ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ. ಎಲ್ಲೆಲ್ಲೂ ವಿಘ್ನ ವಿನಾಯಕನ ಆರಾಧನೆಯ ಸಂಭ್ರಮ ಮನೆ ಮಾಡಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಈ ಬಾರಿ ಪುಟ್ಟ ಗೌರಿಯೊಂದಿಗೆ ಹಬ್ಬದ ಖುಷಿಯಲ್ಲಿದ್ದಾರೆ.
ಈ ಹಿಂದೆ ನನಗೊಂದು ಪುಟ್ಟ ಫ್ರೆಂಡ್ ಬರಲಿದ್ದಾರೆಂದು..ನಮ್ಮಪ್ಪ ಸಖತ್ ಸ್ಪೀಡ್ ಆಗಿದ್ದಾರೆಂದು ಐರಾ ಹೆಸರಿನಲ್ಲಿ ಪೋಸ್ಟ್ ಮಾಡಿ ಎಲ್ಲರ ಮನಗೆದ್ದ ರಾಕಿ ಭಾಯ್ ಈ ಸಲನೂ ಮೋಡಿ ಮಾಡಿದ್ದಾರೆ.
ಹಬ್ಬದ ಸಂಭ್ರಮದಲ್ಲಿರುವ ಯಶ್ ಕುಟುಂಬದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು. ಅಪ್ಪ-ಅಮ್ಮನ ಸೆಲ್ಫಿಗೆ ಪುಟ್ಟ ಪುಟಾಣಿ ಐರಾ ಕೂಡ ಸಾಥ್ ನೀಡಿದ್ದರು. ಆದರೆ ಐರಾ ನೀಡಿದ ಲುಕ್ ಮಾತ್ರ ತುಸು ಭಿನ್ನವಾಗಿತ್ತು. ಅದು ಯಾವ ರೀತಿಯಿತ್ತು ಎಂದರೆ...ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ ಎಂಬಾರ್ಥದಲ್ಲಿ.
ಯಶ್ ಕೂಡ ಅದನ್ನೇ ಕ್ಯಾಪ್ಷನ್ ಮಾಡಿ ಕುಟುಂಬದ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಹಾಗೆಯೇ ಎಲ್ಲರಿಗೂ ನಿಮ್ಮ ಪುಟ್ಟ ಗೌರಿಯಿಂದ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ. ರಾಕಿಂಗ್ ಜೋಡಿಯ ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಪುಟ್ಟ ಗೌರಿಗೂ ಕೂಡ ಹಬ್ಬದ ಶುಭಾಶಯಗಳು ಹರಿದು ಬರುತ್ತಿದೆ.
Wondering if my Dad will have more modakas than me 🤔 Anyway.. wishing u all a very Happy Ganesha Habba from your putta Gowri 😊
ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ🤔 ..
ನಿಮ್ಮ ಈ ಪುಟ್ಟ ಗೌರಿಯಿಂದ
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು pic.twitter.com/BmgphbR8VT
— Yash (@TheNameIsYash) September 2, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ