಾಡಿನ ಧರ್ಮಪುರಿಯಲ್ಲಿನ ಯಶ್​ ಅಭಿಮಾನಿ ಸಂಘವೊಂದು ಪ್ರತಿ ತಿಂಗಳ 8ನೇ ತಾರೀಕು ಬಡವರಿಗೆ ಅನ್ನದಾನ ಮಾಡುತ್ತಾ ಬಂದಿದೆ.

  ಹೌದು. ಯಶ್​ ಹುಟ್ಟಿದ ದಿನಾಂಕ 8. ಹಾಗಾಗಿ ಪ್ರತಿ ತಿಂಗಳ 8ರಂದು ಬಡಜನರ ಹಸಿವನ್ನು ನೀಗಿಸುವ ಕೆಲಸವನ್ನು ಈ ಸಂಘ ಮಾಡುತ್ತಾ ಬಂದಿದೆ. ಇವರ ಮಹಾತ್ಕಾರ್ಯದಿಂದ ಅನೇಕ ಬಡಜನರ ಹಸಿವು ನೀಗಿದೆ.

  ಯಶ್​ ಮಾತ್ರವಲ್ಲ, ಕನ್ನಡದ ಅನೇಕ ನಟರು ವಿವಿಧ ರಾಜ್ಯಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳು ಕೂಡ ಅವರ ಹೆಸರಿನಲ್ಲಿ ಅನ್ನದಾನ, ಬಟ್ಟೆದಾನ, ರಕ್ತದಾನ, ಆಶ್ರಯ ನೀಡುವಂತಹ ಕೆಸಲವನ್ನು ಮಾಡುತ್ತಿದ್ದಾರೆ. ಆದರೆ ಕೆಲವು ವಿಚಾರಗಳು ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗುತ್ತದೆ.

  ಇನ್ನು ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಜುಲೈ 16ರಂದು ತೆರೆ ಮೇಲೆ ಬರಲಿದೆ. ಈಗಾಗಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ದಿನ ಲೆಕ್ಕಹಾಕುತ್ತಿದ್ದಾರೆ.
  Published by:Harshith AS
  First published: