ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ (Yash Fans Request) ಬೇಸರದಲ್ಲಿ ಇದ್ದಾರೆ. ಇವರ ಬೇಸರಕ್ಕೆ ಕಾರಣ ಬೇರೆ ಏನೂ ಇಲ್ಲ. ರಾಕಿಯ ಮುಂದಿನ ಸಿನಿಮಾ ಮಾಹಿತಿ. ಇದನ್ನ (Yash Fans Waiting for Yash-19) ಕೊಡಲು ಯಾಕೆ ತಡವಾಗುತ್ತಿದೆ? ಈ ಒಂದು ಪ್ರಶ್ನೆ ಎಲ್ಲ ಅಭಿಮಾನಿಗಳನ್ನೂ ಕಾಡುತ್ತಿದೆ. ಅದಕ್ಕೇನೆ ರಾಕಿ ಭಾಯ್ ಫ್ಯಾನ್ಸ್ ರಾಂಗ್ ಆಗುತ್ತಲೇ (Radhika Pandit New Updates) ಇದ್ದಾರೆ. ತಮ್ಮ ಬೇಸರವನ್ನ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆ ಒಂದು ಬೇಸರ ರಾಧಿಕಾ ಪಂಡಿತ್ ಅವರ ಮುಂದೇನೆ ವ್ಯಕ್ತವಾಗುತ್ತಿದೆ. ತಮ್ಮ ಬೇಸರವನ್ನ (Rocking Fans Request to Radhika) ಅಭಿಮಾನಿಗಳು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಆ ಬೇಸರದ ಒಂದು ಸ್ಟೋರಿ ಇಲ್ಲಿದೆ ಓದಿ.
ಅತ್ತಿಗೆ ಮುಂದೆ ಅಣ್ಣನ ಸಿನಿಮಾ ಮಾಹಿತಿ ಕೇಳಿದ ರಾಕಿಂಗ್ ಫ್ಯಾನ್ಸ್
ರಾಧಿಕಾ ಪಂಡಿತ್ ಮೊನ್ನೆ ಮಾರ್ಚ್-7 ರಂದು ಜನ್ಮ ದಿನ ಆಚರಿಸಿಕೊಂಡಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದಾಗಲೇ ರಾಧಿಕಾ ಪಂಡಿತ್ ಫ್ಯಾಮಿಲಿ ಜೊತೆಗೆ ಫಾರೆನ್‌ನಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ಇದೇ ವೇಳೆಯಲ್ಲಿ ಒಂದಷ್ಟು ಫೋಟೋಗಳನ್ನೂ ತೆಗೆದುಕೊಂಡಿದ್ದಾರೆ. ಸ್ಪೆಷಲ್ ಜಾಗ ಅಂತ ಅಲ್ಲಿಯ ಸುಂದರ ತಾಣಗಳಲ್ಲಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹಾಗೇನೆ ಈ ಫೋಟೋಗಳು ಸ್ಯಾಂಡಲ್‌ವುಡ್ ಸಿಂಡ್ರೇಲಾ ಸೌಂದರ್ಯದ ಚಿತ್ರಣವನ್ನ ಕಟ್ಟಿಕೊಡುತ್ತವೆ.
ರಾಧಿಕಾ ಪಂಡಿತ್ ಫೋಟೋ ನೋಡಿ ಖುಷ್ ಆದ ರಾಕಿ ಫ್ಯಾನ್ಸ್
ಸ್ಯಾಂಡಲ್‌ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ತಮ್ಮ ಪ್ರತಿ ಚಟುವಟಿಕೆಯ ಫೋಟೋವನ್ನಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಅವುಗಳನ್ನ ಹಂಚಿಕೊಂಡು ಖುಷಿನೂ ಪಡ್ತಾರೆ. ಹಾಗೇನೆ ಈ ಸಲವೂ ತಮ್ಮ ಫಾರೆನ್ ಟ್ರಿಪ್ ಫೋಟೋಗಳನ್ನ ಈಗ ಶೇರ್ ಮಾಡಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಅವರು ಫೋಟೋ ಶೇರ್ ಮಾಡಿದ್ದಾರೆ. ಇವುಗಳನ್ನ ನೋಡಿದ ಅನೇಕರು ರಾಧಿಕಾ ಅವರನ್ನ ತಮ್ಮದೇ ರೀತಿಯಲ್ಲಿ ಬಣ್ಣಿಸಿದ್ದಾರೆ. ಆದರೆ ಇದೇ ಕಾಮೆಂಟ್ ಬಾಕ್ಸ್‌ನಲ್ಲಿ ಇನ್ನೂ ಒಂದಷ್ಟು ಕಾಮೆಟ್ಸ್ ಇವೆ. ಆ ಕಾಮೆಂಟ್ ರಾಕಿ ಭಾಯ್ ಯಶ್-19ನೇ ಸಿನಿಮಾದ ಕುರಿತು ಆಗಿದೆ.
ಅತ್ತಿಗೆ ಮುಂದೆ ಅಳಲು ತೋಡಿಕೊಂಡ ರಾಕಿ ಭಾಯ್ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಬೇಸರದಲ್ಲಿ ಇದ್ದಾರೆ. ಇವರ ಬೇಸರಕ್ಕೆ ಕಾರಣ ಬೇರೆ ಏನೋ ಅಲ್ಲ. ರಾಕಿ ಭಾಯ್ ಮುಂದಿನ ಸಿನಿಮಾ ಕುರಿತು ಆಗಿದೆ. ಅಣ್ಣನ ಮುಂದಿನ ಸಿನಿಮಾ ಯಾವುದು ಅನ್ನೋದೇ ಇವರ ಒಟ್ಟು ಮಾತಿನ ತಾತ್ಪರ್ಯ ಆಗಿದೆ. ಅಭಿಮಾನಿಯ ಬೇಸರದ ಸಾಲುಗಳು ಇಲ್ಲಿವೆ ಓದಿ.
ಅತ್ತಿಗೆ ಯಶ್-19 ಸಿನಿಮಾ ಅಪ್‌ಡೇಟ್ಸ್ ಕೊಡಿ, ಇಲ್ಲ ಅಂದ್ರೆ ಸ್ಟ್ರೈಕ್ ಮಾಡುತ್ತೀವಿ ಅಂತ ಅಭಿಮಾನಿಯೊಬ್ಬ ರಾಧಿಕಾ ಅವರ ಫೋಟೋದ ಕಾಮೆಂಟ್ ಬಾಕ್ಸ್‌ಲ್ಲಿ ಪ್ರೀತಿಯಿಂದಲೇ ಹೇಳಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ರಾಕಿ ಭಾಯ್ ಮುಂದಿನ ಸಿನಿಮಾಗೋಸ್ಕರ ತುಂಬಾನೇ ಕಾಯುತ್ತಿದ್ದಾರೆ. ಇವರ ಕಾಯುವಿಕೆಯ ಸಹನೆ ಕಟ್ಟೆ ಒಡೆಯುತ್ತಲೂ ಇದೆ. ಹಾಗಾಗಿಯೇ ರಾಧಿಕಾ ಪಂಡಿತ್ ಅವರ ಫೋಟೋದ ಕಾಮೆಂಟ್ ಬಾಕ್ಸ್‌ನಲ್ಲಿ ಇನ್ನಿಲ್ಲದಂತೆ ಯಶ್-19 ಸಿನಿಮಾ ಮಾಹಿತಿ ಬೇಕು ಅಂತ ಕೇಳುತ್ತಿದ್ದಾರೆ.
ಏಪ್ರಿಲ್-14 ರಂದು ರಾಕಿ ಭಾಯ್ ಹೊಸ ಸಿನಿಮಾ ಅನೌನ್ಸ್?
ಆದರೆ ಇದಕ್ಕೆ ರಾಧಿಕಾ ಪಂಡಿತ್ ಏನೂ ರಿಯಾಕ್ಟ್ ಮಾಡಿಲ್ಲ. ಯಶ್ ಕೂಡ ಈ ಬಗ್ಗೆ ಎಲ್ಲೂ ಇನ್ನೂ ಏನೂ ಹೇಳಿಕೊಂಡಿಲ್ಲ. ಆದರೆ ಏಪ್ರಿಲ್-14 ರಂದು ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾದ ಅನೌನ್ಸ್‌ಮೆಂಟ್ ಆಗುತ್ತದೆ. ಆ ದಿನವೇ ಎಲ್ಲ ರಿವೀಲ್ ಆಗುತ್ತದೆ ಅನ್ನುವ ನ್ಯೂಸ್ ಇದೀಗ ಹರಿದಾಡುತ್ತಿದೆ.
ಇದನ್ನೂ ಓದಿ: Hoysala Movie: ಡಾಲಿ ಧನಂಜಯ್ಗೆ ಸಿಕ್ತು ಸೂಪರ್ ಗಿಫ್ಟ್, ಪಾರ್ಟಿ ಕೇಳಿದ ರಮ್ಯಾ
ಇನ್ನೂ ಒಂದು ವಿಶೇಷ ಏನಂದ್ರೆ, ಏಪ್ರಿಲ್-14 ರಂದು ಕೆಜಿಎಫ್-2 ಸಿನಿಮಾ ರಿಲೀಸ್ ಆಗಿತ್ತು. ಸೂಪರ್ ಹಿಟ್ ಆಗಿ ಎಲ್ಲರ ದಿಲ್ ಕದ್ದಿತ್ತು. ಹಾಗೇನೆ ಏಪ್ರಿಲ್-14 ರಂದೇ ರಾಕಿ ಭಾಯ್ ಮುಂದಿನ ಸಿನಿಮಾ ಅನೌನ್ಸ್ ಆಗುತ್ತದೆ ಅನ್ನೋ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ