HOME » NEWS » Entertainment » ROCKING STAR YASH CONDEMN GOVERNMENT DECISION ABOUT 50 PER CENT SEATING IN THEATERS LG

Rocking Star Yash: ಹಸಿವಿಗಿಂತ ದೊಡ್ಡ ಖಾಯಿಲೆ ಇನ್ನೊಂದಿಲ್ಲ; ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ; ನಟ ಯಶ್ 

ಜೊತೆಗೆ, ಚಿತ್ರರಂಗದ ಮೇಲಿನ ಹಠಾತ್​ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶವಿದೆ. ಆದರೆ ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ನಿರ್ಬಂಧನೆಗಳಿಗೆ ಚಿತ್ರರಂಗ ಬಲಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

news18-kannada
Updated:April 3, 2021, 6:31 PM IST
Rocking Star Yash: ಹಸಿವಿಗಿಂತ ದೊಡ್ಡ ಖಾಯಿಲೆ ಇನ್ನೊಂದಿಲ್ಲ; ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ; ನಟ ಯಶ್ 
ನಟ ಯಶ್
  • Share this:
ಬೆಂಗಳೂರು(ಏ.03): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆ, ಸರ್ಕಾರವು ಸೋಂಕು ನಿಯಂತ್ರಣಕ್ಕಾಗಿ ಥಿಯೇಟರ್​​ಗಳಲ್ಲಿ ಶೇ.50ರಷ್ಟು ಸೀಟಿಂಗ್​ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗವೇ ವಿರೋಧ ವ್ಯಕ್ತಪಡಿಸಿದೆ. ಅದರಲ್ಲೂ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್​ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಗುರುವಾರ ತಾನೇ ಯುವರತ್ನ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸರ್ಕಾರ ಏಕಾಏಕಿ ಥಿಯೇಟರ್​ಗಳಲ್ಲಿ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಮಾಡಿದೆ. ಇದರಿಂದ ಬಹಳ ತೊಂದರೆಯಾಗುತ್ತದೆ ಎಂದು ಚಿತ್ರತಂಡ ಹೇಳುತ್ತಿದೆ.

ಇಂದು ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪುನೀತ್ ಮಾತ್ರವಲ್ಲದೇ, ರೋರಿಂಗ್ ಸ್ಟಾರ್ ಮುರುಳಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ರಾಕಿಂಗ್​ ಸ್ಟಾರ್​ ಯಶ್​​ ಕೂಡ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದಾರೆ.

Encounter: ಛತ್ತೀಸ್​ಗಢದ ಬಿಜಾಪುರ್​ನಲ್ಲಿ ನಕ್ಸಲ್​ ಎನ್​ಕೌಂಟರ್​; 8 ಮಂದಿ ಸೈನಿಕರು ಮೃತ

ಟ್ವೀಟ್​ ಮಾಡಿರುವ ರಾಕಿಂಗ್​ ಸ್ಟಾರ್ ಯಶ್, ಸರ್ಕಾರದ ಧೋರಣೆ ಖಂಡನೀಯ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಖಾಯಿಲೆ ಮತ್ತೊಂದಿಲ್ಲ. ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು, ಮುಳುವಾಗಬಾರದು ಎಂದು ಹೇಳಿದ್ದಾರೆ.


ಜೊತೆಗೆ, ಚಿತ್ರರಂಗದ ಮೇಲಿನ ಹಠಾತ್​ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶವಿದೆ. ಆದರೆ ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ನಿರ್ಬಂಧನೆಗಳಿಗೆ ಚಿತ್ರರಂಗ ಬಲಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಹೀಗೆ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ಆದೇಶದ ವಿರುದ್ಧ ನಟ ಯಶ್ ಆಕ್ರೋಶ ಹೊರಹಾಕಿದ್ದಾರೆ.

ಇನ್ನು, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್​ ಸಹ ಸರ್ಕಾರದ ಈ ಧೋರಣೆಯನ್ನು ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ನಮ್ಮ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದನ್ನು ಸರ್ಕಾರ ಬಗೆಹರಿಸುವ ನಿರೀಕ್ಷೆಯಿದೆ. ಥಿಯೇಟರ್​ಗಳಲ್ಲಿ ಎಲ್ಲಾ ಕಠಿಣ ಕ್ರಮಗಳನ್ನೂ ಪಾಲಿಸಲಾಗುವುದು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಮುಖ್ಯಮಂತ್ರಿಗಳು ಥಿಯೇಟರ್ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Published by: Latha CG
First published: April 3, 2021, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories