ಪ್ರೀತಿಯ ಮಡದಿಗಾಗಿ ಕೈಯ್ಯಾರೆ ಅಡುಗೆ ಮಾಡಿ ಬಡಿಸಿದ ರಾಕಿಂಗ್​ ಸ್ಟಾರ್​ ಯಶ್​..!

news18
Updated:October 11, 2018, 6:01 PM IST
ಪ್ರೀತಿಯ ಮಡದಿಗಾಗಿ ಕೈಯ್ಯಾರೆ ಅಡುಗೆ ಮಾಡಿ ಬಡಿಸಿದ ರಾಕಿಂಗ್​ ಸ್ಟಾರ್​ ಯಶ್​..!
news18
Updated: October 11, 2018, 6:01 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಒಂದು ಕಡೆ ದುಬಾರಿ ಬಜೆಟ್​ ಹಾಗೂ ಐದು ಭಾಷೆಗಳಲ್ಲಿ ತೆರೆ ಕಾಣಲಿರುವ 'ಕೆಜಿಎಫ್​' ಸಿನಿಮಾ. ಮತ್ತೊಂದು ಕಡೆ ವಂಶದ ಕುಡಿಯನ್ನು ಹೊತ್ತ ಹೆಂಡತಿ ರಾಧಿಕಾ. ಹೀಗೆ ಡಬಲ್​ ಖುಷಿಯಲ್ಲಿರುವ ನಟ ಯಶ್​ ಈಗ ಪತ್ನಿಯ ಬಯಕೆಗಳನ್ನು ಒಂದೊಂದಾಗಿ ತೀರಿಸುತ್ತಿದ್ದಾರೆ.

ಹೌದು ಕಳೆದ ಎರಡೂವರೆ ವರ್ಷಗಳಿಂದ ಸಿನಿಮಾಗಾಗಿ ಬಿಟ್ಟಿದ್ದ ಗಡ್ಡವನ್ನು ರಾಧಿಕಾಗಾಗಿ ತೆಗೆಸಿದ್ದರು ಯಶ್​.  ಅಲ್ಲದೆ ಇತ್ತೀಚೆಗೆ ಮಡಿಯೊಂದಿಗೆ ವಿದೇಶಕ್ಕೆ ಪ್ರವಾಸಕ್ಕೂ ತೆರೆಳಿದ್ದರು. ರಾಧಿಕಾ ಪ್ರವಾಸದ ಫೋಟೋಗಳನ್ನು ಒಂದೊಂದಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಿದ್ದರು.

ಈಗ ರಾಧಿಕಾರ ಬಯಕೆಯಂತೆ ಯಶ್​ ತಮ್ಮ ಕೈಯ್ಯಾರೆ ಅಡುಗೆ ಮಾಡಿ ಉಣಬಡಿಸಿದ್ದಾರೆ. ಈ ಮೂಲಕ ಅಭಿನಯಕ್ಕೂ ಜೈ, ಅಡುಗೆಗೂ ಸೈ ಎನಿಸಿಕೊಂಡಿದ್ದಾರೆ ಯಶ್​. ಗರ್ಭಿಣಿ ಹೆಂಡತಿಗೆ ರುಚಿಕರ ಖಾದ್ಯಗಳನ್ನು ಮಾಡಿ ಬಡಿಸಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿಕೊಂಡಿರುವ ರಾಧಿಕಾ, ತನಗಾಗಿ ಕಷ್ಟಪಟ್ಟು ಅಡುಗೆ ಮಾಡಿದ ರಾಕಿಂಗ್​ ಸ್ಟಾರ್​ ಅಡುಗೆ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ.


Loading...

 
View this post on Instagram
 

When my husband dint want to be left behind and tried his hands at cooking for me... 😜 Not a bad Chef after all.. Mr. Rocking star!! #radhikapandit #nimmaRP


A post shared by Radhika Pandit (@iamradhikapandit) on


ತಲೆಗೆ  ಬಾಣಸಿಗನ ಟೋಪಿ ತೊಟ್ಟು, ಯಶ್ ರುಚಿಯಾದ ಅಡುಗೆ ಮಾಡಿದ್ಪದಾರೆ. ಪ್ರೀತಿಯ ಗಂಡ ಅಡುಗೆ ಮಾಡುತ್ತಿರುವ ದೃಶ್ಯವನ್ನು ಪತ್ನಿ ರಾಧಿಕಾ ಪಂಡಿತ್ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯೇ ಗರ್ಭಿಣಿಯ ಬಯಕೆ ತೀರಿಸಲು ರಾಧಿಕಾರ ಸ್ನೇಹಿತರು ಅವರಿಗೆ ಅವರಿಷ್ಟದ ಅಡುಗೆ ಮಾಡಿ ಬಡಿಸಿದ್ದರು. ಅದನ್ನೂ ರಾಧಿಕಾ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. 
View this post on Instagram
 

When my dear friends cooked for me 😍 Loving the pampering!! #radhikapandit #nimmaRP


A post shared by Radhika Pandit (@iamradhikapandit) on
First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...